ETV Bharat / sports

ವಿಶ್ವದಾಖಲೆಗೆ 7 ರೇಟಿಂಗ್ಸ್​ ಹಿಂದಿರುವ ಸೂರ್ಯಕುಮಾರ್​..910 ಅಂಕ ಪಡೆದ ಭಾರತದ ಮೊದಲ ಕ್ರಿಕೆಟಿಗ

author img

By

Published : Feb 2, 2023, 9:13 AM IST

ಐಸಿಸಿ ಟಿ 20 ಶ್ರೇಯಾಂಕ ಪಟ್ಟಿ ಬಿಡುಗಡೆ- ಸೂರ್ಯಕುಮಾರ್​ ಯಾದವ್​ ನಂಬರ್​ 1- ಅತ್ಯಧಿಕ​​ ರೇಟಿಂಗ್ಸ್​ ಪಡೆದ ಸೂರ್ಯಕುಮಾರ್​- ಡೇವಿಡ್​ ಮಲಾನ್​ ದಾಖಲೆಯತ್ತ ಸೂರ್ಯಕುಮಾರ್​

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ದುಬೈ: ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ ಬಳಿಕ ಕ್ರಿಕೆಟ್​ನ 360 ಡಿಗ್ರಿ ಬ್ಯಾಟರ್​ ಎಂದೇ ಗುರುತಿಸಿಕೊಂಡಿರುವ ಭಾರತದ ಸೂರ್ಯಕುಮಾರ್​ ಯಾದವ್​ ಟಿ20 ಕ್ರಿಕೆಟ್​ನಲ್ಲಿ ತನ್ನದೇ ಪ್ರಭುತ್ವ ಸಾಧಿಸಿದ್ದಾರೆ. ಅದ್ಭುತ ಹೊಡೆತಗಳು ಸೂರ್ಯನ ಶಕ್ತಿ. ಚುಟುಕು ಮಾದರಿಯಲ್ಲಿ ನಂಬರ್​​ 1 ಬ್ಯಾಟ್ಸ್​ಮನ್​ ಆಗಿರುವ ಯಾದವ್​ ರ್ಯಾಂಕಿಂಗ್​ ಪಟ್ಟಿಯಲ್ಲಿ ಅತ್ಯಧಿಕ ರೇಟಿಂಗ್ಸ್​ ಪಡೆದ ಭಾರತದ ಮೊದಲ ಮತ್ತು ವಿಶ್ವದ 2ನೇ ಆಟಗಾರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ(ಐಸಿಸಿ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಲ್ಲದೇ, ಅತ್ಯಧಿಕ 910 ರೇಟಿಂಗ್​ ಸಂಪಾದಿಸಿದ್ದಾರೆ. 2ನೇ ಅತ್ಯಧಿಕ ರೇಟಿಂಗ್​ ಗಳಿಸಿದ ಕ್ರಿಕೆಟರ್​ ಎಂಬ ಶ್ರೇಯಕ್ಕೆ ಭಾಜರಾದರು. ಇದಕ್ಕೂ ಮೊದಲು ಇಂಗ್ಲೆಂಡ್​ನ ಡೇವಿಡ್​ ಮಲಾನ್​ 915 ರೇಟಿಂಗ್​ ಗಳಿಸಿದ್ದು, ಈವರೆಗಿನ ಅತ್ಯಧಿಕವಾಗಿದೆ.

ನ್ಯೂಜಿಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ 47 ರನ್ ಗಳಿಸಿದ ನಂತರ ಸೂರ್ಯಕುಮಾರ್ 910 ಅಂಕಗಳ ರೇಟಿಂಗ್ ತಲುಪಿದರು. ಲಖನೌದಲ್ಲಿ ನಡೆದ 2 ನೇ ಟಿ20ಯಲ್ಲಿ ಔಟಾಗದೆ 26 ರನ್ ಗಳಿಸಿದ್ದರು. 2 ರೇಟಿಂಗ್ಸ್​ ಇಳಿಕೆ ಕಂಡಿದ್ದು 908 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಸಾರ್ವಕಾಲಿಕ ಅತ್ಯಧಿಕ ರೇಟಿಂಗ್ ಹೊಂದಿರುವ ಡೇವಿಡ್ ಮಲಾನ್ ಅವರ ದಾಖಲೆಯನ್ನು ಮೀರಲು ಸೂರ್ಯಕುಮಾರ್ ಯಾದವ್​ ಇನ್ನೂ 7 ರೇಟಿಂಗ್​ ಪಾಯಿಂಟ್ಸ್ ಸಂಪಾದಿಸಬೇಕಿದೆ.

ದಾಖಲೆ ನಿರ್ಮಾಣಕ್ಕೆ ಅರ್ಧಶತಕ ಸಾಕು: ಚುಟುಕು ಮಾದರಿ ಕ್ರಿಕೆಟ್​ನಲ್ಲಿ ಅದ್ಭುತ ಲಯದಲ್ಲಿರುವ ಸೂರ್ಯಕುಮಾರ್​ ಯಾದವ್​ ಅತ್ಯಧಿಕ ರೇಟಿಂಗ್ಸ್​ ಪಾಯಿಂಟ್ಸ್​ ದಾಖಲೆ ನಿರ್ಮಿಸಲು ಒಂದು ಅರ್ಧಶತಕ ಸಾಕು. ಸದ್ಯ 908 ರೇಟಿಂಗ್ಸ್​ ಹೊಂದಿರುವ ಆಟಗಾರ ಸಾರ್ವಕಾಲಿಕ ದಾಖಲೆ ನಿರ್ಮಾಣದ ತುದಿಯಲ್ಲಿದ್ದಾರೆ. ಇನ್ನು ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮದ್​ ರಿಜ್ವಾನ, ನ್ಯೂಜಿಲ್ಯಾಂಡ್​ನ ಡೆವೋನ್​ ಕಾನ್ವೇ ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.

ಟಾಪ್​ 10 ರಲ್ಲಿ ಭಾರತದ ಪರವಾಗಿ ಸೂರ್ಯಕುಮಾರ್​ ಯಾದವ್​ ಮಾತ್ರ ಉಳಿದಿದ್ದಾರೆ. ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ 14 ಸ್ಥಾನದಲ್ಲಿದ್ದರೆ, ಕೆಎಲ್​ ರಾಹುಲ್​ 25 ನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್​ ಯಾದವ್​ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ ಒಟ್ಟು 239 ರನ್ ಗಳಿಸಿದ್ದರು. ಐಸಿಸಿ ನೀಡುವ ತಿಂಗಳ ವರ್ಷದ ಟಿ20 ಕ್ರಿಕೆಟಿಗ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.

ಇನ್ನು ಏಕದಿನ ಶ್ರೇಯಾಂಕ ಪಟ್ಟಿಯ ಬ್ಯಾಟ್ಸಮನ್​ಗಳಲ್ಲಿ ಶುಭಮನ್ ಗಿಲ್ (6ನೇ), ವಿರಾಟ್ ಕೊಹ್ಲಿ (7ನೇ) ಮತ್ತು ರೋಹಿತ್ ಶರ್ಮಾ (9ನೇ) ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಮೊಹಮದ್​ ಸಿರಾಜ್​ ನಂಬರ್​ 1 ಬೌಲರ್​ ಆಗಿದ್ದು, ಟಾಪ್​ 10ನಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಆಲ್​ರೌಂಡರ್​ ಶ್ರೇಯಾಂಕದಲ್ಲಿ ಟಿ20 ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ. ಟೆಸ್ಟ್​ನಲ್ಲಿ ರವಿಚಂದ್ರನ್​ ಅಶ್ವಿನ್​ 2ನೇ ಸ್ಥಾನ ಪಡೆದಿದ್ದಾರೆ.

ಓದಿ: ಟಿ20: ತವರಿನಲ್ಲಿ ಭಾರತಕ್ಕೆ ಮತ್ತೊಂದು ಸರಣಿ ಗೆಲುವು; ವಿರಾಟ್​ ದಾಖಲೆ ಮುರಿದ ಗಿಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.