ನವದೆಹಲಿ: ಪ್ರಥಮ ದರ್ಜೆಯ ನಿರಾಶಾದಾಯಕ ಋತುವಿನ ನಂತರ ದುಲೀಪ್ ಟ್ರೋಫಿ ತಂಡದಿಂದ ನಿರ್ಲಕ್ಷಿಸಲ್ಪಟ್ಟ ಪ್ರತಿಭಾವಂತ ಯಶ್ ಧುಲ್ ಅವರನ್ನು ಜುಲೈ 13 ರಿಂದ 23 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಏಷ್ಯಾಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಮಂಗಳವಾರ ಭಾರತ ಎ ನಾಯಕರನ್ನಾಗಿ ನೇಮಿಸಲಾಗಿದೆ.
-
NEWS - India A squad for ACC Men’s Emerging Teams Asia Cup 2023 announced.
— BCCI (@BCCI) July 4, 2023 " class="align-text-top noRightClick twitterSection" data="
More details here - https://t.co/TCjU0DGbSl pic.twitter.com/6qCDxfB17k
">NEWS - India A squad for ACC Men’s Emerging Teams Asia Cup 2023 announced.
— BCCI (@BCCI) July 4, 2023
More details here - https://t.co/TCjU0DGbSl pic.twitter.com/6qCDxfB17kNEWS - India A squad for ACC Men’s Emerging Teams Asia Cup 2023 announced.
— BCCI (@BCCI) July 4, 2023
More details here - https://t.co/TCjU0DGbSl pic.twitter.com/6qCDxfB17k
ಉದಯೋನ್ಮುಖ ಪಂದ್ಯಾವಳಿಯ ಅವಶ್ಯಕತೆಯ ಪ್ರಕಾರ, ತಂಡವು ಮುಖ್ಯವಾಗಿ 23 ವರ್ಷದೊಳಗಿನ ಆಟಗಾರರನ್ನು ಒಳಗೊಂಡಿದೆ. ಪಂಜಾಬ್‌ನ ರಣಜಿ ತಂಡದ ನಾಯಕ ಅಭಿಷೇಕ್ ಶರ್ಮಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ತಂಡದಲ್ಲಿ ಆಯ್ಕೆಯಾದ ಎಲ್ಲ ಆಟಗಾರರು ಮೂರು ಮಾದರಿಗಳಲ್ಲಿ ಒಂದರಲ್ಲಿ ತಮ್ಮ ರಾಜ್ಯದ ಹಿರಿಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಭಾ ಸಿಮ್ರಾನ್ ಸಿಂಗ್ ಹೆಸರಿನಲ್ಲಿ ಶತಕವೂ ದಾಖಲಾಗಿದೆ.
ವಿಕೆಟ್ ಕೀಪಿಂಗ್ ಜವಾಬ್ದಾರಿ ಪ್ರಭಾಸಿಮ್ರಾನ್ ಮತ್ತು ಧ್ರುವ್ ಜುರೆಲ್ ಅವರ ಹೆಗಲ ಮೇಲಿರುತ್ತದೆ. ಜುರೆಲ್ ರಾಜಸ್ಥಾನ್ ರಾಯಲ್ಸ್‌ಗೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವಾಗ ಕೆಲವು ಸಂದರ್ಭಗಳಲ್ಲಿ ಫಿನಿಶರ್ ಪಾತ್ರದಲ್ಲಿ ಯಶಸ್ವಿಯಾಗಿ ಮಿಂಚಿದರು. ದೆಹಲಿಯ ವೇಗದ ಬೌಲಿಂಗ್ ಆಲ್ ರೌಂಡರ್ ಹರ್ಷಿತ್ ರಾಣಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ರಾಣಾ ತನ್ನ ವೇಗದಿಂದ ಪ್ರಭಾವಿತನಾಗಿದ್ದ. ಅವರು ಇತ್ತೀಚೆಗೆ ತಮ್ಮ ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕವನ್ನೂ ಕೂಡಾ ಬಾರಿಸಿದ್ದರು.
ವಿಶ್ವಕಪ್ ವಿಜೇತ ತಂಡದ ನಾಯಕ: 19 ವರ್ಷದವರೊಳಗಿನ ವಿಶ್ವಕಪ್ 2022 ವಿಜೇತ ಭಾರತೀಯ ತಂಡದ ನಾಯಕ ಧುಲ್, ದೇಶೀಯ ಋತುವಿನಲ್ಲಿ ಆರು ರಣಜಿ ಪಂದ್ಯಗಳಲ್ಲಿ ಕೇವಲ 270 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕೂ ಮುನ್ನ ಅವರು ವಿಜಯ್ ಹಜಾರೆ ಟ್ರೋಫಿಯ ಏಳು ಪಂದ್ಯಗಳಲ್ಲಿ 191 ರನ್ ಬಾರಿಸಿದ್ದರು. ಅವರ ಈ ಹಿಂದಿನ ರೆಕಾರ್ಡ್ ಗಮನಿಸಿದರೆ ಅಷ್ಟೊಂದು ಆಶಾದಾಯವಾಗೇನೂ ಇಲ್ಲ. ಆದರೆ. ಧುಲೆ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಆಗಿ ಆಡಿದ್ದನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಆಯ್ಕೆ ಸಮಿತಿಯು ಅವರಿಗೆ ಅವಕಾಶ ನೀಡಿದೆ ಎಂದು ನಂಬಲಾಗಿದೆ.
ಅಸ್ಸೋಂನ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್‌ನಿಂದ ಸಿಕ್ಕ ಹಲವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು, ಆದರೆ, ಆಯ್ಕೆಗಾರರು ಅವರ ಪ್ರತಿಭೆಯನ್ನು ಪರಿಗಣಿಸಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಪನಾಯಕ ಅಭಿಷೇಕ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಯ್ಕೆದಾರರು ಕೇರಳದ ನಿಕಿನ್ ಜೋಸ್, ಹರಿಯಾಣದ ನಿಶಾಂತ್ ಸಿಂಧು, ತಮಿಳುನಾಡಿನ ಪ್ರದೋಶ್ ರಂಜನ್ ಪಾಲ್ ಮತ್ತು ಬಿ ಸಾಯಿ ಸುದರ್ಶನ್ ಅವರನ್ನೂ ಸೇರಿಸಿಕೊಂಡಿದ್ದಾರೆ.
ವೇಗದ ಬೌಲಿಂಗ್ ವಿಭಾಗದ ಮಟ್ಟಿಗೆ ಹೇಳುವುದಾದರೆ, ಗಂಟೆಗೆ 135 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಇರುವ ಅಂತಹ ಬೌಲರ್‌ಗಳತ್ತ ಗಮನ ಹರಿಸಲಾಗಿದೆ. ರಾಣಾ, ಲಖನೌ ಸೂಪರ್ ಜೈಂಟ್ಸ್ ವೇಗದ ಬೌಲರ್ ಯುವರಾಜ್ ಸಿಂಗ್ ದೋಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ವೇಗದ ಬೌಲರ್ ಆಕಾಶ್ ಸಿಂಗ್ ಮತ್ತು ಮಹಾರಾಷ್ಟ್ರದ ರಾಜವರ್ಧನ್ ಹಂಗರ್ಗೇಕರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
Leading the way with his eyes on the 🏆
— Delhi Capitals (@DelhiCapitals) July 4, 2023 " class="align-text-top noRightClick twitterSection" data="
Congratulations, Yash Dhull, on being picked as #TeamIndia's captain for the Men’s Emerging Teams Asia Cup 🙌#YehHaiNayiDilli pic.twitter.com/KDwlTchbp9
">Leading the way with his eyes on the 🏆
— Delhi Capitals (@DelhiCapitals) July 4, 2023
Congratulations, Yash Dhull, on being picked as #TeamIndia's captain for the Men’s Emerging Teams Asia Cup 🙌#YehHaiNayiDilli pic.twitter.com/KDwlTchbp9Leading the way with his eyes on the 🏆
— Delhi Capitals (@DelhiCapitals) July 4, 2023
Congratulations, Yash Dhull, on being picked as #TeamIndia's captain for the Men’s Emerging Teams Asia Cup 🙌#YehHaiNayiDilli pic.twitter.com/KDwlTchbp9
ನೇಪಾಳ, ಯುಎಇ ಎ ಮತ್ತು ಪಾಕಿಸ್ತಾನ ಎ ಜೊತೆಗೆ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಒಮನ್ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ನೇಪಾಳ ತನ್ನ ಹಿರಿಯ ತಂಡವನ್ನು ಟೂರ್ನಿಯಲ್ಲಿ ಕಣಕ್ಕಿಳಿಸುತ್ತಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಮೊದಲ ಸೆಮಿಫೈನಲ್ ಪಂದ್ಯ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಮತ್ತು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡಗಳ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಬಿ ಗುಂಪಿನ ಅಗ್ರ ತಂಡ ಮತ್ತು ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡಗಳ ನಡುವೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಜುಲೈ 21 ರಂದು ನಡೆಯಲಿದೆ. ಫೈನಲ್ ಪಂದ್ಯ ಜುಲೈ 23 ರಂದು ನಡೆಯಲಿದೆ.
ಭಾರತ ಎ ತಂಡ ಇಂತಿದೆ: ಯಶ್ ಧುಲ್ (ನಾಯಕ), ಬಿ ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ರಿಯಾನ್ ಪರಾಗ್, ನಿಶಾಂತ್ ಸಂಧು, ಪ್ರಭ್‌ಸಿಮ್ರಾನ್ ಸಿಂಗ್, ಧ್ರುವ್ ಜುರೆಲ್, ಮಾನವ್ ಸುತಾರ್, ಯುವರಾಜ್ ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹೆಂಗಾರ್ಗೇಕರ್.
ಸ್ಟ್ಯಾಂಡ್‌ಬೈ ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್.
ಭಾರತ ಎ ತಂಡದ ವೇಳಾಪಟ್ಟಿ ಹೀಗಿದೆ:
- ಜುಲೈ 13: ಭಾರತ ಎ ವಿರುದ್ಧ ಯುಎಇ ಎ
- ಜುಲೈ 15: ಭಾರತ ಎ ವಿರುದ್ಧ ಪಾಕಿಸ್ತಾನ ಎ
- ಜುಲೈ 18: ಭಾರತ ಎ ವಿರುದ್ಧ ನೇಪಾಳ
- ಜುಲೈ 21: ಎರಡು ಸೆಮಿಫೈನಲ್‌ಗಳು
- ಜುಲೈ 23: ಫೈನಲ್
ಇದನ್ನೂ ಓದಿ: Ajit Agarkar: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ