ನವದೆಹಲಿ: ಈ ಬಾರಿಯ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಭಾರತದಿಂದ ಶಿಫ್ಟ್ ಆಗುವ ಎಲ್ಲ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಐಸಿಸಿ ಈ ಕುರಿತಂತೆ ಬಿಸಿಸಿಐಗೆ ಅಂತಿಮ ನಿರ್ಧಾರ ತಿಳಿಸಿದ್ದು, ಯುಎಇಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಯುಎಇ ಮೊದಲ ಆಯ್ಕೆಯಾಗಿದ್ದರೆ. ಅಕ್ಟೋಬರ್ ಕೊನೆಯ ವಾರದಲ್ಲಿ ಓಮನ್ ರಾಜಧಾನಿ ಮಸ್ಕತ್, ದುಬೈ, ಶಾರ್ಜಾದಲ್ಲಿ ನಡೆಸಲಿ ಸಜ್ಜಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಐಸಿಸಿ ಜೊತೆಗಿನ ಅನೌಪಚಾರಿಕ ಸಭೆಯಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸುವ ಬಿಸಿಸಿಐ 4 ವಾರಗಳ ಸಮಯಾವಕಾಶ ಕೋರಿದೆ. ಆದರೆ, ಟೂರ್ನಿಯ ಆಯೋಜಕತೆಯ ಹಕ್ಕು ಉಳಿಸಿಕೊಳ್ಳಲು ಬಯಸಿದ್ದು, ಯುಎಇ ಅಥವಾ ಓಮನ್ಗೆ ಸ್ಥಳಾಂತರ ಅಭ್ಯಂತರವಿಲ್ಲ ಎಂಬ ಭಾವನೆ ಬಿಸಿಸಿಐ ತಳೆದಿದೆ ಎಂದು ಐಸಿಸಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
31 ಐಪಿಎಲ್ ಪಂದ್ಯಾವಳಿಯ ಬಳಿಕ ಯುಎಇಯ ಮೂರು ಮೈದಾನಗಳು ಟಿ-20 ವಿಶ್ವಕಪ್ಗಾಗಿ ಸಿದ್ಧಗೊಳ್ಳಲಿವೆ. ಅಕ್ಟೋಬರ್ 10 ರೊಳಗೆ ಐಪಿಎಲ್ ಮುಗಿಯುವುದಾದರೆ, ವಿಶ್ವ ಟಿ-20ಯ ಆರಂಭಿಕ ಪಂದ್ಯಗಳು ನವೆಂಬರ್ನಲ್ಲಿ ಆರಂಭವಾಗಬಹುದು ಎಂದಿದ್ದಾರೆ.
8 ತಂಡಗಳ ಐಪಿಎಲ್ ಅನ್ನೇ ಸೆಪ್ಟೆಂಬರ್ ವೇಳೆಗೆ ಆಯೋಜಿಸಲು ಸಾಧ್ಯವಾಗದಿದ್ದರೆ 16 ತಂಡಗಳ ಟೂರ್ನಿಯನ್ನ ಒಂದು ತಿಂಗಳ ನಂತರ ನಡೆಸುವುದು ಹೇಗೆ ಸಾಧ್ಯ. 16 ತಿಂಗಳಲ್ಲಿ ಯಾವುದಾದರೊಂದು ತಂಡ ಸದಸ್ಯನಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಅವರ ಬದಲಿ ಆಟಗಾರನ ಆಯ್ಕೆ ಕಷ್ಟವಾಗುತ್ತದೆ. ಇದು ಐಪಿಎಲ್ ಟೂರ್ನಿಗಿಂತಲೂ ಭಿನ್ನವಾಗಿರುತ್ತದೆ. ಅಲ್ಲದೇ ಆಟಗಾರರು ಯುಎಇಯಲ್ಲಿ ಟೂರ್ನಿ ಆಡಲು ಬಯಸುವಂತೆ ಭಾರತದಲ್ಲಿ ಬಯಸುವುದು ಅನುಮಾನವಾಗಿದೆ ಎಂದಿದ್ದಾರೆ.