ನವದೆಹಲಿ: ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ದಾಖಲೆಯೊಂದನ್ನು ಮಾಡಿ ಸುಮಾರು 14 ವರ್ಷಗಳಾಗಿವೆ. 2007ರ ಈ ದಿನ ಟಿ-20 ವಿಶ್ವಕಪ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರನಾಗಿ ಬ್ರೆಟ್ ಲೀ ಹೊರಹೊಮ್ಮಿದ್ದರು.
ದಕ್ಷಿಣ ಆಫ್ರಿಕಾದ ಕೇಪ್ಟೌನ್ನ ನ್ಯೂಜಿಲ್ಯಾಂಡ್ನಲ್ಲಿ ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ಬ್ರೆಟ್ ಲೀ ಈ ಸಾಧನೆ ಮಾಡಿದ್ದಾರೆ. ಟಿ-20 ವಿಶ್ವಕಪ್ನ ಉದ್ಘಾಟನಾ ಪಂದ್ಯವಾಗಿತ್ತು. 20 ಓವರ್ಗಳ ಪಂದ್ಯದಲ್ಲಿ ಮೊದಲು ಬಾಂಗ್ಲಾದೇಶ ಬ್ಯಾಟಿಂಗ್ ಮಾಡಿದ್ದು, 17ನೇ ಓವರ್ನಲ್ಲಿ ಶಕಿಬ್ - ಅಲ್ - ಹಸನ್, ಮಶ್ರಫೆ ಮೊರ್ತಾಜಾ ಮತ್ತು ಅಲೋಕ್ ಕಪಾಲಿ ಅವರನ್ನು ಔಟ್ ಮಾಡುವ ಮೂಲಕ ಬ್ರೆಟ್ ಲೀ ಹ್ಯಾಟ್ರಿಕ್ ಪಡೆದಿದ್ದರು.
ಬಾಂಗ್ಲಾ ಟೀಂ ಕೇವಲ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವಲ್ಲಿ ಶಕ್ತವಾಗಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 37 ಎಸೆತಗಳು ಬಾಕಿ ಇರುವಂತೆ ಕೇವಲ 1 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತ್ತು. ಮ್ಯಾಥ್ಯೂ ಹೇಡನ್ 73 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಗಿದ್ದರು.
ಇಲ್ಲಿಯವರೆಗೆ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 14 ಹ್ಯಾಟ್ರಿಕ್ ವಿಕೆಟ್ಗಳನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿಗೆ ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ. ಶ್ರೀಲಂಕಾದ ಲಸಿತ್ ಮಾಲಿಂಗ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ದೀಪಕ್ ಚಹಾರ್ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಭಾರತೀಯರಾಗಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ನ ಪ್ರಮುಖ ಆಟಗಾರರಿಂದ ಆ್ಯಷಸ್ ಸರಣಿ ಬಹಿಷ್ಕಾರ ಸಾಧ್ಯತೆ