ETV Bharat / sports

T20 World Cup: ಶ್ರೀಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಆಸೀಸ್​ಗೆ ಆಘಾತ - ಟಿ20 ವಿಶ್ವಕಪ್ 2021

ವಿಶ್ವದ ಟಾಪ್​ ಬೌಲರ್​ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್​ ಬುಧವಾರ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ವೇಳೆ ಕುಂಟುತ್ತಿರುವುದು ಮತ್ತು ನೋವಿನಿಂದ ನರಳಾಡುತ್ತಿರುವುದು ಕಂಡುಬಂದಿತ್ತು. ನೆಟ್ಸ್​ನಲ್ಲಿ ಬೌಲಿಂಗ್ ಮಾಡುವ ವೇಳೆ ಎಡಗೈ ವೇಗಿಯ ಬಲ ಮೊಣಕಾಲಿಗೆ ಪೆಟ್ಟುಬಿದ್ದಿರುವುದು ಅವರನ್ನು ಸಮಸ್ಯೆಗೀಡು ಮಾಡಿರಬಹುದು ಎನ್ನಲಾಗುತ್ತಿದೆ.

Injured Starc in doubt for Sri Lanka match

author img

By

Published : Oct 28, 2021, 4:24 PM IST

ದುಬೈ: ಐಸಿಸಿ ಟಿ20 ವಿಶ್ವಕಪ್​ನಲ್ಲಿ ಗುರುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತವಾಗಿದೆ. ತರಬೇತಿ ವೇಳೆ ಸ್ಟಾರ್​ ಪೇಸರ್ ಮಿಚೆಲ್ ಸ್ಟಾರ್ಕ್​ ಗಾಯಗೊಂಡಿದ್ದಾರೆ. ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾದ ಮ್ಯಾನೇಜ್​ಮೆಂಟ್​ ಸ್ಟಾರ್ಕ್​ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿದುಬಂದಿದೆ.

ವಿಶ್ವದ ಟಾಪ್​ ಬೌಲರ್​ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್​ ಬುಧವಾರ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ವೇಳೆ ಕುಂಟುತ್ತಿರುವುದು ಮತ್ತು ನೋವಿನಿಂದ ನರಳಾಡುತ್ತಿರುವುದು ಕಂಡುಬಂದಿತ್ತು. ನೆಟ್ಸ್​ನಲ್ಲಿ ಬೌಲಿಂಗ್ ಮಾಡುವ ವೇಳೆ ಎಡಗೈ ವೇಗಿಯ ಬಲ ಮೊಣಕಾಲಿಗೆ ಪೆಟ್ಟುಬಿದ್ದಿರುವುದು ಅವರನ್ನು ಸಮಸ್ಯೆಗೀಡು ಮಾಡಿರಬಹುದು ಎನ್ನಲಾಗುತ್ತಿದೆ.

ಆದರೆ ಇಲ್ಲಿಯವರೆಗೂ ಆಸ್ಟ್ರೇಲಿಯಾ ಮ್ಯಾನೇಜ್​ಮೆಂಟ್​ ಸ್ಟಾರ್ಕ್​ ಅವರ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಗುರುವಾರ ನಡೆಯುವ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ.

ಒಂದು ವೇಳೆ ಸ್ಟಾರ್ಕ್​ ಕಣಕ್ಕಿಳಿಯದಿದ್ದರೆ, ಆಲ್​ರೌಂಡರ್​ ಆಷ್ಟನ್ ಅಗರ್​ ಅವರು 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ಕ್​ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ 32ಕ್ಕೆ 2 ವಿಕೆಟ್ ಪಡೆದಿದ್ದರು.

ಇದನ್ನು ಓದಿ:ಪಾಕಿಸ್ತಾನ ವಿರುದ್ಧದ ಸೋಲಿಗೆ ಕೊಹ್ಲಿ ನೀಡಿದ ಕಾರಣ: ಜಡೇಜಾ ಅಸಮಾಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.