ನವದೆಹಲಿ: ಜೂನ್ 9ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಅಭ್ಯಾಸ ಶುರು ಮಾಡಿದೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಯಂಗ್ ಇಂಡಿಯಾ ಪ್ಲೇಯರ್ಸ್ಗೆ ತರಬೇತಿ ಆರಂಭಗೊಂಡಿದೆ. ನಿನ್ನೆಯಿಂದಲೇ ಬೆವರು ಹರಿಸುತ್ತಿರುವ ಪ್ಲೇಯರ್ಸ್, ನೆಟ್ ಪ್ರಾಕ್ಟಿಸ್ನಲ್ಲಿ ಕಾಣಿಸಿಕೊಂಡರು. ಐಸಿಸಿ ಟಿ-20 ವಿಶ್ವಕಪ್ ದೃಷ್ಟಿಯಿಂದ ಯಂಗ್ ಪ್ಲೇಯರ್ಸ್ಗೆ ಈ ಸರಣಿ ಮಹತ್ವದ್ದಾಗಿದೆ.
-
First practice session ✅
— BCCI (@BCCI) June 6, 2022 " class="align-text-top noRightClick twitterSection" data="
Snapshots from #TeamIndia's training at the Arun Jaitley Stadium, Delhi. 👍 👍 #INDvSA | @Paytm pic.twitter.com/6v0Ik5nydJ
">First practice session ✅
— BCCI (@BCCI) June 6, 2022
Snapshots from #TeamIndia's training at the Arun Jaitley Stadium, Delhi. 👍 👍 #INDvSA | @Paytm pic.twitter.com/6v0Ik5nydJFirst practice session ✅
— BCCI (@BCCI) June 6, 2022
Snapshots from #TeamIndia's training at the Arun Jaitley Stadium, Delhi. 👍 👍 #INDvSA | @Paytm pic.twitter.com/6v0Ik5nydJ
15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳುತ್ತಿದ್ದಂತೆ ವಿಶ್ರಾಂತಿ ಪಡೆದುಕೊಂಡಿದ್ದ ಆಟಗಾರರು ಇದೀಗ ಮರಳಿ ಟೀಂ ಇಂಡಿಯಾ ಪರ ಅಬ್ಬರಿಸಲು ಸಜ್ಜುಗೊಳ್ಳುತ್ತಿದ್ದಾರೆ. ಪ್ರಮುಖವಾಗಿ ಹೊಸ ಹೊಸ ಪ್ರತಿಭೆಗಳಿಗೆ ಬಿಸಿಸಿಐ ಮಣೆ ಹಾಕಿದ್ದು, ತಮ್ಮಲ್ಲಿರುವ ಸಾಮರ್ಥ್ಯ ಹೊರಹಾಕಲಿದ್ದಾರೆ. 2022ರಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದುಕೊಂಡಿದೆ.
-
Back in Blue - Prep mode 🔛#TeamIndia begin training in Delhi ahead of the 1st T20I against South Africa.@Paytm #INDvSA pic.twitter.com/kOr8jsGJwL
— BCCI (@BCCI) June 6, 2022 " class="align-text-top noRightClick twitterSection" data="
">Back in Blue - Prep mode 🔛#TeamIndia begin training in Delhi ahead of the 1st T20I against South Africa.@Paytm #INDvSA pic.twitter.com/kOr8jsGJwL
— BCCI (@BCCI) June 6, 2022Back in Blue - Prep mode 🔛#TeamIndia begin training in Delhi ahead of the 1st T20I against South Africa.@Paytm #INDvSA pic.twitter.com/kOr8jsGJwL
— BCCI (@BCCI) June 6, 2022
ಇದನ್ನೂ ಓದಿ: ಆಧುನಿಕ ಶೈಲಿಯಲ್ಲಿ ರೈತರ ಸಹಾಯಕ್ಕೆ ಮುಂದಾದ ಧೋನಿ.. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ರು ಹಣ!
ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಜೂನ್ 12ರಂದು ಕಟಕ್, ಜೂನ್ 14 ವಿಶಾಖಪಟ್ಟಣಂ, ಜೂನ್ 17 ರಾಜ್ಕೋಟ್ ಹಾಗೂ ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಪ್ರಮುಖವಾಗಿ ಯುವ ಪ್ಲೇಯರ್ಸ್ಗೆ ಮಣೆ ಹಾಕಿರುವ ಕಾರಣ ಋತುರಾಜ್ ಗಾಯಕ್ವಾಡ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ಆವೇಶ್ ಖಾನ್ಗೆ ಇದು ಉತ್ತಮ ವೇದಿಕೆಯಾಗಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್