ETV Bharat / sports

ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಪ್ರಾರಂಭ... ಮಧ್ಯಾಹ್ನ ಕರ್ನಾಟಕ ಪಂದ್ಯ

ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಕರ್ನಾಟಕಕ್ಕೆ ಸುಲಭ ಎದುರಾಳಿ ದೊರೆತಿದೆ.

author img

By

Published : Jan 10, 2021, 6:04 AM IST

syed mushtaq ali, syed mushtaq ali t20, syed mushtaq ali t20 kick starts, syed mushtaq ali t20 news, syed mushtaq ali t20 update, syed mushtaq ali t20 latest news, ಸಯ್ಯದ್ ಮುಷ್ತಾಕ್ ಅಲಿ, ಸಯ್ಯದ್ ಮುಷ್ತಾಕ್ ಅಲಿ  ಟಿ20, ಸಯ್ಯದ್ ಮುಷ್ತಾಕ್ ಅಲಿ  ಟಿ20 ಪ್ರಾರಂಭ, ಸಯ್ಯದ್ ಮುಷ್ತಾಕ್ ಅಲಿ  ಟಿ20 ಸುದ್ದಿ, ಸಯ್ಯದ್ ಮುಷ್ತಾಕ್ ಅಲಿ  ಟಿ20 ಅಪ್​ಡೇಟ್​,
ಕೃಪೆ: Twitter

ಮುಂಬೈ: ಇಂದಿನಿಂದ ದೇಶಿ ಋತುವಿಗೆ ಚಾಲನೆ ದೊರೆಯಲಿದೆ. ಬಿಸಿಸಿಐ ಆಯೋಜಿಸುವ ಟಿ-20 ಮಾದರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ ಇಂದಿನಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕರ್ನಾಟಕ ತಂಡ ಜಮ್ಮು-ಕಾಶ್ಮೀರ ತಂಡವನ್ನು ಆಲೂರಿನ ಕೆಎಸ್​ಸಿಎ ಗ್ರೌಂಡ್​ನಲ್ಲಿ ಎದುರಿಸಲಿದೆ.

ಲೀಗ್​ನಲ್ಲಿ 38 ತಂಡಗಳಿದ್ದು, 6 ಗುಂಪುಗಳಾಗಿ ವಿಂಗಡಿಸಲಾಗಿದೆ. 5 ಗುಂಪುಗಳಲ್ಲಿ ಬಲಿಷ್ಠ 6 ತಂಡಗಳಿರಲಿವೆ. ಪ್ಲೇಟ್​ ಗುಂಪಿನಲ್ಲಿ 8 ತಂಡಗಳಿವೆ. ಬೆಂಗಳೂರು, ವಡೋದರಾ, ಇಂದೋರ್​, ಮುಂಬೈ ಮತ್ತು ಚೆನ್ನೈನಲ್ಲಿ ಲೀಗ್​ ಹಂತದ ಪಂದ್ಯಗಳು ಮತ್ತು ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್​ ಪಂದ್ಯಗಳು ನಡೆಯಲಿವೆ.

ಕರ್ನಾಟಕ ತಂಡ ಇರುವ ಎ ಗುಂಪಿನಲ್ಲಿ ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಪಂಜಾಬ್, ರೈಲ್ವೇಸ್, ತ್ರಿಪುರ ತಂಡಗಳು ಸ್ಥಾನ ಪಡೆದಿವೆ.

ಕರ್ನಾಟಕ ಮತ್ತು ಜಮ್ಮು ಕಾಶ್ಮೀರದ ನಡುವಿನ ಪಂದ್ಯ ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಕರ್ನಾಟಕ ತಂಡ 2018-19, 2019-20ರಲ್ಲಿ ಚಾಂಪಿಯನ್​ ಆಗಿತ್ತು.

ಕರ್ನಾಟಕ ತಂಡ...

ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ (ಉಪ ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಂ, ಕೆವಿ ಸಿದ್ದಾರ್ಥ, ಕೆ.ಎಲ್. ಶ್ರೀಜಿತ್, ಬಿ.ಆರ್. ಶರತ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್​, ಜಗದೀಶ ಸುಚಿತ್, ಪ್ರವೀಣ್ ದುಬೇ, ಅಭಿಮನ್ಯು ಮಿಥುನ್, ಪ್ರಸಿಧ್ ಕೃಷ್ಣ, ಪ್ರತೀಕ್ ಜೈನ್, ವಿ. ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂ.ಬಿ., ಮನೋಜ್ ಭಾಂಡಗೆ, ಶುಭಾಂಗ್ ಹೆಗ್ಡೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.