ETV Bharat / sports

ಇಂಡಿಯಾ vs ಪಾಕಿಸ್ತಾನ ವಿಶ್ವಕಪ್​ ಫೈಟ್​: ಈ ಪ್ಲೇಯರ್ಸ್​ಗೆ ಮಣೆ ಹಾಕಿದ ಅಜಿತ್ ಅಗರ್ಕರ್

author img

By

Published : Oct 19, 2021, 8:46 PM IST

ಪಾಕ್​ ವಿರುದ್ಧ ಹೈವೋಲ್ಟೇಜ್​ ಪಂದ್ಯಕ್ಕಾಗಿ ದಿನಗಣನೇ ಆರಂಭಗೊಂಡಿದ್ದು, ಈ ಮ್ಯಾಚ್​​ನಲ್ಲಿ ಟೀಂ ಇಂಡಿಯಾ ಆಡುವ 11ರ ಬಳಗ ಯಾವ ರೀತಿಯಾಗಿರಬೇಕು ಎಂಬುದರ ಬಗ್ಗೆ ಅಗರ್ಕರ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

T20 World Cup 2021
T20 World Cup 2021

ಹೈದರಾಬಾದ್​: ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಅಕ್ಟೋಬರ್​ 24ರಂದು ಸಾಂಪ್ರದಾಯಿಕ ಎದುರಾಳಿ ತಂಡಗಳಾಗಿರುವ ಭಾರತ - ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಇದೀಗ ಎಲ್ಲರ ಕಣ್ಣು ಈ ಹೈವೋಲ್ಟೇಜ್​​ ಪಂದ್ಯದ ಮೇಲೆ ಬಿದ್ದಿದೆ.

ಪಂದ್ಯ ಆರಂಭಗೊಳ್ಳಲು ಇನ್ನು ಐದು ದಿನ ಬಾಕಿ ಉಳಿದಿರುವಾಗಲೇ ಕೆಲ ಮಾಜಿ ಪ್ಲೇಯರ್ಸ್​ ತಮ್ಮಿಷ್ಟದ ತಂಡ ಆಯ್ಕೆ ಮಾಡ್ತಿದ್ದು, ಇದೀಗ ಟೀಂ ಇಂಡಿಯಾ ವೇಗದ ಬೌಲರ್​​ ಅಜಿತ್​ ಅಗರ್ಕರ್​ ಕೂಡ ವಿಭಿನ್ನವಾದ ತಂಡ ಆಯ್ಕೆಮಾಡಿದ್ದಾರೆ.

Agarkar
ಟೀಂ ಇಂಡಿಯಾ ಮಾಜಿ ವೇಗಿ ಅಗರ್ಕರ್​​

ಪಾಕ್​ ವಿರುದ್ಧದ ಪಂದ್ಯಕ್ಕಾಗಿ ವಿರಾಟ್​ ಕೊಹ್ಲಿ ಆರು ಬೌಲರ್​ಗಳೊಂದಿಗೆ ಕಣಕ್ಕಿಳಿಯುವಂತೆ ತಿಳಿಸಿದ್ದು, ಅದರಲ್ಲಿ ಮೂವರು ವೇಗದ ಬೌಲರ್​ಗಳು ಇರಬೇಕು ಎಂದಿದ್ದಾರೆ. ಸಮತಟ್ಟಾದ ಪಿಚ್​ ಆಗಿರುವ ಕಾರಣ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್​​ಗಳಿಗೆ ಅವಕಾಶ ನೀಡಬೇಕು ಎಂದಿರುವ ಅಗರ್ಕರ್​, ಓರ್ವ ಆಲ್​ರೌಂಡರ್​ಗೆ ಮಣೆ ಹಾಕುವಂತೆ ತಿಳಿಸಿದ್ದಾರೆ.

shardul thakur
ಶಾರ್ದೂಲ್ ಠಾಕೂರ್​​

ಜಡೇಜಾ ಆಲ್​ರೌಂಡರ್​​. ಆದರೆ, ಅವರ ಬ್ಯಾಟಿಂಗ್ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿರುವ ಕಾರಣಂ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​​ಗಳಲ್ಲಿ ಒಬ್ಬರೆಂದು ಪರಿಗಣಿಸಬೇಕು ಎಂದಿದ್ದಾರೆ. ಹಾರ್ದಿಕ್​ ಪಾಂಡ್ಯಾ ಬೌಲಿಂಗ್​​ ಮಾಡದಿದ್ದರೆ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್​ ಠಾಕೂರ್​, ರವೀಂದ್ರ ಜಡೇಜಾ, ವರುಣ್​ ಚಕ್ರವರ್ತಿ ಹಾಗೂ ರಾಹುಲ್​ ಚಹರ್​​ ಇರಲಿ ಎಂದಿದ್ದಾರೆ.​​​

Team india
ಮೊಹಮ್ಮದ್​ ಶಮಿ

ತಂಡ ಆಯ್ಕೆ ಮಾಡಿದ ಪಾರ್ಥಿವ್ ಪಟೇಲ್​

ಪಾಕ್ ವಿರುದ್ಧದ ಪಂದ್ಯಕ್ಕಾಗಿ ಪಾರ್ಥಿವ್ ಪಟೇಲ್​ ಕೂಡ ತಂಡ ಆಯ್ಕೆ ಮಾಡಿದ್ದು, ಆರಂಭಿಕರಾಗಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್​​ ಮೂರನೇ ಕ್ರಮಾಂಕದಲ್ಲಿ ವಿರಾಟ್​, ಸೂರ್ಯಕುಮಾರ್​ 4ನೇ ಸ್ಥಾನ ಹಾಗೂ ರಿಷಭ್ ಪಂತ್​ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿ ಎಂದಿದ್ದಾರೆ. ತದನಂತರ ಹಾರ್ದಿಕ್ ಪಾಂಡ್ಯಾ, ಉಳಿದ ಸ್ಥಾನಗಳಲ್ಲಿ ರವೀಂದ್ರ ಜಡೇಜಾ, ರಾಹುಲ್​ ಚಹರ್​, ಮೊಹಮ್ಮದ್ ಶಮಿ, ಬುಮ್ರಾ ಇರಬೇಕು ಎಂದಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್​ರಲ್ಲಿ ಒಬ್ಬರಿಗೆ ಮಣೆ ಹಾಕುವಂತೆ ತಿಳಿಸಿದ್ದಾರೆ.

Team india
ಚಹರ್ ಜೊತೆ ವಿರಾಟ್​ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.