ಮುಂಬೈ (ಮಹಾರಾಷ್ಟ್ರ): ಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಪುರುಷರ ಐಪಿಎಲ್ ಪಂದ್ಯಗಳಂತೆ ಜನರನ್ನು ಆಕರ್ಷಸುವ ನಿರೀಕ್ಷೆ ಇದೆ. ಮಾರ್ಚ್ 4ರಿಂದ ಪಂದ್ಯಗಳು ಆರಂಭವಾಗಲಿದೆ. ಈಗಾಗಲೇ ಆಟಗಾರ್ತಿಯರ ಹರಾಜು ಆಗಿದ್ದು, ತಂಡಗಳು ಸನ್ನದ್ಧವಾಗಿದೆ. ಮಹಿಳಾ ಟಿ 20 ವಿಶ್ವಕಪ್ ಮುಗಿಯುತ್ತಿದ್ದಂತೆ ಭಾರತದಲ್ಲಿ ಡಬ್ಲ್ಯೂಪಿಎಲ್ ಆರಂಭವಾಗಲಿದೆ.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಟೈಟಲ್ ಸ್ಪಾನ್ಸರ್ ಆಗಿ ಟಾಟಾ ಗ್ರೂಪ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಪ್ರಕಟಿಸಿದ್ದಾರೆ. ಬಹುನಿರೀಕ್ಷಿತ ಮಹಿಳಾ ಕ್ರಿಕೆಟ್ ಲೀಗ್ ಟಾಟಾ ಸಹಭಾಗಿತ್ವದಿಂದ ಇನ್ನಷ್ಟು ಎತ್ತರಕ್ಕೆ ಹೋಗಲಿದೆ ಎಂದಿದ್ದಾರೆ.
"ಟಾಟ ಸಂಸ್ಥೆ ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಘೋಷಿಸಲು ನನಗೆ ಸಂತೋಷವಾಗಿದೆ. ಅವರ ಬೆಂಬಲದೊಂದಿಗೆ ನಾವು ಮಹಿಳಾ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ. @BCCI @BCCIWomen @wplt20," ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
-
I am delighted to announce the #TataGroup as the title sponsor of the inaugural #WPL. With their support, we're confident that we can take women's cricket to the next level. @BCCI @BCCIWomen @wplt20 pic.twitter.com/L05vXeDx1j
— Jay Shah (@JayShah) February 21, 2023 " class="align-text-top noRightClick twitterSection" data="
">I am delighted to announce the #TataGroup as the title sponsor of the inaugural #WPL. With their support, we're confident that we can take women's cricket to the next level. @BCCI @BCCIWomen @wplt20 pic.twitter.com/L05vXeDx1j
— Jay Shah (@JayShah) February 21, 2023I am delighted to announce the #TataGroup as the title sponsor of the inaugural #WPL. With their support, we're confident that we can take women's cricket to the next level. @BCCI @BCCIWomen @wplt20 pic.twitter.com/L05vXeDx1j
— Jay Shah (@JayShah) February 21, 2023
ಐಪಿಎಲ್ನ ಟೈಟಲ್ ಸ್ಪಾನ್ಸರ್ ಶಿಪ್ ಸಹ ಟಾಟ ಸಂಸ್ಥೆ ಮಾಡುತ್ತಿದೆ. ಫೆಬ್ರವರಿ 13 ರಂದು ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಮುಕ್ತಾಯದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2023 ರ ವೇಳಾಪಟ್ಟಿ ಪ್ರಕಟಿಸಿದೆ.
ಅದರ ಉದ್ಘಾಟನಾ ಆವೃತ್ತಿಯಲ್ಲಿ, ಐದು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಆಟಗಾರ್ತಿಯರಿಂದ ಕೂಡಿದೆ. ಅಂತಾರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳಲು ಆಟಗಾರ್ತಿಯರಿಗೆ ಇದೊಂದು ವಿಶೇಷ ವೇದಿಕೆಯಾಗಿರಲಿದೆ.
ಭಾರತದ ಸ್ಮೃತಿ ಮಂಧಾನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 3.40 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಅತೀ ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರ್ತಿಯಾಗಿದ್ದಾರೆ. ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ 1.80 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.
ವಿದೇಶಿ ಆಟಗಾರ್ತಿಯರಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ನಟಾಲಿ ಸ್ಕಿವರ್ ಅವರು ಕ್ರಮವಾಗಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್‌ಗೆ 3.20 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಭಾರತದ 19 ವರ್ಷದೊಳಗಿನವರ ತಂಡದ ಸ್ಟಾರ್ ಆಟಗಾರ್ತಿ ಮತ್ತು ಐಸಿಸಿ U19 ಟಿ20 ವಿಶ್ವಕಪ್ ವಿಜೇತ ನಾಯಕಿ ಶಫಾಲಿ ವರ್ಮಾ ಅವರು 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿಕೊಂಡಿದ್ದಾರೆ.
ಅದರ ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಒಟ್ಟು 20 ಲೀಗ್ ಪಂದ್ಯ ಮತ್ತು ಎರಡು ಪ್ಲೇಆಫ್ ಪಂದ್ಯ, ಫೈನಲ್ 23 ದಿನಗಳ ಅವಧಿಯಲ್ಲಿ ಆಡಲಾಗುತ್ತದೆ. ಮಾರ್ಚ್ 4 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಭಾನುವಾರ ಮಾರ್ಚ್ 5, 2023 ರಂದು, ಡಬ್ಲ್ಯುಪಿಎಲ್ ತನ್ನ ಮೊದಲ ಡಬಲ್ ಹೆಡರ್ ಪಂದ್ಯಗಳು ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬ್ರಬೋರ್ನ್ ಸ್ಟೇಡಿಯಂ ಪಂದ್ಯ ನಡೆಯಲಿದೆ. ಯುಪಿ ವಾರಿಯರ್ಜ್ ತನ್ನ ಲೀಗ್‌ನ ಮೊದಲ ಪಂದ್ಯವನ್ನು ಗುಜರಾತ್ ಜೈಂಟ್ಸ್ ವಿರುದ್ಧ ಡಿವೈ ಪಾಟೀಲ್ ಸ್ಟೇಡಿಯಂನ ಆಡಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮಂಧಾನ: 150 ಅಂತಾರಾಷ್ಟ್ರೀಯ ಪಂದ್ಯ ಆಡಿದ ಕೌರ್ ದಾಖಲೆ