ದುಬೈ: ಇಂದು ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಿಂದ, ಸೌತ್ ಆಫ್ರಿಕಾ ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್ ಹೊರಗುಳಿದಿದ್ದರು. ಪಂದ್ಯದ ಟಾಸ್ ನಂತರ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ವೈಯಕ್ತಿಕ ಕಾರಣಗಳಿಗಾಗಿ ಸ್ವತಃ ಕ್ವಿಂಟನ್ ಡಿಕಾಕ್ ಅವರೇ ಈ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದರು.
ಆದರೆ ಡಿ ಕಾಕ್ ಪಂದ್ಯದಿಂದ ಹೊರಗುಳಿಯಲು ಕಾರಣ ಏನು ಎಂಬುದನ್ನ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲಿಸುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ರಾತ್ರಿ ಹೊರಡಿಸಿದ ಈ ಸೂಚನೆಗೆ ಕ್ವಿಂಟನ್ ಡಿಕಾಕ್ ಅಸಮ್ಮತಿ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಡಿಕಾಕ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ಕಾರಣ ಎಂದು ಕಾರ್ತಿಕ್ ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನ ಡಿ ಕಾಕ್ ನಾನು ವೈಯಕ್ತಿಕ ಕಾರಣಗಳಿಂದ ಈ ಪಂದ್ಯವನ್ನು ಆಡುತ್ತಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಕಾರ್ತಿಕ್ " ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿಯ ನಿಲುವಿನಿಂದಾಗಿ ಡಿ ಕಾಕ್ ಆಡುತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಬಾರಿಯ ಟಿ-20 ವಿಶ್ವಕಪ್‌ನಲ್ಲಿ ಮುಂಬರುವ ಎಲ್ಲಾ ಪಂದ್ಯಗಳಲ್ಲಿಯೂ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲವನ್ನು ನೀಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ ಪಂದ್ಯದ ಆರಂಭದ ನಂತರ ಆಟಗಾರರು ಮೊಣಕಾಲೂರಿ ಈ ಅಭಿಯಾನಕ್ಕೆ ಬೆಂಬಲಿಸಬೇಕಿದೆ. ಭಾರತ ಸೇರಿದಂತೆ ಬಹುತೇಕ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಈ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನದಲ್ಲಿ ಕೈ ಜೋಡಿಸಿದೆ.
ಇದನ್ನೂ ಓದಿ : ಟಿ-20 ವಿಶ್ವಕಪ್: ವಿಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕ