ದುಬೈ: ಭಾರತ ತಂಡದ ಮೆಂಟರ್ ಎಂ ಎಸ್ ಧೋನಿ ಹಾಗೂ ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಭೇಟಿಯಾಗಿ ಮಾತನಾಡಿದ್ದು ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮತ್ತೊಂದು ಕಡೆ ಕ್ರಿಕೆಟ್ ಜಗತ್ತಿನ ಸ್ಫೋಟಕ ಬ್ಯಾಟರ್ ಒಂದೆಡೆ ಸೇರಿದ್ದನ್ನು ಅವಿಸ್ಮರಣೀಯ ಕ್ಷಣ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಆಂಗ್ಲರ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ್ದ 189 ರನ್ಗಳ ಗುರಿಯನ್ನು ಇನ್ನು ಒಂದು ಓವರ್ ಉಳಿದಿರುವಂತೆ ಟೀಮ್ ಇಂಡಿಯಾ ಚೇಸ್ ಮಾಡಿ ಗೆದ್ದುಕೊಂಡಿತು.
-
Two legends 🙌
— BCCI (@BCCI) October 18, 2021 " class="align-text-top noRightClick twitterSection" data="
One memorable moment 👏
When @msdhoni & @henrygayle caught up. 👍 👍#TeamIndia #T20WorldCup pic.twitter.com/mBOyJ3oe2K
">Two legends 🙌
— BCCI (@BCCI) October 18, 2021
One memorable moment 👏
When @msdhoni & @henrygayle caught up. 👍 👍#TeamIndia #T20WorldCup pic.twitter.com/mBOyJ3oe2KTwo legends 🙌
— BCCI (@BCCI) October 18, 2021
One memorable moment 👏
When @msdhoni & @henrygayle caught up. 👍 👍#TeamIndia #T20WorldCup pic.twitter.com/mBOyJ3oe2K
ಈ ಪಂದ್ಯಕ್ಕೂ ಮುನ್ನ ಲೆಜೆಂಡರಿ ಕ್ರಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಂ ಎಸ್ ಧೋನಿ ಮೈದಾನದಲ್ಲಿ ಕಾಣಿಸಿಕೊಂಡು ಚರ್ಚೆ ಮಾಡುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
"ಇಬ್ಬರು ದಿಗ್ಗಜರು, ಎಂ ಎಸ್ ಧೋನಿ ಮತ್ತು ಕ್ರಿಸ್ ಗೇಲ್ ಒಂದೆಡೆ ಸೇರಿದಾಗ, ಇದು ಒಂದು ಸ್ಮರಣೀಯ ಕ್ಷಣ " ಎಂದು ಕ್ಯಾಪ್ಷನ್ ನೀಡಿ ಬಿಸಿಸಿಐ ಇಬ್ಬರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಈ ಪೋಸ್ಟ್ಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದರೆ, 6 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿಕೊಂಡಿದ್ದಾರೆ.
-
Nothing but good vibes & smiles in Dubai.❤😁 #MissionMaroon #T20WorldCup #WestIndies pic.twitter.com/6LoEMAifa1
— Windies Cricket (@windiescricket) October 18, 2021 " class="align-text-top noRightClick twitterSection" data="
">Nothing but good vibes & smiles in Dubai.❤😁 #MissionMaroon #T20WorldCup #WestIndies pic.twitter.com/6LoEMAifa1
— Windies Cricket (@windiescricket) October 18, 2021Nothing but good vibes & smiles in Dubai.❤😁 #MissionMaroon #T20WorldCup #WestIndies pic.twitter.com/6LoEMAifa1
— Windies Cricket (@windiescricket) October 18, 2021
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲಾತಾಣದ ಖಾತೆಗಳಲ್ಲಿ ಎಂ ಎಸ್ ಧೋನಿ, ಡ್ವೇನ್ ಬ್ರಾವೋ, ರಿಷಭ್ ಪಂತ್, ನಿಕೋಲಸ್ ಪೂರನ್ ಗೇಲ್, ಮತ್ತು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಇರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದೆ.
ಇದನ್ನು ಓದಿ:ಸ್ಫೋಟಕ ಆಲ್ರೌಂಡರ್ಗೆ ಗಾಯ: ವಿಶ್ವಕಪ್ಗೆ ಮುನ್ನವೇ ಇಂಗ್ಲೆಂಡ್ಗೆ ಆಘಾತ