ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ಟೆಸ್ಟ್ ತಂಡದ ಆಯ್ಕೆಗೆ 90 ನಿಮಿಷವಿರುವಾಗ ನನ್ನನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದಾಗಿ ತಿಳಿಸಿಲಾಯಿತು. ಆದರೆ ಬೋರ್ಡ್ ಹೇಳಿರುವಂತೆ ನನ್ನನ್ನು ಯಾರೊಬ್ಬರು ಟಿ-20 ನಾಯಕತ್ವವನ್ನು ಬಿಡಬೇಡಿ ಎಂದು ತಿಳಿಸಿಲ್ಲ ಎಂದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ರೋಹಿತ್ - ದ್ರಾವಿಡ್ಗೆ ನನ್ನ ಬೆಂಬಲವಿದೆ:
ದಕ್ಷಿಣ ಆಫ್ರಿಕಾಗೆ ತೆರಳುವ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಹೊಸ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಬಿಪ್ರಾಯವಿಲ್ಲ. ಇದನ್ನ ಕಳೆದ ಎರಡೂ ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೇನೆ. ಇನ್ನು ನನ್ನ ನಾಯಕತ್ವದಲ್ಲಿ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲದ ಕಾರಣ ನಾಯಕತ್ವದಿಂದ ಕೆಳಗಿಳಿಸಿದ್ದಾರೆಂದು ಅರ್ಥಮಾಡಿಕೊಂಡಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಟೆಸ್ಟ್ ತಂಡದ ಆಯ್ಕೆಯ ವೇಳೆ ODI ನಾಯಕತ್ವ ನಿರ್ಧಾರ
ನಾಯಕತ್ವ ಬದಲಾವಣೆ ವಿಚಾರವಾಗಿ ತೆಗೆದುಕೊಂಡ ನಿರ್ಧಾರದ ಬಗ್ಗೆ ನಡೆದ ಸಂವಹನದ ಬಗ್ಗೆ ಬೋರ್ಡ್ ಏನು ಹೇಳಿದರೂ ಅದು ನಿಖರವಾಗಿಲ್ಲ. ಡಿಸೆಂಬರ್ 8 ರಂದು ಟೆಸ್ಟ್ ತಂಡದ ಆಯ್ಕೆಗಾಗಿ ನಾನು ಒಂದೂವರೆ ಗಂಟೆಗಳ ಕಾಲ ಸಭೆಯಲ್ಲಿದ್ದೆ. ನಾನು ಟಿ20 ನಾಯಕತ್ವ ತ್ಯಜಿಸಿದ ನಂತರ ನನ್ನ ಮತ್ತು ಮಂಡಳಿಯವರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.
ಮುಖ್ಯ ಆಯ್ಕೆಗಾರ ತಂಡದ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದು, ಇದಕ್ಕೆ ಇಬ್ಬರೂ ಒಪ್ಪಿಗೆ ನೀಡಿದೆವು. ಕರೆ ಕೊನೆಯಾಗುವ ವೇಳೆ ಐದೂ ಮಂದಿ ಆಯ್ಕೆಗಾರರು ನನ್ನನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದಾಗಿ ತಿಳಿಸಿದ್ರು, ನಾನು ಆಯ್ತು, ಒಳ್ಳೆಯದು ಎಂದು ಪ್ರತಿಕ್ರಿಯಿಸಿದೆ, ಇಷ್ಟೇ ನಡೆದದ್ದು ಎಂದು ಕೊಹ್ಲಿ ತಮ್ಮ ನಾಯಕತ್ವದಿಂದ ಕೆಳಗಿಳಿಸಿದ ದಿನ ನಡೆದ ಚರ್ಚೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ:ಎರಡೂವರೆ ವರ್ಷಗಳಿಂದ ಹೇಳ್ತಾನೆ ಇದ್ದೇನೆ, ರೋಹಿತ್ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಕೊಹ್ಲಿ
ಏಕದಿನ ತಂಡವನ್ನು ಮುನ್ನಡೆಸು ಆಸೆಯಿತ್ತು
"ನೀವು 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡಸುವ ಆಶಯ ಹೊಂದಿದ್ರಲ್ವ ? ಎಂದು ಕೇಳಿದ್ದಕ್ಕೆ, ಹೌದು, ನಾನು ಟಿ-20 ನಾಯಕತ್ವವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರವನ್ನು ಮೊದಲು ಬಿಸಿಸಿಐಗೆ ತಿಳಿಸಿದ್ದೆ, ಏಕೆ ತ್ಯಜಿಸುತ್ತಿದ್ದೇನೆ ಎಂಬುದನ್ನೂ ವಿವರಿಸಿದ್ದೆ. ನನ್ನ ನಿರ್ಧಾರದ ಬಗ್ಗೆ ಯಾವುದೇ ಹಿಂಜರಿಕೆ ಅಥವಾ ಅಪರಾಧ ಭಾವನೆಯಿಲ್ಲ. ಆದರೆ, ಈ ವೇಳೆ ಯಾರೊಬ್ಬರು ನನ್ನನ್ನು ನಾಯಕತ್ವ ತ್ಯಜಿಸಬೇಡಿ ಎಂದು ಹೇಳರಲಿಲ್ಲ ಎಂದು ಹೇಳುವ ಮೂಲಕ ಕಳೆದ ಎರಡು ದಿನಗಳ ಹಿಂದೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿಕೆಗೆ ಪರೋಕ್ಷವಾಗಿ ವಿರೋಧಿಸಿದರು.
ಟಿ-20 ನಾಯಕತ್ವವನ್ನು ಬಿಡುವುದರ ಬಗ್ಗೆ ವಿವರಿಸಿದ ನಂತರ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವದಲ್ಲಿ ಮುಂದುವರಿಯುವುದನ್ನು ಬಯಸಿದ್ದೆ, ಆದರೆ ಆಯ್ಕೆಗಾರರು ಆ ಜವಾಬ್ದಾರಿಯನ್ನು ಹೊರಲು ನನ್ನಿಂದ ಆಗುವುದಿಲ್ಲ ಎಂದು ಭಾವಿಸಿದ್ದಾರೆ ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ:ವಿರಾಟ್ - ರೋಹಿತ್ ಮನಸ್ತಾಪ ವಿಚಾರ; ಕ್ರೀಡೆಗಿಂತ ಯಾರೂ ದೊಡ್ಡವರಲ್ಲ ಎಂದ ಅನುರಾಗ್ ಠಾಕೂರ್