ETV Bharat / sports

ಮುಂದಿನ 48 ಗಂಟೆಯಲ್ಲಿ T-20 ವಿಶ್ವಕಪ್​ಗೆ ಕೊಹ್ಲಿ ಪಡೆ ಪ್ರಕಟ.. ಈ ಮುಖಗಳಿಗೆ ಸ್ಥಾನ ಬಹುತೇಕ ಖಚಿತ.. - ವಿಶ್ವಕಪ್​ಗೆ ಟೀಂ ಇಂಡಿಯಾ

ಗಾಯಗೊಂಡಿರುವ ವಾಷಿಂಗ್ಟನ್​ ಸುಂದರ್​ ಸ್ಥಾನಕ್ಕೆ ರೈಟ್​ ಆರ್ಮ್​ ಸ್ಪಿನ್ನರ್​​ ಆಗಿರುವ ಆರ್ ಅಶ್ವಿನ್​ ಅವಕಾಶ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ವೇಗದ ಬೌಲರ್​ ಭುವನೇಶ್ವರ್​​ ಕುಮಾರ್​​, ಆಲ್​ರೌಂಡರ್ ಶಾರ್ದೂಲ್ ಠಾಕೂರ್​ ಹೆಚ್ಚುವರಿ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ತನ್ನ ಟಿ-20 ವಿಶ್ವಕಪ್​ ಅಭಿಯಾನ ಆರಂಭ ಮಾಡಲಿದೆ..

Team india
Team india
author img

By

Published : Sep 6, 2021, 5:25 PM IST

ಮುಂಬೈ : ಅಕ್ಟೋಬರ್​​ 17ರಿಂದ ಯುಎಇನಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅದಕ್ಕಾಗಿ ಮುಂದಿನ 24 ರಿಂದ 48 ಗಂಟೆಯಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯ ಈ ಸಂಜೆ ಮುಕ್ತಾಯಗೊಂಡರೆ ನಾಳೆ ಮಧ್ಯಾಹ್ನದೊಳಗೆ ಟೀಂ ಇಂಡಿಯಾ ಪ್ರಕಟಗೊಳ್ಳಬಹುದು. ಇಲ್ಲವೇ ನಾಳೆ ರಾತ್ರಿಯೊಳಗೆ ಕೊಹ್ಲಿ ಪಡೆ ಘೋಷಣೆಯಾಗಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

15 ಸದಸ್ಯರ ತಂಡ ಪ್ರಕಟ

15 ಸದಸ್ಯರನ್ನೊಳಗೊಂಡ ತಂಡ ಪ್ರಕಟಗೊಳ್ಳಲಿದ್ದು, ತಂಡದಲ್ಲಿ ಆರಂಭಿಕರಾಗಿ ರೋಹಿತ್​ ಶರ್ಮಾ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಬ್ಯಾಟ್​ ಬೀಸುವುದು ಬಹುತೇಕ ಖಚಿತ. ಆರಂಭಿಕರಾಗಿ ಶಿಖರ್​ ಧವನ್ ಜೊತೆ ಪೃಥ್ವಿ ಶಾ ಫೈಟ್​ ಮಾಡಲಿದ್ದಾರೆ.

ಈ ಎಲ್ಲ ಪ್ಲೇಯರ್ಸ್​ಗೆ ಸ್ಥಾನ ಖಚಿತ

ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ, ರಿಷಭ್ ಪಂತ್ ಹಾಗೂ ಸೂರ್ಯಕುಮಾರ್​ ಯಾದವ್​ ಇರಲಿದ್ದು, ಶ್ರೇಯಸ್​ ಅಯ್ಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಲ್​ರೌಂಡರ್​ ಸ್ಥಾನದಲ್ಲಿ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯಾ ಹಾಗೂ ಕೃನಾಲ್ ಪಾಂಡ್ಯ ಫಿಕ್ಸ್ ಎಂದು ಹೇಳಲಾಗುತ್ತಿದೆ. ಉಳಿದಂತೆ ಬೌಲಿಂಗ್​ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್​, ದೀಪಕ್​ ಚಹರ್ ಹಾಗೂ ಯಜುವೇಂದ್ರ ಚಹಲ್​ ಇರಲಿದ್ದಾರೆ.

Team india
ಶ್ರೇಯಸ್ ಅಯ್ಯರ್​-ಹಾರ್ದಿಕ್​ ಪಾಂಡ್ಯಾ

ಇದನ್ನೂ ಓದಿರಿ: ಇಂಗ್ಲೆಂಡ್​ ವಿರುದ್ಧ ಅದ್ಭುತ ಪ್ರದರ್ಶನ.. ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವ ಪಡೆದ ಬುಮ್ರಾ..

ಟಿ-20 ವಿಶ್ವಕಪ್​​ಗೆ ಟೀಂ ಇಂಡಿಯಾ ಸಂಭವನೀಯ ತಂಡ

ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್ ಶರ್ಮಾ(ಉಪನಾಯಕ), ಕೆ ಎಲ್​ ರಾಹುಲ್​, ಸೂರ್ಯಕುಮಾರ್ ಯಾದವ್​, ರಿಷಭ್​ ಪಂತ್​, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್​, ಜಸ್ಪ್ರೀತ್ ಬುಮ್ರಾ, ದೀಪಕ್​ ಚಹರ್​, ಶ್ರೇಯಸ್​ ಅಯ್ಯರ್​, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ಮೊಹಮ್ಮದ್ ಶಮಿ, ಶಿಖರ್ ಧವನ್​, ಆರ್​.ಅಶ್ವಿನ್.​​

ಆರ್​.ಆಶ್ವಿನ್​ಗೂ ಅವಕಾಶ?

ಗಾಯಗೊಂಡಿರುವ ವಾಷಿಂಗ್ಟನ್​ ಸುಂದರ್​ ಸ್ಥಾನಕ್ಕೆ ರೈಟ್​ ಆರ್ಮ್​ ಸ್ಪಿನ್ನರ್​​ ಆಗಿರುವ ಆರ್ ಅಶ್ವಿನ್​ ಅವಕಾಶ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ವೇಗದ ಬೌಲರ್​ ಭುವನೇಶ್ವರ್​​ ಕುಮಾರ್​​, ಆಲ್​ರೌಂಡರ್ ಶಾರ್ದೂಲ್ ಠಾಕೂರ್​ ಹೆಚ್ಚುವರಿ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ತನ್ನ ಟಿ-20 ವಿಶ್ವಕಪ್​ ಅಭಿಯಾನ ಆರಂಭ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.