ಮುಂಬೈ: ಜುಲೈ 23ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಈಗಾಗಲೇ ಮೊದಲ ಹಂತದ ಭಾರತದ ಕ್ರೀಡಾಪಟುಗಳು ಟೋಕಿಯೋ ಸೇರಿಕೊಂಡಿದ್ದಾರೆ. ಪ್ರಧಾನಿ ಸೇರಿದಂತೆ ದೇಶದ ಗಣ್ಯರು, ಕ್ರೀಡಾ ದಿಗ್ಗಜರು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ್ದಾರೆ. ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಕ್ರೀಡಾಪಟುಗಳಿಗೆ ವಿಡಿಯೋ ಸಂದೇಶದ ಮೂಲಕ ಹುರಿದುಂಬಿಸಿದ್ದಾರೆ.
-
The legendary @sachin_rt is cheering for our Indian athletes at @Tokyo2020 👍 👍
— BCCI (@BCCI) July 19, 2021 " class="align-text-top noRightClick twitterSection" data="
Let's join him & #Cheer4India 🇮🇳 👏 👏@IndiaSports | @Media_SAI | @WeAreTeamIndia pic.twitter.com/6Rc0N0bVlq
">The legendary @sachin_rt is cheering for our Indian athletes at @Tokyo2020 👍 👍
— BCCI (@BCCI) July 19, 2021
Let's join him & #Cheer4India 🇮🇳 👏 👏@IndiaSports | @Media_SAI | @WeAreTeamIndia pic.twitter.com/6Rc0N0bVlqThe legendary @sachin_rt is cheering for our Indian athletes at @Tokyo2020 👍 👍
— BCCI (@BCCI) July 19, 2021
Let's join him & #Cheer4India 🇮🇳 👏 👏@IndiaSports | @Media_SAI | @WeAreTeamIndia pic.twitter.com/6Rc0N0bVlq
"ಕ್ರೀಡಾಪಟುಗಳು ಸೇರಿದಂತೆ ನಾವೆಲ್ಲರೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅವರೆಲ್ಲರೂ ಅತ್ಯುತ್ತಮ ಪ್ರದರ್ಶನ ತೋರಲು ಸಿದ್ಧರಿದ್ದಾರೆ ಎಂದು ನನಗೆ ತಿಳಿದಿದೆ. ಎಲ್ಲರೂ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸೋಣ" ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಕೂಡ ಚಿಯರ್ ಫಾರ್ ಇಂಡಿಯಾ ಆಂದೋಲನಕ್ಕೆ ಕೈ ಜೋಡಿಸಿದ್ದರು.
ಬಿಸಿಸಿಐ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ನೆರವಾಗುವುದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಇದೇ ಮೊದಲ ಬಾರಿಗೆ ಭಾರತದಿಂದ ಗರಿಷ್ಠ 129 ಅಥ್ಲೀಟ್ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: 20 ವರ್ಷಗಳ ನಂತರ.. ಒಲಿಂಪಿಕ್ಸ್ ಈಕ್ವೆಸ್ಟ್ರಿಯನ್‌ನಲ್ಲಿ ಬೆಂಗಳೂರಿನ ಫವಾದ್ ಮಿರ್ಜಾ ಸ್ಪರ್ಧೆ