ETV Bharat / sports

T-20 World Cup Ind vs Pak: ಯಾವಾಗಲೂ ನಮ್ಮದೇ ಗೆಲುವು.. ಈ ಸಲ ಕೂಡ!

ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ವಿರುದ್ಧ ಕೊಂಚ ಮೇಲುಗೈ ಸಾಧಿಸಿರುವ ಪಾಕಿಸ್ತಾನ, ವಿಶ್ವಕಪ್​ ಎಂದಾಕ್ಷಣ ಮುದುರಿ ಮೂಲೆ ಸೇರುತ್ತಿದೆ. ಏಕದಿನ ವಿಶ್ವಕಪ್​​ನಲ್ಲಿ 7 ಬಾರಿ, ಟಿ-20 ವಿಶ್ವಕಪ್​ನಿಂದ 2007ರಿಂದ ಇಲ್ಲಿಯವರೆಗೆ 5 ಮುಖಾಮುಖಿಯಲ್ಲಿ ಭಾರತವೇ ಗೆಲುವು ಸಾಧಿಸಿದೆ.

T20 World Cup Ind vs Pak
ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್​
author img

By

Published : Oct 21, 2021, 10:00 PM IST

Updated : Oct 21, 2021, 10:34 PM IST

ಮುಂಬೈ: ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್​​ ಜಗತ್ತಿನ ಅತ್ಯಂತ ರೋಚಕ ಕದನವಾಗಿರುತ್ತದೆ. ಪ್ರಸ್ತುತ ಎರಡೂ ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲವಾದರೂ ಐಸಿಸಿ ಟೂರ್ನಮೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಅಕ್ಟೋಬರ್​ 24 ರಂದು ಎರಡು ದೇಶಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ.

ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ವಿರುದ್ಧ ಕೊಂಚ ಮೇಲುಗೈ ಸಾಧಿಸಿರುವ ಪಾಕಿಸ್ತಾನ, ವಿಶ್ವಕಪ್​ ಎಂದಾಕ್ಷಣ ಮುದುರಿ ಮೂಲೆ ಸೇರುತ್ತಿದೆ. ಏಕದಿನ ವಿಶ್ವಕಪ್​​ನಲ್ಲಿ 7 ಬಾರಿ, ಟಿ-20 ವಿಶ್ವಕಪ್​ನಿಂದ 2007ರಿಂದ ಇಲ್ಲಿಯವರೆಗೆ 5 ಮೂಖಾಮುಖಿಯಲ್ಲಿ ಭಾರತವೇ ಗೆಲುವು ಸಾಧಿಸಿದೆ.

2007 ಸೆಪ್ಟೆಂಬರ್ 14

ಸಾಂಪ್ರದಾಯಿಕ ಎದುರಾಳಿಗಳು 2007ರ ಟಿ20 ವಿಶ್ವಕಪ್​ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನಪಡೆದಿದ್ದವು. ಲೀಗ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 141 ರನ್​ಗಳಿಸಿತ್ತು. ಚೇಸ್ ಮಾಡಿದ್ದ ಪಾಕಿಸ್ತಾನ ಕೂಡ 141 ರನ್​ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಬಾಲ್​ಔಟ್​ ಮೊರೆ ಹೋಗಲಾಗಿತ್ತು. ಅದರಲ್ಲಿ ಭಾರತ 3-0ಯಲ್ಲಿ ಗೆದ್ದು ಬೀಗಿತ್ತು.

2007 ಸೆಪ್ಟೆಂಬರ್ 24

2007 ಚೊಚ್ಚಲ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಫೈನಲ್ ಪ್ರವೇಶಿಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 158 ರನ್​ಗಳ ಟಾರ್ಗೆಟ್ ನೀಡಿ ಪಾಕಿಸ್ತಾನವನ್ನು 152 ರನ್​ಗಳಿಗೆ ಆಲೌಟ್ ಮಾಡುವ ಮೂಲಕ 5 ರನ್​ಗಳಿಂದ ಗೆದ್ದು ಬೀಗಿತ್ತು. ಅಲ್ಲದೇ ಜೋಹಾನ್ಸ್​ಬರ್ಗ್​​ನಲ್ಲಿ ಚೊಚ್ಚಲ ಟಿ-20 ವಿಶ್ವಕಪ್​ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

2012 ಸೆಪ್ಟೆಂಬರ್ 30

ಮೊದಲ ವಿಶ್ವಕಪ್​ ಬಳಿಕ 2012ರಲ್ಲಿ ಮತ್ತೆ 3ನೇ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಕೇವಲ 129 ರನ್​ಗಳಿಸಿತ್ತು. ಸೂಪರ್ 8 ಕದನದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ವಿರಾಟ್​ ಕೊಹ್ಲಿ ಅಜೇಯ 78 ರನ್​ಗಳಿಸಿ ಇನ್ನು 3 ಓವರ್​ಗಳಿರುವಂತೆ ಭಾರತಕ್ಕೆ 8 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದರು.

2014 ಮಾರ್ಚ್​ 21

ಬಾಂಗ್ಲಾದೇಶದಲ್ಲಿ ನಡೆದಿದ್ದ 2014ರ ವಿಶ್ವಕಪ್​​ನಲ್ಲಿ 4ನೇ ಬಾರಿ ಮುಖಾಮುಖಿಯಾಗಿದ್ದ ಲೀಗ್​ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಪಾಕಿಸ್ತಾನ ನೀಡಿದ್ದ 131 ರನ್​ಗಳ ಗುರಿಯನ್ನು ಭಾರತ 3 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು.

2016, ಮಾರ್ಚ್​ 19

ಭಾರತದಲ್ಲೇ ನಡೆದಿದ್ದ ಕಳೆದ ವಿಶ್ವಕಪ್​ನಲ್ಲಿ ಮಹೇಂದ್ರ ಧೋನಿ ಬಳಗ 6 ವಿಕೆಟ್​ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್​ 18 ಓವರ್​ಗಳ ಪಂದ್ಯದಲ್ಲಿ 118 ರನ್​ಗಳಿಸಿತ್ತು. ಈ ಮೊತ್ತವನ್ನು ಭಾರತ15.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತ್ತು. ಕೊಹ್ಲಿ ಅಜೇಯ 55 ರನ್​ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಪಾಕಿಸ್ತಾನ ಮತ್ತು ಭಾರತ ತಂಡಗಳು ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾ(140) ಶತಕ ಮತ್ತು ವಿರಾಟ್​ ಕೊಹ್ಲಿ(77) ಅರ್ಧಶತಕದ ನೆರವಿನಿಂದ 336 ರನ್​ಗಳಿಸಿತ್ತು.

ಆದರೆ, ಮಳೆಯಿಂದ 302ರನ್​ಗಳ ಗುರಿ ನೀಡಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 212 ರನ್​ಗಳನ್ನಷ್ಟೇ ಗಳಿಸಲಷ್ಟೆ ಶಕ್ತವಾಗಿ 89 ರನ್​ಗಳ ಸೋಲು ಕಂಡಿತ್ತು. ಇದೀಗ 2 ವರ್ಷಗಳ ಎರಡೂ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿದ್ದು, ಭಾರತ ತಂಡ ಮತ್ತೊಮ್ಮೆ ಪಾಕ್​ ಬಗ್ಗುಬಡಿದು ತನ್ನ ಗೆಲುವಿನ ಯಾತ್ರೆಯನ್ನು ಮುಂದುವರಿಸಲು ಎದುರು ನೋಡುತ್ತಿದೆ.

Last Updated : Oct 21, 2021, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.