ETV Bharat / sports

ಹಾರ್ದಿಕ್​ ಪಾಂಡ್ಯರನ್ನ ಮರಳಿ ಮನೆಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ : ನೀತಾ ಅಂಬಾನಿ - ನೀತಾ ಅಂಬಾನಿ

Nita Ambani welcomes Hardik Pandya: ಹಾರ್ದಿಕ್​ ಪಾಂಡ್ಯ ಮರಳಿ ಮುಂಬೈಗೆ ಸೇರಿರುವುದು ಕುಟುಂಬದೊಂದಿಗಿನ ಪುನರ್ಮಿಲನವಾಗಿದೆ ಎಂದು ನೀತಾ ಎಂ ಅಂಬಾನಿ ಹೇಳಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Nov 27, 2023, 6:26 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) 2024ರ ಆವೃತ್ತಿಗೆ ಸಂಬಂಧಿಸಿದಂತೆ ನಿನ್ನೆ (ಭಾನುವಾರ) ಎಲ್ಲಾ 10 ತಂಡಗಳು ಆಟಗಾರರ ರಿಟೈನ್ ಮತ್ತು ರಿಲೀಸ್​ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಳೆದ ಎರಡು ಸೀಸನ್​ ಗುಜರಾತ್ ಟೈಟಾನ್ಸ್​ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಇದೀಗ ಮರಳಿ ತಮ್ಮ ಹಳೆಯ ಮುಂಬೈ ಇಂಡಿಯನ್ಸ್​ ತಂಡಕ್ಕೆ ಸೇರಿಕೊಂಡಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನೀತಾ ಎಂ ಅಂಬಾನಿ, ಹಾರ್ದಿಕ್​ ಅವರನ್ನು ಮರಳಿ ಮನೆಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ತಂಡದ ಯುವ ಆಟಗಾರಾನಗಿ ಜರ್ನಿ ಆರಂಭಿಸಿದ ಹಾರ್ದಿಕ್​ ಇಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದಾರೆ. ಹಾರ್ದಿಕ್ ತಂಡಕ್ಕೆ​ ಮರಳಿರುವುದು ​ಕುಟುಂಬದೊಂದಿಗಿನ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ ಎಂದು ಹೇಳಿದ್ದಾರೆ.

ಆಕಾಶ್ ಅಂಬಾನಿ ಮಾತನಾಡಿ, ಹಾರ್ದಿಕ್​ ಅವರನ್ನು ಮರಳಿ ಮುಂಬೈ ತಂಡದಲ್ಲಿ ನೋಡುವುದು ನನಗೆ ತುಂಬಾ ಸಂತೋಷವಾಗಿದೆ. ಅವರು ಆಡುವ ಯಾವುದೇ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ಹೇಳಿದರು. ಇನ್ನು ಮುಂಬೈ ಇಂಡಿಯನ್ಸ್​ ತಂಡವನ್ನು ಸೇರಿಕೊಳ್ಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ತಂಡದ ಜೆರ್ಸಿ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಅಭಿಮಾನಿಗಳು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಗುಜರಾತ್​ ನಾಯಕತ್ವ: ಹಾರ್ದಿಕ್ ಪಾಂಡ್ಯ 2022ರಲ್ಲಿ ಹೊಸ ತಂಡ ಗುಜರಾತ್ ಟೈಟಾನ್ಸ್​ನ ನಾಯಕತ್ವ ವಹಿಸಿದ್ದರು. ಈ ಸೀಸನ್​ನಲ್ಲಿ ಪಾಂಡ್ಯ 15 ಪಂದ್ಯಗಳಲ್ಲಿ 487 ರನ್ ಗಳಿಸಿದ್ದರು. 4 ಅರ್ಧಶತಕಗಳು ಸೇರಿವೆ. ಅಲ್ಲದೇ ಹಾರ್ದಿಕ್​ ನಾಯಕತ್ವದಲ್ಲಿ ಗುಜರಾತ್​ ಚೊಚ್ಚಲ ಬಾರಿಗೆ ಕಪ್​ಅನ್ನು ಗೆದ್ದುಕೊಂಡಿತ್ತು. ನಂತರ 2023ರಲ್ಲಿ 16 ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ 346 ರನ್ ಗಳಿಸಿದ್ದರು, ಇದರಲ್ಲಿ 2 ಅರ್ಧಶತಕ ಸೇರಿದ್ದವು. ಈ ಸೀಸ್​ನಲ್ಲಿ ಗುಜರಾತ್​ ಫೈನಲ್​ಗೂ ತಲುಪಿತ್ತು. ಆದರೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಕಂಡು ಕಪ್​ ಅನ್ನು ಕೈಚಲ್ಲಿತು.

ಪಾಂಡ್ಯ ಐಪಿಎಲ್​ ಹಿಸ್ಟರಿ: ಹಾರ್ದಿಕ್ ಪಾಂಡ್ಯ ಈವರೆಗೆ 123 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 2309 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಸೇರಿವೆ. ಬೌಲಿಂಗ್​ನಲ್ಲಿ 53 ವಿಕೆಟ್​ಗಳನ್ನು ಉರುಳಿಸಿದ್ದಾರೆ. 17 ರನ್​ಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಪಾಂಡ್ಯ 2015ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಋತುವಿನಲ್ಲಿ ಕೇವಲ 3 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ದೊರಕಿತ್ತು. ಈ ವೇಳೆ 112 ರನ್ ಗಳಿಸಿದ್ದರು. ಇದರಲ್ಲಿ ಅರ್ಧಶತಕವೂ ಸೇರಿತ್ತು.

ಇದನ್ನೂ ಓದಿ: ಐಪಿಎಲ್​ 2024: ಮುಂಬೈಗೆ ಮರಳಿದ ಹಾರ್ದಿಕ್​ ಪಾಂಡ್ಯ; ಗುಜರಾತ್​ ಟೈಟಾನ್ಸ್​ಗೆ ಗಿಲ್​ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.