ETV Bharat / sports

ಧೋನಿ, ರೋಹಿತ್ ಶರ್ಮಾ ಸಾಲಿಗೆ ಸೇರಿದ ಸುರೇಶ್ ರೈನಾ

author img

By

Published : May 1, 2021, 9:09 PM IST

ರೈನಾ 200ನೇ ಪಂದ್ಯವನ್ನಾಡಿದ ಸಿಎಸ್​ಕೆ ನಾಯಕ ಧೋನಿ(211), ಮುಂಬೈ ಇಂಡಿಯನ್ಸ್ ನಾಯಕ ರೋಹಿತ್(207) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್(203) ಅವರ ಸಾಲಿಗೆ ಸೇರಿದ್ದಾರೆ.

ಸುರೇಶ್ ರೈನಾ 200ನೇ ಐಪಿಎಲ್ ಪಂದ್ಯ
ಸುರೇಶ್ ರೈನಾ 200ನೇ ಐಪಿಎಲ್ ಪಂದ್ಯ

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಸುರೇಶ್ ರೈನಾ ಐಪಿಎಲ್​ನಲ್ಲಿ 200ನೇ ಪಂದ್ಯವನ್ನಾಡಿದ 5ನೇ ಕ್ರಿಕೆಟಿಗ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್​ನಿಂದ ದೂರ ಉಳಿದಿದ್ದ ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ಇದೀಗ 200ನೇ ಪಂದ್ಯವನ್ನಾಡಿದ ಸಿಎಸ್​ಕೆ ನಾಯಕ ಧೋನಿ(211), ಮುಂಬೈ ಇಂಡಿಯನ್ಸ್ ನಾಯಕ ರೋಹಿತ್(207) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್(203) ಅವರ ಸಾಲಿಗೆ ಸೇರಿದ್ದಾರೆ. ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 199 ಪಂದ್ಯಗಳನ್ನಾಡಿದ್ದಾರೆ.

We love you, 200! Another feather on the crown for #ChinnaThala.

#MIvCSK #WhistlePodu #Yellove 🦁💛 pic.twitter.com/16RWyOwjkk

— Chennai Super Kings - Mask P😷du Whistle P🥳du! (@ChennaiIPL) May 1, 2021 ">

ರೈನಾ 2016 ಮತ್ತು 2017ರ ಆವೃತ್ತಿಯನ್ನು ಹೊರತುಪಡಿಸಿ 2008ರಿಂದ 2019ರ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ಎರಡು ವರ್ಷ ಸಿಎಸ್​ಕೆ ನಿಷೇಧಗೊಂಡಿದ್ದರಿಂದ ಗುಜರಾತ್ ಲಯನ್ಸ್ ಪರ ಆಡಿದ್ದರು. ಅವರು 199 ಪಂದ್ಯಗಳಿಂದ 5,491 ರನ್​ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 39 ಅರ್ಧಶತಕ ಸೇರಿವೆ.

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಸುರೇಶ್ ರೈನಾ ಐಪಿಎಲ್​ನಲ್ಲಿ 200ನೇ ಪಂದ್ಯವನ್ನಾಡಿದ 5ನೇ ಕ್ರಿಕೆಟಿಗ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್​ನಿಂದ ದೂರ ಉಳಿದಿದ್ದ ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ಇದೀಗ 200ನೇ ಪಂದ್ಯವನ್ನಾಡಿದ ಸಿಎಸ್​ಕೆ ನಾಯಕ ಧೋನಿ(211), ಮುಂಬೈ ಇಂಡಿಯನ್ಸ್ ನಾಯಕ ರೋಹಿತ್(207) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್(203) ಅವರ ಸಾಲಿಗೆ ಸೇರಿದ್ದಾರೆ. ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 199 ಪಂದ್ಯಗಳನ್ನಾಡಿದ್ದಾರೆ.

ರೈನಾ 2016 ಮತ್ತು 2017ರ ಆವೃತ್ತಿಯನ್ನು ಹೊರತುಪಡಿಸಿ 2008ರಿಂದ 2019ರ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ಎರಡು ವರ್ಷ ಸಿಎಸ್​ಕೆ ನಿಷೇಧಗೊಂಡಿದ್ದರಿಂದ ಗುಜರಾತ್ ಲಯನ್ಸ್ ಪರ ಆಡಿದ್ದರು. ಅವರು 199 ಪಂದ್ಯಗಳಿಂದ 5,491 ರನ್​ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 39 ಅರ್ಧಶತಕ ಸೇರಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.