ETV Bharat / sports

ಐಪಿಎಲ್‌: ಒಂದೇ ಇನ್ನಿಂಗ್ಸ್​​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಬಗ್ಗೆ ಗೊತ್ತೇ?

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಕೇವಲ ಎರಡ್ಮೂರು ಓವರ್​​ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿರುವ ಅನೇಕ ಕ್ರಿಕೆಟಿಗರು​ ನಮ್ಮ ಮುಂದಿದ್ದಾರೆ. ಅಂಥ ಗಟ್ಟಿಕುಳಗಳ ಬಗೆಗಿನ ಒಂದಿಷ್ಟು ಮಾಹಿತಿ..

list of highest sixers in ipl games in one innings

author img

By

Published : Mar 18, 2022, 5:13 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನ 15ನೇ ಆವೃತ್ತಿ ಆರಂಭಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು, ಮಾರ್ಚ್​​ 26ರಿಂದ ಹೊಡಿಬಡಿ ಆಟಕ್ಕೆ ಚಾಲನೆ ಸಿಗಲಿದೆ. ಈ ಸಲದ ಐಪಿಎಲ್​​ ಭಾರತದಲ್ಲೇ ನಡೆಯಲಿರುವ ಕಾರಣ ಕ್ರೀಡಾಭಿಮಾನಿಗಳು ಮೈದಾನಕ್ಕೆ ತೆರಳಿ ನೆಚ್ಚಿನ ಕ್ರಿಕೆಟಿಗರ​ ಆಟ ಕಣ್ತುಂಬಿಕೊಳ್ಳಬಹುದು.

ಕೇವರ ಎರಡ್ಮೂರು ಓವರ್​ಗಳಲ್ಲಿ ಪಂದ್ಯದ ಗತಿ ಬದಲಿಸುವ ಆಟಗಾರರು ಪ್ರತಿಯೊಂದು ತಂಡದಲ್ಲೂ ಇರುತ್ತಾರೆ. ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಸಿಕ್ಸರ್​​ ಸಿಡಿಸುವ ಪ್ಲೇಯರ್ಸ್​ಗೆ ತುಸು ಹೆಚ್ಚಿನ ಬೇಡಿಕೆ. ಈ ಹಿಂದೆ ಕೂಡ ಒಂದೇ ಇನ್ನಿಂಗ್ಸ್​​ನಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟಿರುವ ಅನೇಕ ಉದಾಹರಣೆಗಳಿವೆ.

ಕ್ರಿಸ್​ ಗೇಲ್​, ಎಬಿ ಡಿವಿಲಿಯರ್ಸ್​​ ಈಗಾಗಲೇ ಇಂತಹ ಸಾಧನೆಗೆ ಪಾತ್ರರಾಗಿದ್ದು, ಈ ಸಲದ ಐಪಿಎಲ್​​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​, ಕೀರನ್ ಪೊಲಾರ್ಡ್, ರಿಷಭ್ ಪಂತ್​, ಹೋಲ್ಡರ್​​​ ಸೇರಿದಂತೆ ಅನೇಕ ಪ್ಲೇಯರ್ಸ್​ ಇದೇ ರೀತಿಯ ಸಾಧನೆ ತೋರುವ ಸಾಧ್ಯತೆ ಇದೆ. ಹಾಗಾದ್ರೆ ಈ ಹಿಂದಿನ ಆವೃತ್ತಿಗಳಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಕ್ರಿಸ್ ಗೇಲ್​: ಚುಟುಕು ಕದನಕ್ಕೆ ಸಿಕ್ಕಾಪಟ್ಟೆ ಫೇಮಸ್​​ ಆಗಿರುವ ಕ್ರಿಸ್ ಗೇಲ್​ 2013ರ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 17 ಸಿಕ್ಸರ್​ ಬಾರಿಸಿದ್ದರು. ಕೇವಲ 66 ಎಸೆತಗಳಲ್ಲಿ ಅಜೇಯ 175ರನ್​ಗಳಿಕೆ ಮಾಡಿದ್ದ ಈ ಪ್ಲೇಯರ್​ ಪುಣೆ ವಾರಿಯರ್ಸ್​ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು. ಈ ಪಂದ್ಯವನ್ನು ಆರ್​ಸಿಬಿ 130ರನ್​ಗಳ ಅಂತರದಿಂದ ಗೆದ್ದಿತ್ತು.

list of highest sixers in ipl games in one innings
ಕ್ರಿಸ್‌ ಗೇಲ್

ಇದನ್ನೂ ಓದಿ: ಹೊಡೆದರೆ ಸಿಕ್ಸ್​ ಇಲ್ಲ ಅಂದ್ರೆ ಔಟ್: ಐಪಿಎಲ್​ ಚರಿತ್ರೆಯಲ್ಲೇ ಅತ್ಯಧಿಕ ಸಲ ಸೊನ್ನೆ ಸುತ್ತಿದ ವೀರರಿವರು!

ಬ್ರೆಂಡನ್​ ಮೆಕಲಂ: 2008ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಬ್ರೆಂಡನ್ ಮೆಕಲಂ ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಅಜೇಯ 158ರನ್​ಗಳಿಕೆ ಮಾಡಿದ್ದರು. ಈ ಪಂದ್ಯದಲ್ಲಿ 13 ಸಿಕ್ಸರ್​​, 10 ಬೌಂಡರಿ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.

ಬ್ರೆಂಡನ್ ಮೆಕಲಂ

ಎಬಿ ಡಿವಿಲಿಯರ್ಸ್​​​​: 2016ರಲ್ಲಿ ಗುಜರಾತ್​​ ಲಯನ್ಸ್​​​ ವಿರುದ್ಧ ಕೇವಲ 52 ಎಸೆತಗಳಲ್ಲಿ ಅಜೇಯ 129ರನ್​ಗಳಿಕೆ ಮಾಡಿದ್ದ 'ಮಿ. 360 ಬರೋಬ್ಬರಿ' 12 ಸಿಕ್ಸರ್ ಹೊಡೆದಿದ್ದರು. 2012, 15ರಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಪಂಜಾಬ್​ ವಿರುದ್ಧ ಕ್ರಿಸ್ ಗೇಲ್​ 12 ಸಿಕ್ಸರ್​ ಸಿಡಿಸಿರುವ ದಾಖಲೆ ಸಹ ಇದೆ.

ಶ್ರೇಯಸ್ ಅಯ್ಯರ್​​

ಇದರ ಜೊತೆಗೆ ಮುರಳಿ ವಿಜಯ್​, ರೆಸಲ್​, ಸನತ್ ಜಯಸೂರ್ಯ ಕೂಡ ಒಂದೇ ಇನ್ನಿಂಗ್ಸ್​​ನಲ್ಲಿ 11 ಸಿಕ್ಸರ್ ಸಿಡಿಸಿದ್ದರು. ನಂತರ ಶ್ರೇಯಸ್​​ ಅಯ್ಯರ್​, ಆ್ಯಡಂ ಗಿಲ್​ಕ್ರಿಸ್ಟ್​ ಕೂಡ ಒಂದೇ ಇನ್ನಿಂಗ್ಸ್​​ನಲ್ಲಿ 10 ಸಿಕ್ಸರ್​ ಬಾರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.