ಲೀಡ್ಸ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿದೆ. ಇದರ ಮಧ್ಯೆ ಮೈದಾನದಲ್ಲಿ ಅಪರೂಪದ ಘಟನೆವೊಂದು ನಡೆದಿದೆ. ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ 59 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ, ಪೆವಿಲಿಯನ್ಗೆ ಹೋಗುತ್ತಿದ್ದಂತೆ ಭಾರತದ ಜರ್ಸಿ ತೊಟ್ಟ ಕ್ರಿಕೆಟ್ ಪ್ರೇಮಿಯೊಬ್ಬ ಮೈದಾನಕ್ಕೆ ಇಳಿದು, ಬ್ಯಾಟ್ ಮಾಡಲು ಮುಂದಾಗಿದ್ದು, ಕೆಲ ನಿಮಿಷಗಳ ಕಾಲ ಹೈಡ್ರಾಮಾ ಸೃಷ್ಟಿ ಮಾಡಿದ್ದಾನೆ.
-
Jarvo69 is a legend#jarvo #INDvsEND #ENGvIND pic.twitter.com/cv3uxlpu2T
— Raghav Padia (@raghav_padia) August 27, 2021 " class="align-text-top noRightClick twitterSection" data="
">Jarvo69 is a legend#jarvo #INDvsEND #ENGvIND pic.twitter.com/cv3uxlpu2T
— Raghav Padia (@raghav_padia) August 27, 2021Jarvo69 is a legend#jarvo #INDvsEND #ENGvIND pic.twitter.com/cv3uxlpu2T
— Raghav Padia (@raghav_padia) August 27, 2021
ಟೀಂ ಇಂಡಿಯಾದ ಅಭಿಮಾನಿಯಾಗಿರುವ ಜಾರ್ವೋ ಭಾರತ ತಂಡದ ಜರ್ಸಿ ತೊಟ್ಟಿದ್ದು, ಪ್ಯಾಡ್ ಕಟ್ಟಿಕೊಂಡು, ಹೆಲ್ಮೇಟ್ ಹಾಕಿಕೊಂಡು, ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಮೈದಾನಕ್ಕೆ ಓಡಿ ಬಂದಿದ್ದಾನೆ. ಈ ವೇಳೆ ಅಂಪೈರ್ಗಳು ಕ್ಷಣ ಕಾಲ ಆಶ್ಚರ್ಯ ಹಾಗೂ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಮೈದಾನದ ಸಿಬ್ಬಂದಿ ಆತನನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ವೇಳೆ ಕೂಡ ಈ ವ್ಯಕ್ತಿ ಮೈದಾನಕ್ಕೆ ನುಗ್ಗಿ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿದ್ದರು. ಇಂದು ಸಹ ಅದೇ ರೀತಿ ನಡೆದುಕೊಂಡಿದ್ದು, ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
JARVO 69 is back and Ready to bat for India 😁😂#jarvo #jarvo69 #INDvEND#ENGvIND #engvsindia #INDvENG pic.twitter.com/PZ11HgEe2N
— ABDULLAH NEAZ (@AbdullahNeaz) August 27, 2021 " class="align-text-top noRightClick twitterSection" data="
">JARVO 69 is back and Ready to bat for India 😁😂#jarvo #jarvo69 #INDvEND#ENGvIND #engvsindia #INDvENG pic.twitter.com/PZ11HgEe2N
— ABDULLAH NEAZ (@AbdullahNeaz) August 27, 2021JARVO 69 is back and Ready to bat for India 😁😂#jarvo #jarvo69 #INDvEND#ENGvIND #engvsindia #INDvENG pic.twitter.com/PZ11HgEe2N
— ABDULLAH NEAZ (@AbdullahNeaz) August 27, 2021
ಇಂಗ್ಲೆಂಡ್ನ ಲೀಡ್ಸ್ ಮೈದಾನದಲ್ಲಿ ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 78ರನ್ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ 432 ರನ್ಗಳಿಕೆ ಮಾಡಿದೆ. ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿರುವ ಭಾರತ 2 ವಿಕೆಟ್ ಕಳೆದುಕೊಂಡು 185ರನ್ಗಳಿಕೆ ಮಾಡಿದೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಚೇತೇಶ್ವರ್ ಪೂಜಾರಾ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಇದನ್ನೂ ಓದಿರಿ: ಸ್ಟನ್ನಿಂಗ್ ಕ್ಯಾಚ್ ಹಿಡಿದು, ರಾಹುಲ್ಗೆ ಪೆವಿಲಿಯನ್ ಹಾದಿ ತೋರಿಸಿದ ಬೈರ್ಸ್ಟೋವ್!