ಜೋಹಾನ್ಸ್‌ಬರ್ಗ್: ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ತೆರಳಲಿದೆ. ಈ ವೇಳೆ ಭಾರತೀಯ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಆಡಲಿದೆ.
ಡಿಸೆಂಬರ್ 17ರಿಂದ ಉಭಯ ತಂಡಗಳ ಮಧ್ಯೆ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಮೊದಲು ಮೊದಲನೇ ಮತ್ತು ಮೂರನೇ ಟೆಸ್ಟ್ ಪಂದ್ಯವನ್ನು ದ. ಆಫ್ರಿಕಾ ಕ್ರಿಕೆಟ್ ಮಂಡಳಿ ಜೋಹಾನ್ಸ್ಬರ್ಗ್ನಲ್ಲಿ ನಡೆಸಲು ನಿರ್ಧರಿಸಿತ್ತು. ಆದರೆ ಈಗ ದಿಢೀರ್ ಮೂರನೇ ಟೆಸ್ಟ್ ಪಂದ್ಯವನ್ನು ಕೇಪ್‌ಟೌನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಸ್‌ಎ ಟ್ವೀಟ್ ಮೂಲಕ ಶುಕ್ರವಾರ ತಿಳಿಸಿದೆ. ಆದರೆ ಸ್ಥಳಾಂತರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ.
ಡಿಸೆಂಬರ್-ಜನವರಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಮೂರು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯ ಮತ್ತು ನಾಲ್ಕು ಟಿ20 ಪಂದ್ಯಗಳು ನಡೆಯಲಿವೆ. ಡಿಸೆಂಬರ್ 17ರಿಂದ 21ರ ವರೆಗೆ ಮೊದಲ ಟೆಸ್ಟ್ ಸೆಂಚುರಿಯನ್‌ನಲ್ಲಿ, ಡಿಸೆಂಬರ್ 26ರಿಂದ 30ರ ವರೆಗೆ ದ್ವಿತೀಯ ಟೆಸ್ಟ್ ಪಂದ್ಯ, ಜನವರಿ 3ರಿಂದ 7ರ ವರೆಗೆ ಕೇಪ್‌ಟೌನ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿವೆ.