ನವದೆಹಲಿ: ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಭಾರಿಸಿದ ಮತ್ತು ಗರಿಷ್ಠ ಶತಕಗಳ ದಾಖಲೆ ಹೊಂದಿರುವ ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಕುಮಾರ್ ಸಂಗಕ್ಕಾರ, ಜಾಕ್ ಕಾಲೀಸ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ.
ಇದೊಂದು ಬಹಳ ಕಠಿಣವಾದ ನಿರ್ಧಾರ. ಕುಮಾರ್ ಸಂಗಕ್ಕಾರ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರು ಈ ವಿಭಾಗದ ಐಕಾನ್ಗಳು, ಆದರೆ ಮತಗಳ ಆಧಾರದ ಮೇಲೆ 21ನೇ ಶತಮಾನದ ಅದ್ಭುತ ಟೆಸ್ಟ್ ಬ್ಯಾಟ್ಸ್ಮನ್ ಪಟ್ಟ ನನ್ನ ಸಹ ಮುಂಬೈಕರ್ ಸಚಿನ್ ರಮೇಶ್ ತೆಂಡೂಲ್ಕರ್ಗೆ ಸಿಕ್ಕಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ದಂತಕತೆ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
-
Master Blaster >>>> Everyone else 😍
— Star Sports (@StarSportsIndia) June 19, 2021 " class="align-text-top noRightClick twitterSection" data="
It was a close call, but in the end, our jury 𝗔𝗡𝗗 y'all 🗳️ for the legendary @sachin_rt as the #GOATOfThe21stCentury Men’s Test Batsman! pic.twitter.com/2btk4bGI7U
">Master Blaster >>>> Everyone else 😍
— Star Sports (@StarSportsIndia) June 19, 2021
It was a close call, but in the end, our jury 𝗔𝗡𝗗 y'all 🗳️ for the legendary @sachin_rt as the #GOATOfThe21stCentury Men’s Test Batsman! pic.twitter.com/2btk4bGI7UMaster Blaster >>>> Everyone else 😍
— Star Sports (@StarSportsIndia) June 19, 2021
It was a close call, but in the end, our jury 𝗔𝗡𝗗 y'all 🗳️ for the legendary @sachin_rt as the #GOATOfThe21stCentury Men’s Test Batsman! pic.twitter.com/2btk4bGI7U
ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 15,921 ರನ್ ಮತ್ತು 51 ಶತಕ ಸಿಡಿಸಿದ್ದಾರೆ. ಇವರು 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ರಿಕಿಪಾಂಟಿಂಗ್ ಅವರಿಗಿಂತ 2543 ಹೆಚ್ಚು ರನ್ ಮುಂದಿದ್ದಾರೆ. ಗರಿಷ್ಠ ಶತಕಗಳ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್(45)ಗಿಂತ 6 ಶತಕ ಮುಂದಿದ್ದಾರೆ. ಸಂಗಕ್ಕಾರ 12,400 ರನ್ ಮತ್ತು 38 ಶತಕ ಭಾರಿಸಿದ್ದಾರೆ.
ಈ ಸಮೀಕ್ಷೆಯನ್ನು ಸ್ಟಾರ್ ಸ್ಪೋರ್ಟ್ಸ್ ನಡೆಸಿದ್ದು ಅಭಿಮಾನಿಗಳು ಮತ್ತು ವಿವಿಎಸ್ ಲಕ್ಷ್ಮಣ್, ಇರ್ಫಾನ್ ಪಠಾಣ್ ಮತ್ತು ಅಕಾಶ್ ಚೋಪ್ರಾ ಸೇರಿದಂತೆ ಹಲವು ಕಾಮೆಂಟ್ಟೇಟರ್ಗಳು ಮತ ಚಲಾಯಿಸಿದ್ದರು.
16ನೇ ವಯಸ್ಸಿಗೆ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಮಾಸ್ಟರ್ ಬ್ಲಾಸ್ಟರ್ 2013 ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ವಿಸ್ಡನ್ ತನ್ನ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಘೋಷಿಸಿದ ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸ್ಮನ್ ತಂಡದಲ್ಲಿ ಸಚಿನ್ ಏಕೈಕ ಭಾರತೀಯ ಆಟಗಾರನಾಗಿ ಆಯ್ಕೆಯಾಗಿದ್ದರು. ಅಲ್ಲದೆ 2002ರಲ್ಲಿ 'ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಕ್' ಸಚಿನ್ರನ್ನು ಡಾನ್ ಬ್ರಾಡ್ಮನ್ ನಂತರ ವಿಶ್ವದ 2ನೇ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಮತ್ತು ಸರ್ ವಿವ್ ರಿಚರ್ಡ್ಸನ್ ನಂತರ 2ನೇ ಸಾರ್ವಕಾಲಿಕ ಏಕದಿನ ಕ್ರಿಕೆಟರ್ ಎಂದು ಶ್ರೇಯಾಂಕ ನೀಡಿ ಗೌರವಿಸಿತ್ತು.
ಇದನ್ನು ಓದಿ:ಈತನಿಂದ ಭಾರತಕ್ಕೆ ಅನೇಕ ಟೆಸ್ಟ್ ಶತಕಗಳು ಬರಲಿವೆ: ಗವಾಸ್ಕರ್ ಭವಿಷ್ಯ