ಟಿ20 ವಿಶ್ವಕಪ್ ಸಿದ್ಧತಾ ಭಾಗವಾಗಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸೀಸ್ ಗೆಲುವಿನ ತುದಿಯಲ್ಲಿ ಎಡವಿ 180 ರನ್ಗೆ ಆಲೌಟ್ ಆಗಿ ಸೋತಿತು.
186 ರನ್ಗಳ ಸವಾಲಿನ ಮೊತ್ತ ಬೆಂಬತ್ತಿದ ಕಾಂಗರೂ ಪಡೆಗೆ ನಾಯಕ ಆ್ಯರೋನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಅದ್ಭುತ ಆರಂಭ ನೀಡಿದರು. ಇನಿಂಗ್ಸ್ ಆರಂಭಿಸಿದ ಇಬ್ಬರು ಮಿಂಚಿನ ಬ್ಯಾಟಿಂಗ್ ಮಾಡಿದರು. 35 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಹೈ ಹಾಕಿದ ಮಾರ್ಷ್ ಭುವನೇಶ್ವರ್ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಬಳಿಕ ತಂಡದ ಗೆಲುವಿನ ಹೊಣೆ ಹೊತ್ತ ಫಿಂಚ್ (76) ಬಿರುಸಿನ ಅರ್ಧಶತಕ ಸಿಡಿಸಿದರು. ಸ್ವೀವನ್ ಸ್ಮಿತ್ 11, ಗ್ಲೆನ್ ಮ್ಯಾಕ್ಸ್ವೆಲ್ 23 ರನ್ ಗಳಿಸಿದರು.
ಆಸೀಸ್ ದಿಢೀರ್ ಪತನ: ಆ್ಯರೋನ್ ಫಿಂಚ್ರ ಹೋರಾಟದಿಂದ ಗೆಲುವಿನ ದಡದಲ್ಲಿದ್ದ ಆಸ್ಟ್ರೇಲಿಯಾ ಡೆತ್ ಓವರ್ನಲ್ಲಿ ದಿಢೀರ್ ಪತನ ಕಂಡಿತು. 5 ವಿಕೆಟ್ಗೆ 171 ಗಳಿಸಿದ್ದಾಗ ತಂಡ ಗೆಲ್ಲಲು 17 ರನ್ ಮಾತ್ರ ಅಗತ್ಯವಿತ್ತು. ಈ ವೇಳೆ ಮಿಂಚಿನ ದಾಳಿ ನಡೆಸಿದ ಭಾರತೀಯರು ಕೊನೆಯ 5 ವಿಕೆಟ್ಗಳನ್ನು ಕೇವಲ 10 ರನ್ಗಳ ಅಂತರದಲ್ಲಿ ಉರುಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಗೆಲುವಿನ ಹೊಸ್ತಿಲಲ್ಲಿ 180 ರನ್ಗೆ ಸರ್ವಪತನ ಕಂಡಿತು.
-
What A Win! 👌 👌#TeamIndia beat Australia by 6⃣ runs in the warm-up game! 👏 👏
— BCCI (@BCCI) October 17, 2022 " class="align-text-top noRightClick twitterSection" data="
Scorecard ▶️ https://t.co/3dEaIjgRPS #T20WorldCup | #INDvAUS pic.twitter.com/yqohLzZuf2
">What A Win! 👌 👌#TeamIndia beat Australia by 6⃣ runs in the warm-up game! 👏 👏
— BCCI (@BCCI) October 17, 2022
Scorecard ▶️ https://t.co/3dEaIjgRPS #T20WorldCup | #INDvAUS pic.twitter.com/yqohLzZuf2What A Win! 👌 👌#TeamIndia beat Australia by 6⃣ runs in the warm-up game! 👏 👏
— BCCI (@BCCI) October 17, 2022
Scorecard ▶️ https://t.co/3dEaIjgRPS #T20WorldCup | #INDvAUS pic.twitter.com/yqohLzZuf2
ಶಮಿ ಸೂಪರ್ ಓವರ್: 20 ನೇ ಓವರ್ ಎಸೆಯಲು ಬಂದ ಜಸ್ಪ್ರೀತ್ ಬೂಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಹಿರಿಯ ವೇಗಿ ಮೊಹಮದ್ ಶಮಿ ಕಾಂಗರೂಗಳ ಪತನಕ್ಕೆ ಕಾರಣವಾದರು. ಕೊನೆಯ 6 ಎಸೆತಗಳಲ್ಲಿ ಗೆಲುವಿಗೆ 11 ರನ್ ಬೇಕಿತ್ತು. ದಾಳಿಗಿಳಿದ ಶಮಿ ಮೊದಲ 2 ಎಸೆತಗಳಲ್ಲಿ 4 ರನ್ ನೀಡಿದರೆ, ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದರು. ಇದರಲ್ಲಿ ಒಂದು ರನೌಟ್ ಮಾಡಿದರು. ಭುವನೇಶ್ವರ ಕುಮಾರ್ 2, ಅರ್ಷದೀಪ್ ಸಿಂಗ್ 1 ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.
ರಾಹುಲ್, ಸೂರ್ಯಕುಮಾರ್ ಫಿಫ್ಟಿ: ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ರ ಅರ್ಧಶತಕದ ಬಲದಿಂದ 186 ರನ್ ಗಳಿಸಿತು. ಅಭ್ಯಾಸ ಪಂದ್ಯಗಳಲ್ಲಿ ಮಿಂಚು ಹರಿಸುತ್ತಿರುವ ಕೆ.ಎಲ್ ರಾಹುಲ್ ಈ ಪಂದ್ಯದಲ್ಲೂ (57) ಅರ್ಧಶತಕ ಗಳಿಸಿದರು. ರೋಹಿತ್ 15, ಕೊಹ್ಲಿ 19 ರನ್ಗೆ ಗಳಿಸಿ ಔಟಾದರು.
ಬಳಿಕ ಬಂದ ಭಾರತ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವೈಭವ ಮುಂದುವರಿಸಿ 33 ಎಸೆತಗಳಲ್ಲಿ 50 ರನ್ ಸಿಡಿಸಿದರು. ಕೊನೆಯಲ್ಲಿ ಕಾರ್ತಿಕ್ 20 ರನ್ ಮಾಡಿದರು.
ಆಸೀಸ್ ಪರವಾಗಿ ಕೇನ್ ರಿಚರ್ಡ್ಸನ್ 4 ವಿಕೆಟ್ ಕಿತ್ತು ಯಶಸ್ವಿಯಾದರೆ, ಸ್ಟಾರ್ಕ್, ಮ್ಯಾಕ್ಸವೆಲ್, ಅಗರ್ ತಲಾ ಒಂದು ವಿಕೆಟ್ ಕಿತ್ತರು. ಭಾರತ ಮುಂದಿನ ಅಭ್ಯಾಸ ಪಂದ್ಯವನ್ನು ನ್ಯೂಜಿಲ್ಯಾಂಡ್ ಜೊತೆ ಆಡಲಿದೆ.
ಓದಿ: ತಂಡಕ್ಕೆ ಮರಳಲು ಕಠಿಣ ಶ್ರಮ, ಬದ್ಧತೆ ಬೇಕು.. ವೇಗಿ ಮೊಹಮದ್ ಶಮಿ ಭಾವನಾತ್ಮಕ ಟ್ವೀಟ್