ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಿಲೆ ರುಸ್ಸೋ ಅಬ್ಬರದ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶಕ್ಕೆ 206 ರನ್ಗಳ ಬೃಹತ್ ಗೆಲುವಿನ ಗುರಿ ನೀಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 12 ಹಂತದ ಗ್ರೂಪ್ 2 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ತೆಂಬಾ ಬವುಮಾ 2 ರನ್ಗೆ ವಿಕೆಟ್ ಒಪ್ಪಿಸಿದರೂ ಕೂಡ, ಬಳಿಕ ರುಸ್ಸೋ ಹಾಗೂ ಡಿ ಕಾಕ್ ಅಬ್ಬರದ ಜೊತೆಯಾಟವಾಡಿ ಬಾಂಗ್ಲಾ ಬೌಲರ್ಗಳ ಬೆವರಿಳಿಸಿದರು.
ಇಬ್ಬರೂ ಎಡಗೈ ಬ್ಯಾಟರ್ಗಳು 2ನೇ ವಿಕೆಟ್ಗೆ 168 ರನ್ಗಳ ಅಮೋಘ ಜೊತೆಯಾಟವಾಡಿದರು. ಬಾಂಗ್ಲಾದೇಶದ ಬೌಲರ್ಗಳ ಮೇಲೆ ದಂಡೆತ್ತಿ ಹೋದ ರುಸ್ಸೋ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್ ಬಾರಿಸಿದರೆ, ಡಿ ಕಾಕ್ 38 ಬಾಲ್ಗಳಲ್ಲಿ 63 ರನ್ ಚಚ್ಚಿದರು.
-
CENTURY ALERT
— T20 World Cup (@T20WorldCup) October 27, 2022 " class="align-text-top noRightClick twitterSection" data="
South Africa dasher Rilee Rossouw brings up his second T20I century and the first one at this year's tournament#T20WorldCup | #SAvBAN | 📝https://t.co/xkfs378LtQ pic.twitter.com/4d5N9Ufwgp
">CENTURY ALERT
— T20 World Cup (@T20WorldCup) October 27, 2022
South Africa dasher Rilee Rossouw brings up his second T20I century and the first one at this year's tournament#T20WorldCup | #SAvBAN | 📝https://t.co/xkfs378LtQ pic.twitter.com/4d5N9UfwgpCENTURY ALERT
— T20 World Cup (@T20WorldCup) October 27, 2022
South Africa dasher Rilee Rossouw brings up his second T20I century and the first one at this year's tournament#T20WorldCup | #SAvBAN | 📝https://t.co/xkfs378LtQ pic.twitter.com/4d5N9Ufwgp
ಇನ್ನುಳಿದ ಬ್ಯಾಟರ್ಗಳು ನಿರೀಕ್ಷಿತ ಆಟ ಪ್ರದರ್ಶಿಸದಿದ್ದರೂ ಸಹ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿದೆ. ಬಾಂಗ್ಲಾ ಪರ ನಾಯಕ ಶಕೀಬ್ 2 ವಿಕೆಟ್ ಪಡೆದರು.
ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಮೊದಲ ಪಂದ್ಯವು ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಗೆ ಇಂದು ಗೆಲುವು ಅನಿವಾರ್ಯವಾಗಿದೆ. ಇನ್ನೊಂದೆಡೆ ಪ್ರಥಮ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಮಣಿಸಿದ್ದ ಬಾಂಗ್ಲಾದೇಶಕ್ಕೆ ಈಗ ಕಠಿಣ ಗುರಿ ಎದುರಾಗಿದೆ. ಈಗಾಗಲೇ ಹರಿಣಗಳ ದಾಳಿಗೆ ತತ್ತರಿಸಿರುವ ಬಾಂಗ್ಲಾ ಟೈಗರ್ಸ್ 10 ಓವರ್ಗಳಲ್ಲಿ 66ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಗೆಲುವಿನ ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆಗೆ ನೆದರ್ಲ್ಯಾಂಡ್ಸ್ ಸವಾಲು