ದುಬೈನಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ 2021ರ ಆರಂಭಿಕ ಪಂದ್ಯದಲ್ಲಿ ಭಾರತ ಸೋತ ನಂತರ ವೇಗಿ ಮೊಹಮ್ಮದ್ ಶಮಿ ನೆಟ್ಟಿಗರ ನಿಂದನೆಗೆ ಒಳಗಾಗಿದ್ದಾರೆ. ಇದೇ ವೇಳೆ, ಭಾರತ ತಂಡದ ಮಾಜಿ, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಸೇರಿದಂತೆ ಅನೇಕರು ಶಮಿ ಬೆನ್ನಿಗೆ ನಿಂತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಶಮಿ ಪರವಾಗಿರುವ ಹಳೆಯ ವಿಡಿಯೋ ಹರಿದಾಡುತ್ತಿದೆ.
-
Its #shameful that many ppl are calling #Shami as Gaddar for yesterday's performance.
— श्रद्धा | Shraddha 🇮🇳 (@immortalsoulin) October 25, 2021 " class="align-text-top noRightClick twitterSection" data="
During ICC champions Trophy 2017, India lost to Pak, Pak Spectator said "Baap Kaun"
Shami gave it back !
Bura din sbka aata hai, have some sanity and grace.
pic.twitter.com/AGejWqyxeP
">Its #shameful that many ppl are calling #Shami as Gaddar for yesterday's performance.
— श्रद्धा | Shraddha 🇮🇳 (@immortalsoulin) October 25, 2021
During ICC champions Trophy 2017, India lost to Pak, Pak Spectator said "Baap Kaun"
Shami gave it back !
Bura din sbka aata hai, have some sanity and grace.
pic.twitter.com/AGejWqyxePIts #shameful that many ppl are calling #Shami as Gaddar for yesterday's performance.
— श्रद्धा | Shraddha 🇮🇳 (@immortalsoulin) October 25, 2021
During ICC champions Trophy 2017, India lost to Pak, Pak Spectator said "Baap Kaun"
Shami gave it back !
Bura din sbka aata hai, have some sanity and grace.
pic.twitter.com/AGejWqyxeP
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪರಾಜಯ ಅನುಭವಿಸಿತ್ತು. ಲಂಡನ್‌ನ ಓವಲ್‌ನಲ್ಲಿ ನಡೆದ ಪಂದ್ಯ ಮುಗಿಸಿ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಪಾಕ್ ಅಭಿಮಾನಿಯೊಬ್ಬ ‘ಬಾಪ್ ಕೌನ್ ಹೈ, ಬಾಪ್ ಕೌನ್ ಹೈ ’ ಎಂದು ಪದೇ ಪದೇ ಹೇಳುತ್ತಿದ್ದ. ಇದನ್ನು ಗಮನಿಸಿದ ಶಮಿ ತಾಳ್ಮೆ ಕಳೆದುಕೊಂಡಿದ್ದರು. ಆ ಅಭಿಮಾನಿ ಬಳಿ ಬಂದ ಶಮಿ ಕೆಲವೊಮ್ಮೆ ಕೆಟ್ಟದಿನಗಳು ಎಲ್ಲರಿಗೂ ಬರುತ್ತವೆ ಎಂದು ಹೇಳಿದ್ದರು. ಆಗ ಎಂ.ಎಸ್.ಧೋನಿ ಮಧ್ಯಪ್ರವೇಶಿಸುವ ಮೂಲಕ ಶಮಿ ಶಾಂತರಾಗಿ ಡ್ರೆಸ್ಸಿಂಗ್ ರೂಂನತ್ತ ಹೆಜ್ಜೆ ಹಾಕಿದರು.
ಈ ಪಂದ್ಯದಲ್ಲಿ ಫಖರ್ ಜಮಾನ್ ಶತಕದ ನೆರವಿನಿಂದ ಪಾಕಿಸ್ತಾನವು 50 ಓವರ್‌ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 338 ಕಲೆ ಹಾಕಿತ್ತು. ಬಳಿಕ ಭಾರತವು 158 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತ್ತು.
ಕಳೆದ ಭಾನುವಾರ, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅರ್ಧಶತಕಗಳು ಮತ್ತು ಶಾಹೀನ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ವಿರುದ್ಧ ಪಾಕ್ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಶಮಿ 3.5 ಓವರ್‌ಗಳಲ್ಲಿ 44 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಬೌಲರ್ ಎನ್ನಿಸಿದ್ದರು. ಇದು ಕೆಲವು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಶೆ ಉಂಟು ಮಾಡಿದ್ದು, ಆನ್‌ಲೈನ್‌ನಲ್ಲಿ ನಿಂದನಾತ್ಮಕ ಟೀಕೆಗಳನ್ನು ಮಾಡಿದ್ದಾರೆ.