ETV Bharat / sports

ಮಾ.30ಕ್ಕೆ ಕ್ರಿಕೆಟ್‌ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಅಂತ್ಯಕ್ರಿಯೆ; ಹಂಡ್ರೆಡ್ ಡ್ರಾಫ್ಟ್ ಏ.5ಕ್ಕೆ ಮುಂದೂಡಿಕೆ - ಮಾರ್ಚ್‌ 30ಕ್ಕೆ ಶೇನ್‌ ವಾರ್ನ್‌ ಅಂತ್ಯಕ್ರಿಯೆ

ದಿ ಹಂಡ್ರೆಡ್ ಡ್ರಾಫ್ಟ್ ಕ್ರಿಕೆಟ್‌ ಟೂರ್ನಿಯನ್ನು ಏಪ್ರಿಲ್‌ 5ಕ್ಕೆ ಮುಂದೂಡಲಾಗಿದೆ. ಶೇನ್‌ ವಾರ್ನ್‌ ಅಂತ್ಯಕ್ರಿಯೆ ಮಾರ್ಚ್‌ 30 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಟೂರ್ನಿಯ ಚಟುವಟಿಕೆಗಳನ್ನು ಮುಂದೂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

The Hundred' draft pushed back to avoid clash with Warne's state funeral
ಮಾ.30ಕ್ಕೆ ಕ್ರಿಕೆಟ್‌ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಅಂತ್ಯಕ್ರಿಯೆ; ಹಂಡ್ರೆಡ್ ಡ್ರಾಫ್ಟ್ ಏ.5ಕ್ಕೆ ಮುಂದೂಡಿಕೆ
author img

By

Published : Mar 17, 2022, 2:19 PM IST

ಲಂಡನ್‌: ಆಸ್ಟ್ರೇಲಿಯಾದ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ಅಂತ್ಯಕ್ರಿಯೆ ಮಾರ್ಚ್‌ 30 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದಿ ಹಂಡ್ರೆಡ್ ಡ್ರಾಫ್ಟ್ ಮತ್ತು ಮಹಿಳಾ ವಿಭಾಗದ 2ನೇ ಆವೃತ್ತಿಯ ಸರಣಿಯನ್ನು ಏರ್ಪಿಲ್‌ 5ಕ್ಕೆ ಮುಂದೂಡಲಾಗಿದೆ.

100 ಬಾಲ್‌ಗಳ ಕ್ರಿಕೆಟ್‌ ಟೂರ್ನಮೆಂಟ್‌ ದಿ ಹಂಡ್ರೆಡ್ ಡ್ರಾಫ್ಟ್‌ ಪುರುಷರ ಮತ್ತು ಮಹಿಳೆಯರ ತಂಡಗಳ ಆಯ್ಕೆ, ಹೆಸರುಗಳನ್ನು ಏಪ್ರಿಲ್ 5 ರಂದು ಪ್ರಕಟಿಸಲಾಗುತ್ತದೆ ದಿ ಹಂಡ್ರೆಡ್‌ ಹೇಳಿಕೆ ಬಿಡುಗಡೆ ಮಾಡಿದೆ. 15 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 145 ಟೆಸ್ಟ್‌ಗಳಲ್ಲಿ 708 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಲೆಗ್-ಸ್ಪಿನ್ ಬೌಲಿಂಗ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ವಾರ್ನ್, ಮಾರ್ಚ್ 4 ರಂದು ಥಾಯ್ಲೆಂಡ್​​​​​ನ ಕೊಹ್ ಸಮುಯಿಯಲ್ಲಿ ಹಠಾತ್‌ ಹೃದಯಾಘಾತದಿಂದ ನಿಧನರಾಗಿದ್ದರು.

ಶೇನ್ ಅವರು ದಿ ಹಂಡ್ರೆಡ್‌ನ ಅತ್ಯಂತ ಪ್ರೀತಿಯ ಭಾಗವಾಗಿದ್ದರು. ಕಳೆದ ವರ್ಷ ಲಂಡನ್ ಸ್ಪಿರಿಟ್‌ನ ಪುರುಷರ ತಂಡದ ಮುಖ್ಯ ತರಬೇತುದಾರರಾಗುವ ಮೂಲಕ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಋತುವಿನಲ್ಲಿ ಮತ್ತೆ ತಂಡ ಮುನ್ನಡೆಸಬೇಕಿತ್ತು.

ದಿ ಹಂಡ್ರಡ್‌ ಡ್ರಾಫ್ಟ್‌ 100 ಬಾಲ್‌ಗಳ ಕ್ರಿಕೆಟ್‌ ಟೂರ್ನಮೆಂಟ್‌ ಆಗಿದ್ದು, ಪುರುಷ ಹಾಗೂ ಮಹಿಳಾ 8 ತಂಡಗಳು ಭಾಗವಹಿಸುತ್ತವೆ. ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಡ್‌ ಬೋರ್ಡ್‌ ಟೂರ್ನಿಯನ್ನು ಆಯೋಜಿಸುತ್ತವೆ.

ಇದನ್ನೂ ಓದಿ: ಸ್ಪಿನ್‌ ದಂತಕಥೆ ಶೇನ್‌ ವಾರ್ನ್‌ ದೇಹ ದಂಡನೆ ಮಾಡುವ ಪ್ರಯತ್ನದಿಂದಲೇ ಸಾವು ತಂದುಕೊಂಡರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.