ETV Bharat / sports

ಚಹಾಲ್​,ಕುಲ್ದೀಪ್​ ಬಿಟ್ಟು 2017ರಲ್ಲಿ T-20 ಆಡಿರುವ ಅಶ್ವಿನ್​ಗೆ ಮಣೆ ಹಾಕಿದ BCCI; ಕಾರಣವಾಗಿದ್ದು ಈ ಅಂಶ! - ವಿಶ್ವಕಪ್​ನಲ್ಲಿ ಅಶ್ವಿನ್​

2017ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಟಿ-20 ಪಂದ್ಯವನ್ನಾಡಿರುವ ಆರ್​.ಅಶ್ವಿನ್​ಗೆ ಐಸಿಸಿ ಟಿ20 ವಿಶ್ವಕಪ್​ ತಂಡದಲ್ಲಿ ಅವಕಾಶ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ.

ashwin
ashwin
author img

By

Published : Sep 8, 2021, 10:45 PM IST

ಮುಂಬೈ: ಮುಂದಿನ ತಿಂಗಳ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್​ಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಕೆಲವೊಂದು ಹೊಸ ಪ್ರತಿಭೆಗಳು ಹಾಗೂ ಅನುಭವಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ವಿಶೇಷವಾಗಿ 2017ರಲ್ಲಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್ ಪಂದ್ಯ ಆಡಿರುವ ಆರ್​.ಅಶ್ವಿನ್​ಗೆ ಅವಕಾಶ ನೀಡಿದ್ದು, ಕೆಲವೊಂದು ಪ್ರಶ್ನೆ ಹುಟ್ಟುಹಾಕಿದೆ.

T20 World cup
T20 ವಿಶ್ವಕಪ್​ಗೆ ಟೀಂ ಇಂಡಿಯಾ

ಟಿ-20 ಕ್ರಿಕೆಟ್​ನ ಭಾರತದ ಖಾಯಂ ಸದಸ್ಯನಾಗಿದ್ದ ಯಜುವೇಂದ್ರ ಚಹಲ್​ ಹಾಗೂ ಚೈನಾಮ್ಯಾನ್ ಖ್ಯಾತಿಯ ಕುಲದೀಪ್​​​ ಯಾದವ್​ಗೆ ಕೈಬಿಟ್ಟು ಹಿರಿಯ ಆಟಗಾರ ಆರ್​​.ಅಶ್ವಿನ್​ಗೆ ಮಣೆ ಹಾಕಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯ್ಕೆ ಮಂಡಳಿ ಸ್ಪಷ್ಟನೆ ನೀಡಿದೆ.

ಅಶ್ವಿನ್​ ಆಯ್ಕೆಗೆ ಕಾರಣವಾಯಿತು ಈ ಅಂಶ!

ಟೀಂ ಇಂಡಿಯಾ ಹಿರಿಯ ಆಟಗಾರ ಆರ್​.ಅಶ್ವಿನ್​ ಆಯ್ಕೆ ಮಾಡಲು ಮುಖ್ಯ ಕಾರಣವಾಗಿದ್ದು, ಐಪಿಎಲ್​ನಲ್ಲಿ ನೀಡಿರುವ ಉತ್ತಮ ಪ್ರದರ್ಶನ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​​ ಶರ್ಮಾ ತಿಳಿಸಿದ್ದಾರೆ. ಭಾರತದಲ್ಲಿ ನಡೆದ ಐಪಿಎಲ್​ನಲ್ಲಿ ಅಶ್ವಿನ್​ ಉತ್ತಮ ಪ್ರದರ್ಶನ ನೀಡಿದ್ದರಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ... ಮೆಂಟರ್ ಆಗಿ ಆಯ್ಕೆಯಾದ ಎಂಎಸ್ ಧೋನಿ

ಐಪಿಎಲ್​​ನಲ್ಲಿ ಸತತವಾಗಿ ಆಡುತ್ತಿರುವ ಅಶ್ವಿನ್​ ಅದ್ಭುತ ಪ್ರದರ್ಶನ ನೀಡಿದ್ದು, ಆಫ್​​-ಸ್ಪಿನ್ನರ್​ ಆಗಿರುವ ಅವರು ಯುಎಇನಲ್ಲಿ ಉತ್ತಮ ಸಾಮರ್ಥ್ಯ ತೋರುವ ಸಾಧ್ಯತೆ ಇದೆ. ಜೊತೆಗೆ ಹಿರಿಯ ಆಟಗಾರನಾಗಿರುವ ಕಾರಣ ತಂಡಕ್ಕೆ ಕೆಲವೊಂದು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಐಪಿಎಲ್​ನಲ್ಲಿ ವಿಶ್ವದ ಪ್ರಮುಖ ಆಟಗಾರರು ಭಾಗಿಯಾಗುವ ಕಾರಣ ಟೀಂ ಇಂಡಿಯಾ ತಂಡ ಪ್ರಕಟ ಘೋಷಣೆ ಮಾಡುವಲ್ಲಿ ಇದರ ಪಾತ್ರ ಕೂಡ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಟೀಂ ಇಂಡಿಯಾ ಪರ 2017ರಲ್ಲಿ ಕೊನೆಯ ಟಿ-20 ಪಂದ್ಯವನ್ನಾಡಿರುವ ಆರ್​​​​.ಅಶ್ವಿನ್​ ಇದಾದ ಬಳಿಕ ಏಕದಿನ ಹಾಗೂ ಟೆಸ್ಟ್​ ಪಂದ್ಯದ ಭಾಗವಾಗಿದ್ದು, ಕಳೆದ ಕೆಲ ತಿಂಗಳಿಂದ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದರು. ಸದ್ಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಕ್ರಿಕೆಟ್​ನ ಭಾಗವಾಗಿರುವ ಅಶ್ವಿನ್​ಗೆ ಅವಕಾಶ ನೀಡಿಲ್ಲ. ಆದರೆ ಇದೀಗ ವಿಶ್ವಕಪ್​ ತಂಡಕ್ಕೆ ಅವರು ಭಾಗಿಯಾಗಿ, ಮತ್ತೊಮ್ಮೆ ಚುಟುಕು ಕ್ರಿಕೆಟ್​ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.