ಗುವಾಹಟಿ : ದೇಶಿ ಕ್ರಿಕೆಟ್ನಲ್ಲಿ ತಮಿಳುನಾಡಿನ ಶಾರುಖ್ ಖಾನ್ ಅವರ ಸ್ಫೋಟಕ ಬ್ಯಾಟಿಂಗ್ ಮುಂದುವರಿದಿದೆ. ದೆಹಲಿ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲೂ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ.
ತಮಿಳುನಾಡು 165ಕ್ಕೆ5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಇಳಿದ ಶಾರುಖ್, ದೆಹಲಿ ಬೌಲರ್ಗಳನ್ನು ಧೂಳೀಪಟ ಮಾಡಿದ್ದಾರೆ. 52 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು, 89 ಎಸೆತಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಶತಕ ಸಿಡಿಸಿದರು.
ನಂತರ 24 ಎಸೆತಗಳಲ್ಲಿ 150 ರನ್ ಗಡಿ ದಾಟಿದರು. ಅವರ 132.7ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ ಯುವ ಬ್ಯಾಟರ್ ಒಟ್ಟಾರೆ 148 ಎಸೆತಗಳಲ್ಲಿ 20 ಬೌಂಡರಿ ಮತ್ತು 10 ಸಿಕ್ಸರ್ಗಳ ಸಹಿತ 198 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ದೆಹಲಿ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 141.2 ಓವರ್ಗಳಲ್ಲಿ ಯಶ್ ಧುಲ್(113) ಮತ್ತು ಲಲಿತ್ ಯಾದವ್(177) ಅವರ ಶತಕಗಳ ನೆರವಿನಿಂದ 452 ರನ್ಗಳಿಸಿತ್ತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ತಮಿಳುನಾಡು 100.2 ಓವರ್ಗಳಲ್ಲಿ6 ವಿಕೆಟ್ ಕಳೆದುಕೊಂಡು 474 ರನ್ಗಳಿಸಿದೆ. ಶಾರುಖ್ 198ರನ್ಗಳಿಸಿದರೆ, ಇವರಿಗೆ ಸಾಥ್ ನೀಡಿದ ಬಾಬಾ ಇಂದ್ರಜಿತ್ 149 ಎಸೆತಗಳಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 117 ರನ್ಗಳಿಸಿದ್ದರು.
ಇದನ್ನೂ ಓದಿ: ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್ ಗನಿ