ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದ ಕ್ರಿಕೆಟ್ ಶಿಶು ಜಿಂಬಾಬ್ವೆ ಮತ್ತೊಂದು ಗೆಲುವಿನ ಹೊಸ್ತಿಲಲ್ಲಿ ಎಡವಿತು. ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 3 ರನ್ನಿಂದ ಪರಾಭವಗೊಂಡಿತು. ಇದು ಪಾಕ್ ವಿರುದ್ಧದ ಪಂದ್ಯದ ರೋಚಕತೆಯನ್ನೇ ಮರುಕಳಿಸಿತು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 7 ವಿಕೆಟ್ಗೆ 150 ರನ್ ಗಳಿಸಿತು. ಸವಾಲಿನ ಗುರಿ ಚೇಸ್ ಮಾಡಿದ ಜಿಂಬಾಬ್ವೆ ದಿಟ್ಟ ಹೋರಾಟ ನೀಡಿ 8 ವಿಕೆಟ್ಗೆ 147 ರನ್ ಮಾಡಿತು. ಬಾಂಗ್ಲಾ ಟೈಗರ್ಸ್ 3 ರನ್ನಿಂದ ಗೆದ್ದು ಅಂಕ ಪಟ್ಟಿಯಲ್ಲಿ 4 ಅಂಕಗಳೊಂದಿಗೆ 2 ನೇ ಸ್ಥಾನಕ್ಕೆ ಜಿಗಿಯಿತು.
-
What a match! 🥵
— ICC (@ICC) October 30, 2022 " class="align-text-top noRightClick twitterSection" data="
Bangladesh emerge victorious after a thrilling clash against Zimbabwe!#T20WorldCup | #BANvZIM | 📝https://t.co/Qi8dhfgeEW pic.twitter.com/qayCpqXi0y
">What a match! 🥵
— ICC (@ICC) October 30, 2022
Bangladesh emerge victorious after a thrilling clash against Zimbabwe!#T20WorldCup | #BANvZIM | 📝https://t.co/Qi8dhfgeEW pic.twitter.com/qayCpqXi0yWhat a match! 🥵
— ICC (@ICC) October 30, 2022
Bangladesh emerge victorious after a thrilling clash against Zimbabwe!#T20WorldCup | #BANvZIM | 📝https://t.co/Qi8dhfgeEW pic.twitter.com/qayCpqXi0y
ಸೀನ್ ವಿಲಿಯಮ್ಸ್ ಏಕಾಂಗಿ ಫೈಟ್: ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ಕ್ರೇಗ್ ಇರ್ವಿನ್ ಪಡೆ ಬಾಂಗ್ಲಾದೇಶ ವಿರುದ್ಧವೂ ಮತ್ತೊಂದು ಶಾಕಿಂಗ್ ಇನಿಂಗ್ಸ್ ಕಟ್ಟಿತು. ಆರಂಭಿಕರು ಕೈಕೊಟ್ಟರೂ ಏಕಾಂಗಿ ಹೋರಾಟ ನಡೆಸಿದ ಸೀನ್ ವಿಲಿಯಮ್ಸ್ 42 ಎಸೆತಗಳಲ್ಲಿ 8 ಬೌಂಡರಿ ಸಮೇತ 64 ರನ್ ಚಚ್ಚಿದರು. ರೇಗಿಸ್ ಚಕಬ್ವಾ 15, ರ್ಯಾನ್ ಬರ್ಲ್ ಔಟಾಗದೇ 27 ರನ್ ಗಳಿಸಿದರು. ಪಂದ್ಯ ಗೆಲ್ಲಲು 8 ಎಸೆತಗಳಲ್ಲಿ 16 ರನ್ ಅಗತ್ಯವಿದ್ದಾಗ ಸೀನ್ ವಿಲಿಯಮ್ಸ್ ರನೌಟ್ ಆದರು.
ಬಳಿಕ ಸತತ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೊಳಗಾದ ಜಿಂಬಾಬ್ವೆ ಕೊನೆಯಲ್ಲಿ 3 ರನ್ನಿಂದ ಸೋತು ಮತ್ತೊಂದು ದಾಖಲೆಯ ಗೆಲುವಿನಿಂದ ತಪ್ಪಿಸಿಕೊಂಡಿತು. ಬಾಂಗ್ಲಾ ಪರವಾಗಿ ಟಸ್ಕಿನ್ ಅಹ್ಮದ್ 3, ಮೊಸಾದ್ದೆಕ್ ಹೋಸೈನ್, ಮುಸ್ತಾಫಿಜರ್ ರೆಹಮಾನ್ ತಲಾ 2 ವಿಕೆಟ್ ಪಡೆದರು.
ಬಾಂಗ್ಲಾಗೆ ಶ್ಯಾಂಟೋ ಅರ್ಧಶತಕದ ನೆರವು: ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಗೆಲ್ಲಲೇಬೇಕಾದ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿತು. ಆರಂಭಿಕ ನಜ್ಮುಲ್ ಹೊಸೈನ್ ಶ್ಯಾಂಟೋ 55 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದ ತಂಡಕ್ಕೆ ಆಧಾರವಾದರು. ಸೌಮ್ಯ ಸರ್ಕಾರ್(0) ಮತ್ತೆ ಫೇಲ್ ಆದರೆ, ಲಿಟನ್ ದಾಸ್ 14, ಶಕೀಬ್ ಅಲ್ ಹಸನ್ 23, ಅಫಿಫ್ ಹೊಸೈನ್ 29 ರನ್ ಗಳಿಸಿದರು.
ಬಾಂಗ್ಲಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಜಿಂಬಾಬ್ವೆ ಪರವಾಗಿ ಕಳೆದ ಪಂದ್ಯದ ಹೀರೋ ರಿಚರ್ಡ್ ನಗರ್ವ, ಬ್ಲೆಸ್ಸಿಂಗ್ ಮುಜರಬಾನಿ ತಲಾ 2 ವಿಕೆಟ್ ಕಿತ್ತರು.
ಇದನ್ನೂ ಓದಿ: ಭಾರತ ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮಳೆ ಅಡ್ಡಿ?; ಮ್ಯಾಚ್ ನಡೆಯುವ ಸಾಧ್ಯತೆ 50:50