ETV Bharat / sports

ಐಪಿಎಲ್ ಟ್ರೋಫಿ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಸ್ಟೀವ್​​ ಸ್ಮಿತ್‌ ಬಲ.. - ಇಂಡಿಯನ್ ಪ್ರೀಮಿಯರ್​ ಲೀಗ್​

2019ರಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರ್ಯಾಂಚೈಸ್‌ಗೆ ಸೇರಿದ ಬಲಗೈ ಬ್ಯಾಟ್ಸ್‌ಮನ್, ಯುಎಇಯಲ್ಲಿ ನಡೆದಿದ್ದ 2020ರ ಆವೃತ್ತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ, ರಾಯಲ್ಸ್​ ಲೀಗ್​ನಲ್ಲಿ ಕೊನೆಯ ಸ್ಥಾನಿಯಾಗಿತ್ತು..

ಡೆಲ್ಲಿ ಕ್ಯಾಪಿಟಲ್ಸ್​ಗೆ ಸ್ಟೀವ್ ಸ್ಮಿತ್ ಸೇರ್ಪಡೆ

author img

By

Published : Feb 23, 2021, 3:43 PM IST

ನವದೆಹಲಿ : ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್​ಮನ್​ ಸ್ಟೀವ್​ ಸ್ಮಿತ್​ ಸೇರಿರುವುದು ಪ್ರಶಸ್ತಿ ಎತ್ತಿ ಹಿಡಿಯುವ ತಂಡದ ಕನಸನ್ನು ಹೆಚ್ಚಿಸಿದೆ.

31 ವರ್ಷದ ಆಸೀಸ್​ ಸ್ಟಾರ್​ ಬ್ಯಾಟ್ಸ್​ಮನ್​ರನ್ನು ರಾಜಸ್ಥಾನ್​ ರಾಯಲ್ಸ್​ ಈ ಬಾರಿ ಹರಾಜಿಗೂ ಮುನ್ನ ಬಿಡುಗಡೆ ಮಾಡಿತ್ತು. ನಂತರ ಫೆಬ್ರವರಿ 19ರಂದು ನಡೆದ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 2.2 ಕೋಟಿ ರೂ.ಗೆ ಖರೀದಿಸಿತ್ತು.

ಸ್ಟೀವ್​ ಸ್ಮಿತ್​
ಸ್ಟೀವ್​ ಸ್ಮಿತ್​

"ಈ ವರ್ಷ ಡೆಲ್ಲಿ ತಂಡ ಸೇರುವುದಕ್ಕೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ತಂಡ ಉತ್ತಮ ಆಟಗಾರರನ್ನು ಹೊಂದಿದೆ ಮತ್ತು ಉತ್ತಮ ಕೋಚ್​ಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಆ ತಂಡಕ್ಕೆ ಸೇರಿ ಕೆಲವು ಅದ್ಭುತ ನೆನಪುಗಳನ್ನು ಸೃಷ್ಟಿಸಲು ನಾನು ಎದುರು ನೋಡುತ್ತಿದ್ದೇನೆ. ಆಶಾದಾಯಕವಾಗಿ, ಕಳೆದ ವರ್ಷಕ್ಕಿಂತ ತಂಡ ಉತ್ತಮ ಪ್ರದರ್ಶನ ತೋರಲು ನೆರವಾಗಲು ಸಹಾಯ ಮಾಡಲು ಬಯಸುತ್ತೇನೆ" ಎಂದು ಸ್ಮಿತ್ ಹೇಳಿದ್ದಾರೆ.

ಇದನ್ನು ಓದಿ:ಕಡಿಮೆ ಹಣಕ್ಕೆ ಸೇಲ್​.. ಐಪಿಎಲ್​ನಿಂದ ಹೊರಬರಲಿದ್ದಾರಾ ಸ್ಮಿತ್​..!

2019ರಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರ್ಯಾಂಚೈಸ್‌ಗೆ ಸೇರಿದ ಬಲಗೈ ಬ್ಯಾಟ್ಸ್‌ಮನ್, ಯುಎಇಯಲ್ಲಿ ನಡೆದಿದ್ದ 2020ರ ಆವೃತ್ತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ, ರಾಯಲ್ಸ್​ ಲೀಗ್​ನಲ್ಲಿ ಕೊನೆಯ ಸ್ಥಾನಿಯಾಗಿತ್ತು. ಐಪಿಎಲ್​​ನಲ್ಲಿ 95 ಪಂದ್ಯಗಳನ್ನಾಡಿರುವ ಸ್ಮಿತ್ 35.34 ಸರಾಸರಿಯಲ್ಲಿ​ 2,333 ರನ್​ಗಳಿಸಿದ್ದಾರೆ.

2017ರಲ್ಲಿ ರೈಸಿಂಗ್ ಪುಣೆ ಸೂಪರ್​ ಜೇಂಟ್ಸ್​ ಪರ ಆಡಿದ್ದ ಸ್ಮಿತ್​ ಅದ್ಭುತ ಪ್ರದರ್ಶನ ತೋರಿದ್ದರು. ಆ ಆವೃತ್ತಿಯಲ್ಲಿ 14 ಪಂದ್ಯಗಳಿಂದ 472 ರನ್​ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.