ಅಬುಧಾಬಿ: ಮಹೇಂದ್ರ ಸಿಂಗ್ ಧೋನಿ ಯಾವಾಗಲು ಶಾಂತಚಿತ್ತರಾಗಿರುತ್ತಾರೆ, ಅದೇ ಪಂದ್ಯವನ್ನ ಜಯಿಸಲು ಸಹಾಯ ಮಾಡುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಭಾನುವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಕೊನೆಯ ಓವರ್ನಲ್ಲಿ ರೋಚಕವಾಗಿ ಪಂದ್ಯವನ್ನ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ರುತುರಾಜ್ ಕೇವಲ 28 ಎಸೆತಗಳಲ್ಲಿ 40 ರನ್ಗಳಿಸಿ ತಂಡಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ ಡು ಪ್ಲೆಸಿಸ್ 43 ರನ್ ಗಳಿಸಿ ಮಿಂಚಿದ್ದರು.
ಪಂದ್ಯದ ನಂತರ ಮಾತನಾಡಿದ ಗಾಯಕ್ವಾಡ್ "ನಾವು ದೊಡ್ಡ ಗುರಿ ಬೆನ್ನಟ್ಟುತ್ತಿರುವಾಗ, ಆರಂಭಿಕ ಜೋಡಿ ರನ್ ಗಳಿಸುವುದು ಮುಖ್ಯ. ನಾನು ಮತ್ತು ಡು ಪ್ಲೆಸಿಸ್ ಇಬ್ಬರಲ್ಲಿ ಒಬ್ಬರು 13 ನೇ ಓವರ್‌ವರೆಗೆ ಇದ್ದಿದ್ದರೆ, ಕೊನೆಯ ಓವರ್‌ವರೆಗೆ ಪಂದ್ಯ ನಡೆಯುತ್ತಿರಲಿಲ್ಲ" ಎಂದಿದ್ದಾರೆ.
"ಧೋನಿ ತುಂಬಾ ಶಾಂತರಾಗಿರುತ್ತಾರೆ. ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿರುವ ಅನೇಕ ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ಒತ್ತಡದ ಸಮಯದಲ್ಲಿ ಅವರು ಎಲ್ಲರೂ ಶಾಂತವಾಗಿರುತ್ತಾರೆ ಮತ್ತು ಅವರಿಗೆ ಪಂದ್ಯವನ್ನು ಗೆಲ್ಲುತ್ತೇವೆ ಎಂಬ ನಂಬಿಕೆ ಹೆಚ್ಚಾಗಿರುತ್ತದೆ. ಅದೇ ತಂಡದ ಪ್ಲಸ್ ಪಾಯಿಂಟ್" ಎಂದು ರುತುರಾಜ್ ಹೇಳಿದರು.