ETV Bharat / sports

ಈ ಕಾರಣದಿಂದ ವಿಂಡೀಸ್ ಪ್ರವಾಸದಿಂದ ಹಿಂದೆ ಸರಿಯಲಿರುವ ಟಾಪ್ ಆಸೀಸ್ ಕ್ರಿಕೆಟಿಗರು

author img

By

Published : Jun 9, 2021, 7:06 PM IST

ಸೆಪ್ಟೆಂಬರ್​ನಲ್ಲಿ ಐಪಿಎಲ್ ಮತ್ತೆ ಪುನಾರಂಭಗೊಳ್ಳುವುದರಿಂದ ಈ ಆಟಗಾರರು ಕೆಲವು ಸಮಯ ವಿಶ್ರಾಂತಿ ಬಯಸಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಕಮ್ಮಿನ್ಸ್​ ಐಪಿಎಲ್ ಪುನಾರಂಭವಾದರೂ ತಾವೂ ಲಭ್ಯರಾಗುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ..

ಆಸ್ಟ್ರೇಲಿಯಾ ಕ್ರಿಕೆಟಿಗರು
ಆಸ್ಟ್ರೇಲಿಯಾ ಕ್ರಿಕೆಟಿಗರು

ಸಿಡ್ನಿ: ಸತತ ಬಯೋಬಬಲ್​ನಿಂದ ಬಳಲಿರುವ ಆಸ್ಟ್ರೇಲಿಯಾದ ಟಾಪ್​ ಕ್ರಿಕೆಟಿಗರು, ಮುಂಬರುವ ವಿಂಡೀಸ್‌ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಪ್ಯಾಟ್ ಕಮ್ಮಿನ್ಸ್​, ಡೇವಿಡ್ ವಾರ್ನರ್​, ಸ್ಟೀವ್ ಸ್ಮಿತ್, ಗ್ಲೇನ್ ಮ್ಯಾಕ್ಸ್​ವೆಲ್​, ಮಾರ್ಕಸ್​ ಸ್ಟೋಯ್ನಿಸ್​, ಕೇನ್ ರಿಚರ್ಡ್ಸನ್​ ಮತ್ತು ಜೇ ರಿಚರ್ಡ್ಸನ್​ ಆಸ್ಟ್ರೇಲಿಯಾ ವೈಟ್​ಬಾಲ್ ತಂಡದಿಂದ ಹೊರ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿವೆ.

ಜುಲೈ ಮತ್ತು ಆಗಸ್ಟ್​ ತಿಂಗಳ ವೆಸ್ಟ್​ ಇಂಡೀಸ್​ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ 6 ಹೆಚ್ಚುವರಿ ಆಟಗಾರರು ಸೇರಿದಂತೆ 23 ಸದಸ್ಯರ ತಂಡವನ್ನು ಘೋಷಿಸಿದ ನಂತರ, ಸ್ಟಾರ್​ ಆಟಗಾರರು ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ವಿವಿಧ ಕ್ರಿಕೆಟಿಂಗ್ ಬಯೋಬಬಲ್ಸ್​ಗಳಲ್ಲಿ ಸಾಕಷ್ಟು ಅವಧಿಗಳನ್ನು ಕಳೆದ ನಂತರ ಏಳು ಸ್ಟಾರ್ ಆಟಗಾರರು ವಿಂಡೀಸ್ ಪ್ರವಾಸದಿಂದ ಹೊರ ಬರುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಪ್ರಸಿದ್ಧ ನೈನ್ ಮೀಡಿಯಾ ಬುಧವಾರ ವರದಿ ಮಾಡಿದೆ.

ಐಪಿಎಲ್​ ವೇಳೆ ಕೋವಿಡ್-19 ಪಾಸಿಟಿವ್ ಪಡೆದಿದ್ದ ಆಲ್​ರೌಂಡರ್​ ಈಗಾಗಲೇ ತಾವೂ ಮುಂದಿನ ಸರಣಿಗಳಿಗೆ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ. ಕಮ್ಮಿನ್ಸ್​, ಸ್ಮಿತ್ ಮತ್ತು ವಾರ್ನರ್​ 2020ರ ಐಪಿಎಲ್​ನಿಂದಲೂ ಸತತವಾಗಿ ಬಯೋಬಬಲ್​ನಲ್ಲಿದ್ದಾರೆ. ಅವರು ಐಪಿಎಲ್ ನಂತರ ತವರಿನಲ್ಲಿ ಭಾರತದ ವಿರುದ್ಧ ಸರಣಿ , ಮತ್ತೆ ಕೆಲವು ದಿನಗಳ ವಿಶ್ರಾಂತಿ ನಂತರ 2021ರ ಐಪಿಎಲ್ ಹೀಗೆ ಬಿಡುವಿಲ್ಲದ ಸಮಯವನ್ನು ಕಳೆದಿದ್ದಾರೆ.

ಸೆಪ್ಟೆಂಬರ್​ನಲ್ಲಿ ಐಪಿಎಲ್ ಮತ್ತೆ ಪುನಾರಂಭಗೊಳ್ಳುವುದರಿಂದ ಈ ಆಟಗಾರರು ಕೆಲವು ಸಮಯ ವಿಶ್ರಾಂತಿ ಬಯಸಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಕಮ್ಮಿನ್ಸ್​ ಐಪಿಎಲ್ ಪುನಾರಂಭವಾದರೂ ತಾವೂ ಲಭ್ಯರಾಗುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ.

ಇದನ್ನು ಓದಿ: ಟೆಸ್ಟ್​ ರ‍್ಯಾಂಕಿಂಗ್.. ಟಾಪ್‌ 10ರಲ್ಲಿ ಕೊಹ್ಲಿ ಸೇರಿ 3 ಭಾರತೀಯರು, ಬೌಲಿಂಗ್​ನಲ್ಲಿ ಅಶ್ವಿನ್ ಬೆಸ್ಟ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.