ಅಹ್ಮದಾಬಾದ್; ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಮತ್ತು 4 ವಿಕೆಟ್ ಪಡೆದ ಕನ್ನಡಿಗ ಪ್ರಸಿಧ್ ಕೃಷ್ಣ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಅಜೇಯ 34 ರನ್ಗಳಿಸಿದ್ದ ಸೂರ್ಯಕುಮಾರ್ ಯಾದವ್ 2ನೇ ಪಂದ್ಯದಲ್ಲೂ ನಿರ್ಣಾಯಕ 64 ರನ್ ಸಿಡಿಸಿದ್ದರು.
ಒಟ್ಟಾರೆ 6 ಏಕದಿನ ಪಂದ್ಯವನ್ನಾಡಿರುವ ಕ್ರಮವಾಗಿ 31, 53, 40, 39, 34 ಮತ್ತು 64 ರನ್ಗಳಿಸಿದ್ದು, ವೃತ್ತಿ ಜೀವನದ ಆರಂಭದ 6 ಇನ್ನಿಂಗ್ಸ್ಗಳಲ್ಲಿ 30+ ರನ್ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು.
ಇವರಿಗೂ ಮುನ್ನ ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಫಖರ್ ಜಮಾನ್, ನೆದರ್ಲೆಂಡ್ಸ್ನ ರಯಾನ್ ಟೆನ್ ಡೊಶಾಟ್ ಮತ್ತು ಆಸ್ಟ್ರೇಲಿಯಾದ ಟಾಮ್ ಕೂಪರ್ ತಮ್ಮ ಮೊದಲ ಐದು ಇನಿಂಗ್ಸ್ಗಳಲ್ಲಿ 30+ ರನ್ಗಳಿಸುವ ಮೂಲಕ ದಾಖಲೆ ಬರೆದಿದ್ದರು.
ಮೊದಲ 6 ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ
ಪ್ರಸಿಧ್ ಕೃಷ್ಣ ಮಾರ್ಚ್ 23 2021ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪದಾರ್ಪಣೆ ಮಾಡಿದ್ದರು, ಇಲ್ಲಿಯವರೆಗೆ 6 ಪಂದ್ಯಗಳನ್ನಾಡಿದ್ದು, ಅವರು 15 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಮೊದಲ 6 ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇವರನ್ನು ಹೊರತುಪಡಿಸಿದರೆ, 1988ರಲ್ಲಿ ನರೇಂದ್ರ ಹಿರ್ವಾನಿ 14, 1998ರಲ್ಲಿ ಅಜಿತ್ ಅಗರ್ಕರ್ 14, 2007-08ರಲ್ಲಿ ಪ್ರವೀಣ್ ಕುಮಾರ್ ಮತ್ತು 2016ರಲ್ಲಿ ಜಸ್ಪ್ರೀತ್ ಬುಮ್ರಾ 6 ಪಂದ್ಯಗಳಿಂದ ತಲಾ 14 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ಪಂತ್ರನ್ನು ಆರಂಭಿಕನಾಗಿ ಕಣಕ್ಕಿಳಿಸಿದ್ದು ಪ್ರಯೋಗವಷ್ಟೆ, ಶಾಶ್ವತ ನಿರ್ಧಾರವಲ್ಲ: ರೋಹಿತ್ ಶರ್ಮಾ