ಹೈದರಾಬಾದ್: ಅಕ್ಟೋಬರ್ 17ರಿಂದ ಐಸಿಸಿ ಟಿ-20 ವಿಶ್ವಕಪ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಸಕಲ ಸಿದ್ಧತೆ ಆರಂಭಗೊಂಡಿವೆ. ಶೇ. 70ರಷ್ಟು ಸಾಮರ್ಥ್ಯದೊಂದಿಗೆ ಪಂದ್ಯ ವೀಕ್ಷಣೆ ಮಾಡಲು ಅವಕಾಶ ಸಹ ನೀಡಲಾಗಿದೆ.
ಬಹುನಿರೀಕ್ಷಿತ ಟಿ-20 ವಿಶ್ವಕಪ್ನಲ್ಲಿ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ಮುಖಾಮುಖಿಯಾಗಿವೆ. ಈ ಪಂದ್ಯ ವೀಕ್ಷಣೆ ಮಾಡಲು ಎಲ್ಲರೂ ಕಾತುರರಾಗಿದ್ದು, ಕೇವಲ 1 ಗಂಟೆಯಲ್ಲಿ ಎಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಇದರ ಮಧ್ಯೆ ಅನೇಕರು ಟಿಕೆಟ್ ಖರೀದಿ ಮಾಡಲು ಸಾಧ್ಯವಾಗದೇ ನಿರಾಸೆಗೊಳಗಾಗಿದ್ದಾರೆ.
ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಸೇರಿದಂತೆ ಎಲ್ಲ ವಿಭಾಗದ ಟಿಕೆಟ್ಗಳು ಸೋಲ್ಡ್ ಆಗಿದ್ದು, ಯಾವುದೇ ಟಿಕೆಟ್ ವೆಬ್ಸೈಟ್ನಲ್ಲಿ ಲಭ್ಯವಿಲ್ಲ ಎಂದು ಯುಎಇ ತಿಳಿಸಿದೆ.
-
The ICC Men’s #T20WorldCup 2021 is fast approaching!
— T20 World Cup (@T20WorldCup) October 3, 2021 " class="align-text-top noRightClick twitterSection" data="
Be a part of the cricketing carnival and #LiveTheGame 🎉🥳
Ticket booking now OPEN 🎟️ https://t.co/F78P6m0weU pic.twitter.com/tmjYZbHwMn
">The ICC Men’s #T20WorldCup 2021 is fast approaching!
— T20 World Cup (@T20WorldCup) October 3, 2021
Be a part of the cricketing carnival and #LiveTheGame 🎉🥳
Ticket booking now OPEN 🎟️ https://t.co/F78P6m0weU pic.twitter.com/tmjYZbHwMnThe ICC Men’s #T20WorldCup 2021 is fast approaching!
— T20 World Cup (@T20WorldCup) October 3, 2021
Be a part of the cricketing carnival and #LiveTheGame 🎉🥳
Ticket booking now OPEN 🎟️ https://t.co/F78P6m0weU pic.twitter.com/tmjYZbHwMn
ಇದನ್ನೂ ಓದಿರಿ: ಗುಡ್ನ್ಯೂಸ್: ಮೈದಾನದಲ್ಲಿ ಕುಳಿತುಕೊಂಡು T-20 ವಿಶ್ವಕಪ್ ವೀಕ್ಷಣೆಗೆ ಅವಕಾಶ
ಟಿಕೆಟ್ ಲಭ್ಯ ಇವೆ ಎಂದು ಐಸಿಸಿ ಘೋಷಿಸಿದ ತಕ್ಷಣವೇ ಭಾರತ - ಪಾಕ್ ಪಂದ್ಯ ವೀಕ್ಷಣೆ ಮಾಡಲು ಸಾವಿರಾರು ಕ್ರೀಡಾಭಿಮಾನಿಗಳು ವೆಬ್ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದಾರೆ. ಸದ್ಯ ಯುಎಇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ. ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ-ಪಾಕ್ ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಬರ್ 24ರಂದು ಮುಖಾಮುಖಿಯಾಗಲಿವೆ.