ETV Bharat / sports

T20 World Cup: ನೆದರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಸೋಲು... ಸೆಮಿಫೈನಲ್​ಗೆ ಭಾರತ ಎಂಟ್ರಿ - ವಿಶ್ವಕಪ್​ನ ಸೆಮಿಫೈನಲ್​ಗೆ ಭಾರತ

T20 World Cup: ನಿರ್ಣಾಯಹ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದೆ. ಇದರಿಂದಾಗಿ ವಿಶ್ವಕಪ್​ನ ಸೆಮಿಫೈನಲ್​ಗೆ ಭಾರತ ಲಗ್ಗೆ ಇಟ್ಟಿದೆ.

T20 World Cup
T20 World Cup
author img

By

Published : Nov 6, 2022, 9:59 AM IST

ಟಿ 20 ವಿಶ್ವಕಪ್​ನ ಸೂಪರ್12ರ ನಿರ್ಣಾಯಕ ಪಂದ್ಯದಲ್ಲಿ ನೆದರ್ಲೆಂಡ್​ ವಿರುದ್ಧ ದಕ್ಷಿಣ ಆಫ್ರಿಕಾ ಸೋಲನುಭವಿಸಿದೆ. ಈ ಮೂಲಕ ಹರಿಣಗಳ ತಂಡಕ್ಕೆ ಸೆಮಿ ಎಂಟ್ರಿ ದುರ್ಗಮವಾಗಲಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ಸೆಮಿಫೈನಲ್​ ಎಂಟ್ರಿ ಖಚಿತವಾಗಿದೆ.

ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ನೆದರ್ಲೆಂಡ್​ ವಿರುದ್ಧದ ಪಂದ್ಯ ದಕ್ಷಿಣ ಆಫ್ರಿಕಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದ್ರೆ ದಕ್ಷಿಣ ಆಫ್ರಿಕಾ ಸೋತು ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

  • India go through!

    The Netherlands' thrilling victory over South Africa means India have officially qualified for the semi-finals 💥 pic.twitter.com/H4SRwrgX4B

    — T20 World Cup (@T20WorldCup) November 6, 2022 " class="align-text-top noRightClick twitterSection" data=" ">

ನೆದರ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. 159 ರನ್‌ಗಳ ಗುರಿ ಬೆನ್ನತ್ತಿದ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 145 ರನ್ ಗಳಿಸಿತು. ಈ ಮೂಲಕ 13 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ದಕ್ಷಿಣ ಆಫ್ರಿಕಾ ಪರ ಯಾವ ಆಟಗಾರ ಕೂಡ ಎದುರಾಳಿ ಬೌಲರ್​ಗಳನ್ನು ಎದುರಿಸಲು ಆಗಲಿಲ್ಲ. ಕ್ವಿಂಟನ್ ಡಿ ಕಾಕ್ 13, ನಾಯಕ ತೆಂಬ ಬವುಮಾ 20, ರೊಸ್ಸೋ 25, ಏಡನ್ ಮಾರ್ಕ್ರಮ್ 17, ಡೇವಿಡ್ ಮಿಲ್ಲರ್ 17, ಕ್ಲಸೇನ್ 21, ಕೇಶವ್ ಮಹರಾಜ್ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನೆದರ್ಲೆಂಡ್ ಪರ ಫ್ರೆಡ್ ಕ್ಲಸೇನ್, ಲೀದೇ ತಲಾ 2 ವಿಕೆಟ್, ಬ್ರಾಡನ್ ಗ್ಲೋವೆರ್ 3 ವಿಕೆಟ್ ಪಡೆದು ಗೆಲುವಿಗೆ ಕಾರಣರಾದರು.

ಇದಕ್ಕೂ ಮೊದಲ ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ಪರ ಮೈಬರ್ಗ್ 37, ಮ್ಯಾಕ್ಸ್ 29, ಟಾಮ್ ಕೂಪರ್ 35 ಮತ್ತು ಅಕೇರ್​ಮನ್ 41 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.

(ಓದಿ: ಟಿ 20 ವಿಶ್ವಕಪ್​: ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ವಿರುದ್ಧ ಸೆಣಸೋರ್ಯಾರು? )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.