ಸಿಡ್ನಿ(ಆಸ್ಟ್ರೇಲಿಯಾ): ಮಳೆಯ ಅಡ್ಡಿಯ ನಡುವೆಯೂ ತನ್ನ ಬೌಲಿಂಗ್ ಶಕ್ತಿಯಿಂದ ಹರಿಣಗಳನ್ನು ಕಟ್ಟಿಹಾಕಿದ ಪಾಕಿಸ್ತಾನ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆ ಜೀವಂತವಾಗಿಟ್ಟುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಇಫ್ತಿಕಾರ್ ಅಹ್ಮದ್ ಮತ್ತು ಆಲ್ರೌಂಡರ್ ಶಾದಾಬ್ ನದೀಮ್ರ ಭರ್ಜರಿ ಪ್ರದರ್ಶನದಿಂದ 9 ವಿಕೆಟ್ಗೆ 185 ರನ್ ಗಳಿಸಿತು. ಗೆದ್ದು ಸೆಮಿಫೈನಲ್ ಖಚಿತಪಡಿಸಿಕೊಳ್ಳುವ ಆತುರದಲ್ಲಿದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೈಫಲ್ಯದಿಂದ ಡಕ್ವರ್ಥ್ ಲೂಯಿಸ್ ನಿಮಯದ ಪ್ರಕಾರ 14 ಓವರ್ಗಳಲ್ಲಿ 108 ರನ್ ಗಳಿಸಿ ಸೋಲು ಕಂಡಿತು.
ಮಳೆಗೆ ಕೊಚ್ಚಿ ಹೋದ ಹರಿಣಗಳು: 8 ಓವರ್ಗಳಲ್ಲಿ 66 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಲ್ಲಿದ್ದ ದಕ್ಷಿಣ ಆಫ್ರಿಕಾ ಆಟಕ್ಕೆ ಮಳೆ ಅಡ್ಡಿಯಾಯಿತು. ಸಿಡ್ನಿ ಮೈದಾನ ಮಳೆಗೆ ತೊಯ್ದು ಒದ್ದೆಯಾಯಿತು. ಮಳೆ ನಿಂತ ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 14 ಓವರ್ಗೆ ಆಟವನ್ನು ಕಡಿತಗೊಳಿಸಿ ಆಫ್ರಿಕಾಗೆ 142 ರನ್ಗಳ ಗುರಿ ನೀಡಲಾಯಿತು.
-
Pakistan keep semi-final hopes alive, clinching a win in the Group 2 clash against South Africa 🌟#T20WorldCup | #PAKvSA | 📝: https://t.co/3VVq7VAJLt pic.twitter.com/hfsNzCivam
— ICC (@ICC) November 3, 2022 " class="align-text-top noRightClick twitterSection" data="
">Pakistan keep semi-final hopes alive, clinching a win in the Group 2 clash against South Africa 🌟#T20WorldCup | #PAKvSA | 📝: https://t.co/3VVq7VAJLt pic.twitter.com/hfsNzCivam
— ICC (@ICC) November 3, 2022Pakistan keep semi-final hopes alive, clinching a win in the Group 2 clash against South Africa 🌟#T20WorldCup | #PAKvSA | 📝: https://t.co/3VVq7VAJLt pic.twitter.com/hfsNzCivam
— ICC (@ICC) November 3, 2022
ಭಾರತ ವಿರುದ್ಧ ಸೋತು ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ನಿಖರ ದಾಳಿ ಮಾಡಿದ ಪಾಕ್ ಬೌಲಿಂಗ್ ಅಸ್ತ್ರ ಶಾಹೀನ್ ಶಾ ಆಫ್ರಿದಿ 3 ಪ್ರಮುಖ ವಿಕೆಟ್ ಕಿತ್ತರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಶಾದಾಬ್ ಖಾನ್ 2 ವಿಕೆಟ್ ಪಡೆದರು.
ಮಳೆಗೂ ಮೊದಲು ನಾಯಕ ತೆಂಬಾ ಬವುಮಾ 36, ಆ್ಯಡನ್ ಮಾರ್ಕ್ರಮ್ 20, ಹೆನ್ರಿಕ್ ಕ್ಲಾಸಿನ್ 15, ಟ್ರಿಸ್ಟನ್ ಸ್ಟಬ್ಸ್ 18 ರನ್ ಗಳಿಸಿದರು. ಉಳಿದ್ಯಾವ ಬ್ಯಾಟರ್ಗಳು ಎರಡಂಕಿ ದಾಟಲಿಲ್ಲ. ಇದರಿಂದ ದಕ್ಷಿಣ ಆಫ್ರಿಕಾ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿತು.
ಇಫ್ತಿಕಾರ್ ಅಹ್ಮದ್, ಶಾದಾಬ್ ಖಾನ್ ಅರ್ಧಶತಕ: ಟಾಸ್ ಗೆದ್ದು ಮೊದಲು ಬ್ಯಾಟ್ ಪಾಕಿಸ್ತಾನಕ್ಕೆ ಮತ್ತೆ ಆರಂಭಿಕ ಆಘಾತ ಎದುರಾಯಿತು. ತಂಡದ ಆಧಾರಸ್ತಂಭಗಳಾದ ನಾಯಕ ಬಾಬರ್ ಅಜಂ, ಮಹಮದ್ ರಿಜ್ವಾನ್ ಮತ್ತೆ ಕೈಕೊಟ್ಟರು. ಅದರಲ್ಲೂ ಬಾಬರ್ ಅಜಂ ವಿಶ್ವಕಪ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಮೊಹಮದ್ ಹ್ಯಾರೀಸ್ 28, ಕಳೆದೆರಡು ಪಂದ್ಯಗಳ ವಿಲನ್ ಮೊಹಮದ್ ನವಾಜ್ 28 ರನ್ ಗಳಿಸಿ ಔಟಾದರು.
ಬಳಿಕ ಜೊತೆಯಾದ ಶಾದಾಬ್ ಖಾನ್ ಮತ್ತು ಇಫ್ತಿಕಾರ್ ಅಹ್ಮದ್ ಹರಿಣಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಸಿಡಿಸಿದರು. ಇಫ್ತಿಕಾರ 35 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ಗಳಿಂದ 51, ಶಾದಾಬ್ ಖಾನ್ 4 ಸಿಕ್ಸರ್, 3 ಬೌಂಡರಿಗಳಿಂದ 52 ರನ್ ಮಾಡಿದರು. ದಕ್ಷಿಣ ಆಫ್ರಿಕಾ ಪರವಾಗಿ ಆ್ಯನ್ರಿಚ್ ನೋಕಿಯಾ 4 ವಿಕೆಟ್ ಪಡೆದು ಯಶಸ್ವಿಯಾದರು.
ಓದಿ: ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾರತದ ಕೊಹ್ಲಿ, ಜೆಮಿಮಾ, ದೀಪ್ತಿ ನಾಮನಿರ್ದೇಶನ