ದುಬೈ: ತವರಿನಲ್ಲಿ ನಡೆಯುವ ವಿಶ್ವಕಪ್ಗೂ ಮುನ್ನ ಭಾರತ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಟೆಸ್ಟ್, ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ. ಭಾರತ 116 ರೇಟಿಂಗ್ ಪಾಯಿಂಟ್ನಿಂದ ಮೊದಲ ಸ್ಥಾನಕ್ಕೇರಿದ್ದು, 115 ಅಂಕಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದರೆ, 111 ಅಂಕದಿಂದ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
-
No. 1 Test team ☑️
— BCCI (@BCCI) September 22, 2023 " class="align-text-top noRightClick twitterSection" data="
No. 1 ODI team ☑️
No. 1 T20I team ☑️#TeamIndia reigns supreme across all formats 👏👏 pic.twitter.com/rB5rUqK8iH
">No. 1 Test team ☑️
— BCCI (@BCCI) September 22, 2023
No. 1 ODI team ☑️
No. 1 T20I team ☑️#TeamIndia reigns supreme across all formats 👏👏 pic.twitter.com/rB5rUqK8iHNo. 1 Test team ☑️
— BCCI (@BCCI) September 22, 2023
No. 1 ODI team ☑️
No. 1 T20I team ☑️#TeamIndia reigns supreme across all formats 👏👏 pic.twitter.com/rB5rUqK8iH
ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಜಯ ಸಾಧಿಸಿ ಈ ಸಾಧನೆ ಮಾಡಿದೆ. ಸ್ಟಾಂಡ್ ಇನ್ ನಾಯಕ ಕೆಎಲ್ ರಾಹುಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ನಂತರ ಮೊಹಮ್ಮದ್ ಶಮಿ ಅವರ ಐದು ವಿಕೆಟ್ ಕಬಳಿಸಿ ಆಸ್ಟ್ರೇಲಿಯಾವನ್ನು 276ಕ್ಕೆ ಕಟ್ಟಿಹಾಕಿದರು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ತಲಾ ಅರ್ಧಶತಕ ಹಾಗೂ 142 ರನ್‌ಗಳ ಆರಂಭಿಕ ಜೊತೆಯಾಟವನ್ನು ಕಂಡಿತು. ಆದರೆ ಮೂರು ಮತ್ತು ನಾಲ್ಕನೇ ವಿಕೆಟ್ ವಿಫಲವಾಯಿತು. ಆದರೆ 5ನೇ ವಿಕೆಟ್ಗೆ ಒಂದಾದ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಅರ್ಧಶತಕ ಗಳಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
-
🇮🇳 Numero Uno in Test, ODI, and T20I cricket.
— Jay Shah (@JayShah) September 22, 2023 " class="align-text-top noRightClick twitterSection" data="
Heartiest congratulations to #TeamIndia for achieving this historic milestone. The rankings reflect the hard work put in by this team as they chase excellence on the field. This is fantastic achievement just ahead of the World Cup.… pic.twitter.com/wR4JDlqBJy
">🇮🇳 Numero Uno in Test, ODI, and T20I cricket.
— Jay Shah (@JayShah) September 22, 2023
Heartiest congratulations to #TeamIndia for achieving this historic milestone. The rankings reflect the hard work put in by this team as they chase excellence on the field. This is fantastic achievement just ahead of the World Cup.… pic.twitter.com/wR4JDlqBJy🇮🇳 Numero Uno in Test, ODI, and T20I cricket.
— Jay Shah (@JayShah) September 22, 2023
Heartiest congratulations to #TeamIndia for achieving this historic milestone. The rankings reflect the hard work put in by this team as they chase excellence on the field. This is fantastic achievement just ahead of the World Cup.… pic.twitter.com/wR4JDlqBJy
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ಮತ್ತು ಆಸ್ಟ್ರೇಲಿಯಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದ ನಡುವೆ ಏಕದಿನ ತಂಡದ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿತ್ತು. ಒಮ್ಮೆ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಅಂಕರಿಸಿ ನಂತರ ದಕ್ಷಿಣ ಆಫ್ರಿಕಾದಲ್ಲಿ ಮೂರು ಸೋಲು ಕಂಡು ಸ್ಥಾನದಿಂದ ಕೆಳಗಿಳಿಯಿತು.
ಮೂರು ಮಾದರಿಯಲ್ಲಿ ನಂ.1 ತಂಡ ಭಾರತ: ಭಾರತದ ಪ್ರಾಬಲ್ಯವು ಈಗ ಎಲ್ಲ ಮೂರು ಕ್ರಿಕೆಟ್ ಸ್ವರೂಪಕ್ಕೆ ವಿಸ್ತರಿಸಿದೆ. ಈಗಾಗಲೇ ಟೆಸ್ಟ್ ಮತ್ತು ಟಿ-20ಯಲ್ಲಿ ನಂ.1 ಸ್ಥಾನವನ್ನು ಭಾರತ ಅಲಂಕರಿಸಿತ್ತು. ಪುರುಷರ ಕ್ರಿಕೆಟ್ ಇತಿಹಾಸದಲ್ಲಿ ಇದು ಕೇವಲ ಎರಡನೇ ಬಾರಿಗೆ ಒಂದು ತಂಡವು ಮೂರು ಮಾದರಿಯ ಕ್ರಿಕೆಟ್ನಲ್ಲಿ ನಂ.1 ಶ್ರೇಯಾಂಕವನ್ನು ಸಾಧಿಸಿದೆ. ಇದಕ್ಕೂ ಮೊದಲು 2012ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಈ ಸಾಧನೆ ಮಾಡಿತ್ತು.
ದೀರ್ಘ ಸ್ವರೂಪದಲ್ಲಿ, ಭಾರತವು ಗಮನಾರ್ಹ ಸ್ಥಿರತೆಯನ್ನು ಪ್ರದರ್ಶಿಸಿದೆ. ಇದರ ಪರಿಣಾಮವಾಗಿ ಜೂನ್‌ನಲ್ಲಿ ತಮ್ಮ ಸತತ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿತು. ಆದರೂ ಕಳೆದ ಬಾರಿ ನ್ಯೂಜಿಲೆಂಡ್ ವಿರುದ್ಧ ಸೋಲುಕಂಡರೆ, ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋಲು ಚಾಂಪಿಯನ್‌ಶಿಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಈ ಬಾರಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವ ಕಾರಣ 2011ರ ಇತಿಹಾಸ ಮತ್ತೆ ಮರುಕಳಿಸುವುದೇ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: IND vs AUS: ನಾಲ್ವರು ಬ್ಯಾಟರ್ಗಳ ಅರ್ಧಶತಕ... ಆಸೀಸ್ ವಿರುದ್ಧ ಐದು ವಿಕೆಟ್‌ಗಳ ಜಯ.. ರ್ಯಾಂಕಿಂಗ್ನಲ್ಲಿ ಭಾರತ ನಂ.1