ಅಬುಧಾಬಿ : ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಮೊದಲನೇ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕಾಂಗರೋ ಪಡೆ 5ವಿಕೆಟ್ಗಳ ಭರ್ಜರಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇತ್ತ ಇಂದು ಎರಡನೇ ಪಂದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮದ್ಯೆ ನಡೆಯಲಿದೆ.
-
Eoin Morgan has won the toss and chosen to field 🪙
— ICC (@ICC) October 23, 2021 " class="align-text-top noRightClick twitterSection" data="
Who is coming out on 🔝 in this clash?#T20WorldCup #ENGvWI pic.twitter.com/D1Nv1jLkEz
">Eoin Morgan has won the toss and chosen to field 🪙
— ICC (@ICC) October 23, 2021
Who is coming out on 🔝 in this clash?#T20WorldCup #ENGvWI pic.twitter.com/D1Nv1jLkEzEoin Morgan has won the toss and chosen to field 🪙
— ICC (@ICC) October 23, 2021
Who is coming out on 🔝 in this clash?#T20WorldCup #ENGvWI pic.twitter.com/D1Nv1jLkEz
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳೆರಡೂ ತಲಾ 2 ಅಭ್ಯಾಸ ಪಂದ್ಯಗಳಲ್ಲಿ ಆಡಿವೆ.
ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಕಣಕ್ಕಿಳಿದಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಟೀಮ್ ಇಂಡಿಯಾ ವಿರುದ್ಧ ಸೋಲು ಕಂಡಿತ್ತು. ಅತ್ತ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು. ಹಾಲಿ ಟಿ-20 ವಿಶ್ವಕಪ್ ಚಾಂಪಿಯನ್ಸ್ ಈ ಎರಡೂ ಪಂದ್ಯಗಳಲ್ಲಿಯೂ ಸಹ ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು.
ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ ಒಟ್ಟು 18 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ವೆಸ್ಟ್ ಇಂಡೀಸ್ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ಕೇವಲ 7 ಪಂದ್ಯಗಳಲ್ಲಿ ಜಯ ಗಳಿಸಿದೆ.
ಇನ್ನು ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಟ್ಟು 5 ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ಈ ಎಲ್ಲ ಪಂದ್ಯಗಳಲ್ಲಿಯೂ ಸಹ ವೆಸ್ಟ್ ಇಂಡೀಸ್ ತಂಡ ಜಯವನ್ನು ಸಾಧಿಸುವ ಮೂಲಕ ಅಜಯವಾಗಿದೆ.
ಇತ್ತ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟ-20 ವಿಶ್ವಕಪ್ನಲ್ಲಿ ಇಲ್ಲಿಯವರೆಗೂ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ಇದರಿಂದ ಕ್ರಿಕೆಟ ಜನಕರ ನಾಡಿಗೆ ಇದೊಂದು ಕೆಟ್ಟ್ ದಾಖಲೆಯಾಗಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವುದರ ಮೂಲಕ ಈ ಕೆಟ್ಟ ದಾಖಲೆಗೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ವಿ.ಕೀಪರ್), ಜೇಸನ್ ರಾಯ್, ಡೇವಿಡ್ ಮಲನ್, ಜೊನಾಥನ್ ಬೈರ್ಸ್ಟೋವ್, ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಇಯೊನ್ ಮಾರ್ಗನ್(ನಾಯಕ), ಟೈಮಲ್ ಮಿಲ್ಸ್, ಕ್ರೀಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್.
ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಡ್ವೇಯ್ನ್ ಬ್ರಾವೊ, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮಾಯರ್, ಎವಿನ್ ಲೂಯಿಸ್, ಓಬೆಡ್ ಮೆಕಾಯ್, ಲೆಂಡ್ಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಅಕಿಲ್ ಹೊಸೈನ್.