ETV Bharat / sports

ಟಿ20 ವಿಶ್ವಕಪ್: ಗೆದ್ದು ಬೀಗಿದ ಲಂಕಾ, ಸೆಮಿಫೈನಲ್ ರೇಸ್‌ನಿಂದ ಅಫ್ಘಾನಿಸ್ತಾನ ಔಟ್​

author img

By

Published : Nov 1, 2022, 2:30 PM IST

ಶ್ರೀಲಂಕಾ ಎದುರು ಅಫ್ಘಾನಿಸ್ತಾನ ಸೋತು ಸೆಮಿಫೈನಲ್ ಹೊರ ಬಿದ್ದಿದೆ. ಮಳೆಯಿಂದ ಎರಡು ಪಂದ್ಯ ರದ್ದಾಗಿ, ಇಂಗ್ಲೆಂಡ್​ ಎದುರು ಸೋತು ಎರಡು ಅಂಕ ಗಳಿಸಿದ್ದ ಅಫ್ಘಾನ್​ಗೆ ಕೊನೆಯ ಒಂದು ಪಂದ್ಯ ಔಪಚಾರಿಕವಾಗಿ ಉಳಿಯಲಿದೆ.

t 20 world cup Afghanistan out of the semi final race
ಸೆಮಿಫೈನಲ್ ರೇಸ್‌ನಿಂದ ಅಫ್ಘಾನಿಸ್ತಾನ ಔಟ್​

ಬ್ರಿಸ್ಬೇನ್(ಆಸ್ಟ್ರೇಲಿಯಾ): ಅಫ್ಘಾನಿಸ್ತಾನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋಲನುಭವಿಸಿ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಶ್ರೀಲಂಕಾ ತಂಡವು ಅಫ್ಘಾನ್​ ನೀಡಿದ 144ರನ್‌ ಗುರಿಯನ್ನು ಧನಂಜಯ ಡಿ ಸಿಲ್ವ ಅವರ ಅರ್ಧ ಶತಕದ ನೆರವಿನಿಂದ 18.3 ಓವರ್​ನಲ್ಲಿ 4 ವಿಕೆಟ್​ ನಷ್ಟದಿಂದ ಸುಲಭವಾಗಿ ಜಯಿಸಿತು. ಸೂಪರ್​ 12 ಹಂತದ ಎರಡನೇ ಗೆಲುವು ಸಾಧಿಸಿರುವ ಲಂಕಾ ಸೆಮಿಸ್​ನ ಆಸೆ ಜೀವಂತ ಉಳಿಸಿಕೊಂಡಿದೆ.

ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್​ ನಷ್ಟಕ್ಕೆ 144 ರನ್​ ಗಳಿಸಿತು. ಆರಂಭಿಕರಾದ ಗುರ್ಬಾಜ್(28), ಘನಿ(27) ಮತ್ತು ಇಬ್ರಾಹಿಂ ಜದ್ರಾನ್ (22) ಸಾಧಾರಣ ಪ್ರದರ್ಶನ ನೀಡಿದರು. ನಂತರ ಮಧ್ಯಮ ಕ್ರಮಾಂಕದ ಆಟಗಾರರು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ನಜೀಬುಲ್ಲಾ ಜದ್ರಾನ್(18), ಗುಲ್ಬದಿನ್ ನೈಬ್(12) ಮತ್ತು ನಾಯಕ ನಬಿ 13ಕ್ಕೆ ವಿಕೆಟ್​ ಚೆಲ್ಲಿದರು.

ಶ್ರೀಲಂಕಾ ಪರ ವನಿಂದು ಹಸರಂಗ ಮೂರು ವಿಕೆಟ್​ ಪಡೆದರು. ಲಹಿರು ಕುಮಾರ ಎರಡು ಮತ್ತು ಧನಂಜಯ ಡಿ ಸಿಲ್ವ, ಕಸುನ್ ರಜಿತ ತಲಾ ಒಂದು ವಿಕೆಟ್​ ಪಡೆದರು.

ಬೌಲಿಂಗ್​ನಲ್ಲಿ ಒಂದು ವಿಕೆಟ್​ ಕಬಳಿಸಿದ್ದ ಧನಂಜಯ ಡಿ ಸಿಲ್ವ ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಅಫ್ಘಾನಿಸ್ತಾನ ನೀಡಿದ್ದ 145 ರನ್‌ಗಳನ್ನು ಲಂಕಾ 18.3 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ ಸಾಧಿಸಿತು. 10 ರನ್​ ಗಳಿಸಿದ್ದ ಪಾತುಮ್ ನಿಸ್ಸಾಂಕ ಮುಜೀಬ್ ವಿಕೆಟ್​ ಒಪ್ಪಿಸಿದರು. ನಂತರ ಕುಸಲ್ ಮೆಂಡಿಸ್ (25) ಮತ್ತು ಧನಂಜಯ ಡಿ ಸಿಲ್ವ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಡಿ ಸಿಲ್ವ 42 ಬಾಲ್​ ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸ್​ನಿಂದ 66 ರನ್​ ಗಳಿಸಿ ತಂಡಕ್ಕೆ ಉತ್ತಮ ಸಾಥ್​ ನೀಡಿದರು.

ಮೆಂಡಿಸ್ ವಿಕೆಟ್​ ನಂತರ ಬಂದ ಚರಿತ್ ಅಸಲಂಕಾ(18), ಭಾನುಕ ರಾಜಪಕ್ಸೆ(18) ಸಣ್ಣ ಪ್ರಮಾನ ಹೋರಾಟ ತೋರಿದರು. ಮುಜೀಬ್ ಉರ್ ರಹಮಾನ್ ಮತ್ತು ರಶೀದ್ ಖಾನ್ ತಲಾ ಎರಡು ವಿಕೆಟ್​ ಪಡೆದರು. ಶ್ರೀಲಂಕಾ ಪರ ಮೂರು ವಿಕೆಟ್ ಕಬಳಿಸಿದ ವನಿಂದು ಹಸರಂಗಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್‌ ಜೋಡಿ ಚಾಂಪಿಯನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.