ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರುತ್ತಿರುವ ಅಕ್ಷರ್ ಪಟೇಲ್ ಈ ವರ್ಷವನ್ನು ತಮ್ಮ ಕನಸಿನ ವರ್ಷ ಎಂದು ಕರೆದಿದ್ದಾರೆ. ಆದರೂ ಮತ್ತಷ್ಟು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ತಂಡದಲ್ಲಿದ್ದರಿಂದ ಅಕ್ಷರ್ ಪಟೇಲ್ ಕೆಲವು ವರ್ಷಗಳಿಂದ ಕಡಗಣನೆಗೆ ಒಳಗಾಗಿದ್ದರು. ಕೊನೆಗೆ ಸಾಕಷ್ಟು ಪರಿಶ್ರಮ, ಪ್ರಯತ್ನಗಳ ನಂತರ ತವರಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ನಂತಹ ತಂಡಗಳ ವಿರುದ್ಧ ವೃತ್ತಿ ಜೀವನ ಆರಂಭಿಸಿದರೂ, ಅಷ್ಟಕ್ಕೆ ತೃಪ್ತಿಪಡುವುದಕ್ಕಾಗುವುದಿಲ್ಲ, ಮತ್ತಷ್ಟು ಸುಧಾರಣೆ ಕಾಣುತ್ತಾ ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.
-
🗣️ 🗣️ "It has been a dream year for me." #TeamIndia all-rounder @akshar2026 on the terrific performances he put up this year. 👍#INDvNZ @Paytm pic.twitter.com/s2xRiyNO4P
— BCCI (@BCCI) December 5, 2021 " class="align-text-top noRightClick twitterSection" data="
">🗣️ 🗣️ "It has been a dream year for me." #TeamIndia all-rounder @akshar2026 on the terrific performances he put up this year. 👍#INDvNZ @Paytm pic.twitter.com/s2xRiyNO4P
— BCCI (@BCCI) December 5, 2021🗣️ 🗣️ "It has been a dream year for me." #TeamIndia all-rounder @akshar2026 on the terrific performances he put up this year. 👍#INDvNZ @Paytm pic.twitter.com/s2xRiyNO4P
— BCCI (@BCCI) December 5, 2021
ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್ ಪಡೆದರೆ, ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ 9 ವಿಕೆಟ್ ಪಡೆದಿದ್ದಾರೆ. ಒಟ್ಟು 5 ಟೆಸ್ಟ್ ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದಾರೆ.
ಈ ವರ್ಷವನ್ನು ನನ್ನ ಕನಸಿನ ವರ್ಷ ಎಂದು ಹೇಳಬಹುದು. ಇಂಗ್ಲೆಂಡ್ ಸರಣಿಯಲ್ಲಿ ನಾನು ಬೌಲಿಂಗ್ ಮಾಡಿದ ರೀತಿ ಮತ್ತು ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧ ಹೊರಬರುತ್ತಿರುವ ಪ್ರದರ್ಶನ, ಇದರ ಮಧ್ಯೆ ಐಪಿಎಲ್ನಲ್ಲಿನ ಪ್ರದರ್ಶನವನ್ನೆಲ್ಲಾ ಪರಿಗಣಿಸಿದರೆ, ಖಂಡಿತ ಇದು ನನಗೆ ವೈಯಕ್ತಿಕವಾಗಿ ಒಳ್ಳೆಯ ವರ್ಷವಾಗಿದೆ ಎಂದು ಅಕ್ಷರ್ ಪಟೇಲ್ ಪಂದ್ಯದ ನಂತರ ನಡೆದ ವರ್ಚುವಲ್ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೂ ಇಷ್ಟಕ್ಕೆ ತೃಪ್ತಿಪಡದೇ ಸುಧಾರಣೆ ಕಾಣುವುದಕ್ಕೆ ಮತ್ತು ನಾನು ಉತ್ತಮಗೊಳ್ಳಬೇಕಾದ ಕ್ಷೇತ್ರಗಳತ್ತ ಗಮನಹರಿಸಲು ಬಯಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ನಾನು ಪಟ್ಟ ಪರಿಶ್ರಮ ಅಂತಿಮವಾಗಿ ಈ ವರ್ಷ ಫಲಿತಾಂಶವನ್ನು ನೀಡಿದೆ ಎಂದು 2ನೇ ಟೆಸ್ಟ್ನಲ್ಲಿ 52 ಮತ್ತು 41 ರನ್ಗಳಿಸಿದ ಅಕ್ಷರ್ ಪಟೇಲ್ ಹೇಳಿದ್ದಾರೆ.
ಬ್ಯಾಟಿಂಗ್ ಬಗ್ಗೆ ಮಾತನಾಡಿ, ಬ್ಯಾಟಿಂಗ್ ಕೋಚ್ ಮತ್ತು ಮ್ಯಾನೇಜ್ಮೆಂಟ್ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದೆ. ಅವರೆಲ್ಲರೂ 'ನಿನ್ನಿಂದ ಸಾಧ್ಯವಿದೆ' ಎಂದು ಪ್ರೋತ್ಸಾಹಿಸುತ್ತಾರೆ. ಈ ಹಿಂದೆ ನನ್ನ ಆರಂಭವನ್ನು ದೊಡ್ಡದಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನನಗೆ ಅವಕಾಶ ಸಿಕ್ಕಿದೆ, ಅದನ್ನು ದೊಡ್ಡದಾಗಿ ಪರಿವರ್ತಿಸಿದೆ. ನನ್ನ ಬ್ಯಾಟಿಂಗ್ ತಂಡಕ್ಕೆ ಅನುಕೂಲವಾಗಿದೆ. ನಾನು, ಜಡ್ಡು ಮತ್ತು ಆಶ್ವಿನ್ ಬಾಯ್ ಆಲ್ರೌಂಡರ್ ಆಗಿರುವುದರಿಂದ ನಮ್ಮ ಬ್ಯಾಟರ್ಗಳ ಮೇಲೆ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ. ಇದು ಒಳ್ಳೆಯ ಸೂಚನೆ. ಎಷ್ಟು ಸಾಧ್ಯವೋ ಅಷ್ಟು ತಂಡಕ್ಕೆ ಕೊಡುಗೆ ನೀಡಲು ಪ್ರಯತ್ನಿಸುವೆ ಎಂದಿದ್ದಾರೆ.
ಇದನ್ನೂ ಓದಿ:ಭಾರತೀಯ ಸ್ಪಿನ್ನರ್ ಎದುರಿಸಲು ಮಯಾಂಕ್ ಆಟ ನನೆಗೆ ತುಂಬಾ ನೆರವಾಯಿತು : ಮಿಚೆಲ್