ETV Bharat / sports

ಚಂದ್ರನ ಮೇಲಿದ್ದಂತೆ ಭಾಸವಾಗುತ್ತಿದೆ.. ಸಚಿನ್​ ಹೀಗೆ ಹೇಳಿದ್ಯಾಕೆ..!? - ಶ್ರೀಲಂಕಾ ಲೆಜೆಂಡ್ಸ್

ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 181ರನ್ ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60 ಮತ್ತು ಯೂಸುಫ್ ಪಠಾಣ್ ಅಜೇಯ 62 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

Road Safety World Series
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್
author img

By

Published : Mar 22, 2021, 10:40 AM IST

ಹೈದರಾಬಾದ್​ : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡ, ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್​ಗಳಿಂದ ಮಣಿಸುವ ಮೂಲಕ ಪ್ರಶಸ್ತಿ ಎತ್ತಿಹಿಡಿದಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತ ಲೆಜೆಂಡ್ಸ್ ತಂಡದ ನಾಯಕ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್, "ವಾವ್..​ ಈ ಗೆಲುವು ಅಮೋಘವಾಗಿದೆ, ಅದ್ಭುತವಾಗಿದೆ.. ನಾನು ಚಂದ್ರನ ಮೇಲಿರುವಂತೆ ಭಾಸವಾಗುತ್ತಿದೆ." ಎಂದು ಬರೆದಿದ್ದಾರೆ.

ಈ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60 ರನ್ ಮತ್ತು ಯೂಸುಫ್ ಪಠಾಣ್ ಅಜೇಯ 62 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಓದಿ : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ : ಇಂಡಿಯಾ ಲೆಜೆಂಡ್ಸ್ ಚಾಂಪಿಯನ್​

ಭಾರತ ನೀಡಿದ 182 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಲಂಕಾ ಪರ ಸನತ್ ಜಯಸೂರ್ಯ 43 ರನ್ ಗಳಿಸಿದರೆ, ಚಿಂತಕ ಜಯಸಿಂಘೆ 40 ಮತ್ತು ವೀರರತ್ನೆ 38 ರನ್ ಗಳಿಸಿದರು. ಅಂತಿಮವಾಗಿ ಲಂಕಾ ತಂಡ 14 ರನ್ನುಗಳ ಅಂತರದಲ್ಲಿ ಭಾರತದ ಎದುರು ಸೋಲೊಪ್ಪಿಕೊಂಡಿತು. ಆ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 2021 ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.