ETV Bharat / sports

ಒಂದೆರೆಡು ಕೆಟ್ಟ ಪ್ರದರ್ಶನದ ಆಧಾರದ ಮೇಲೆ ನಮ್ಮ ತಂಡದ ಸಾಮರ್ಥ್ಯ ನಿರ್ಧರಿಸಬೇಡಿ: ಜಡೇಜಾ - ರವೀಂದ್ರ ಜಡೇಜಾ

ಟಿ20 ಕ್ರಿಕೆಟ್​​ನಲ್ಲಿ ಯಾವುದೇ ತಂಡವಾದರೂ ಒಂದು ಅಥವಾ ಎರಡು ಕೆಟ್ಟ ಪಂದ್ಯಗಳನ್ನು ಹೊಂದಿರುತ್ತದೆ. ಆದರೆ ಆ ಸೋಲುಗಳ ಬಗ್ಗೆ ತುಂಬಾ ಯೋಚನೆ ಮಾಡಬಾರದು. ನೋವನ್ನು ಮರೆತು ಮುಂದೆ ಹೋಗಬೇಕಾಗುತ್ತದೆ ಮತ್ತು ಮುಂದಿರುವ ಅವಕಾಶಗಳ ಬಗ್ಗೆ ಚಿಂತಿಸಬೇಕು. ಹಿಂದಿನ ಎರಡೂ ಪಂದ್ಯಗಳ ಪ್ರದರ್ಶನದಿಂದ ಸಕಾರಾತ್ಮಕತೆಯನ್ನು ಪಡೆದಿದ್ದೇವೆ ಮತ್ತು ಭವಿಷ್ಯದ ಪಂದ್ಯಗಳನ್ನಾಡಲು ಎದುರು ನೋಡುತ್ತಿದ್ದೇವೆ ಎಂದು ಅವರು ಜಡೇಜಾ ಹೇಳಿದ್ದಾರೆ.

T20 World Cup
ರವೀಂದ್ರ ಜಡೇಜಾ
author img

By

Published : Nov 6, 2021, 8:53 AM IST

ದುಬೈ: ಕಳೆದ 3 ವರ್ಷಗಳಿಂದ ದೇಶ-ವಿದೇಶಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ಒಂದೆರಡು ಒಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ತೋರಿರುವುದಕ್ಕೆ ತಂಡದ ಸಾಮರ್ಥ್ಯವನ್ನು ಅಳೆಯುವುದು ನ್ಯಾಯೋಚಿತವಲ್ಲ ಎಂದು ಹಿರಿಯ ಆಲ್​ರೌಂಡರ್​ ರವೀಂದ್ರ ಜಡೇಜಾ ಶುಕ್ರವಾರ ಹೇಳಿದ್ದಾರೆ.

ದುಬೈನಲ್ಲಿ ಸ್ಕಾಟ್ಲೆಂಡ್​ ವಿರುದ್ಧ ಕೇವಲ15 ರನ್​ ನೀಡಿ 3 ವಿಕೆಟ್ ಪಡೆದ ಜಡೇಜಾ ಪಂದ್ಯಶ್ರೇಷ್ಠ ಪ್ರದರ್ಶನಕ್ಕೆ ಭಾಜನರಾದರು. ಈ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್​ಗಳ ಸೋಲು ಕಂಡ ನಂತರ ಕೊಹ್ಲಿ ನಮ್ಮ ಆಟಗಾರರಲ್ಲಿ ಸಾಕಷ್ಟು ಧೈರ್ಯ ಕಾಣಿಸಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮಾತನಾಡಿರುವ ಜಡೇಜಾ, "ನೀವು ಕಳೆದ 2-3 ವರ್ಷಗಳ ತಂಡದ ಪ್ರದರ್ಶನವನ್ನು ನೋಡಿದಾಗ, ನಾವು ಭಾರತದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಒಳ್ಳೆಯ ಕ್ರಿಕೆಟ್ ಆಡಿದ್ದೇವೆ. ಆದ್ದರಿಂದ ಒಂದೆರಡು ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ತಂಡದ ಸಾಮರ್ಥ್ಯವನ್ನು ನಿರ್ಧರಿಸುವುದು ಸರಿಯಲ್ಲ" ಎಂದು ಸ್ಕಾಟ್ಲೆಂಡ್​ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದ ನಂತರ ತಿಳಿಸಿದ್ದಾರೆ.

ಟಿ20 ಕ್ರಿಕೆಟ್​​ನಲ್ಲಿ ಯಾವುದೇ ತಂಡವಾದರೂ ಒಂದು ಅಥವಾ ಎರಡು ಕೆಟ್ಟ ಪಂದ್ಯಗಳನ್ನು ಹೊಂದಿರುತ್ತದೆ. ಆದರೆ ಆ ಸೋಲುಗಳ ಬಗ್ಗೆ ತುಂಬಾ ಯೋಚನೆ ಮಾಡಬಾರದು. ನೋವನ್ನು ಮರೆತು ಮುಂದೆ ಹೋಗಬೇಕಾಗುತ್ತದೆ ಮತ್ತು ಮುಂದಿರುವ ಅವಕಾಶಗಳ ಬಗ್ಗೆ ಚಿಂತಿಸಬೇಕು. ಹಿಂದಿನ ಎರಡೂ ಪಂದ್ಯಗಳ ಪ್ರದರ್ಶನದಿಂದ ಸಕಾರಾತ್ಮಕತೆಯನ್ನು ಪಡೆದಿದ್ದೇವೆ ಮತ್ತು ಭವಿಷ್ಯದ ಪಂದ್ಯಗಳನ್ನಾಡಲು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಭಾರತ ತಂಡ ಟಿ20 ವಿಶ್ವಕಪ್​ನ ಸೂಪರ್​ 12ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಂಡರೆ, ಅಫ್ಘಾನಿಸ್ತಾನ್​ ಮತ್ತು ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ತನ್ನ ಕೊನೆಯ ಪಂದ್ಯವನ್ನು ನಮೀಬಿಯಾ ವಿರುದ್ಧ ಆಡಲಿದ್ದು, ಈ ಇದರಲ್ಲಿ ಗೆದ್ದರೂ ಭಾರತ ಸೆಮಿಫೈನಲ್ಸ್ ಪ್ರವೇಶಿಸಬೇಕಾದರೆ ಅಫ್ಘಾನಿಸ್ತಾನ ತಂಡ ಭಾನುವಾರ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಒಂದು ವೇಳೆ ಅಫ್ಘಾನ್​ ಸೋತರೆ ಕಿವೀಸ್ ತಂಡ ಪಾಕಿಸ್ತಾನ ಜೊತೆಗೆ ಸೆಮಿಫೈನಲ್ಸ್​ ಪ್ರವೇಶಿಸಲಿದೆ.

ಇದನ್ನು ಓದಿ:T20 World Cup: ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಮೋಘ ಗೆಲುವು, ಸೆಮೀಸ್ ಆಸೆ ಜೀವಂತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.