ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಾಗಿ ಸೂರ್ಯ ಹೊರಹೊಮ್ಮಿದ್ದರೆ, ಇನ್ನೂ 24 ರನ್ ಗಳಿಸಿದರೆ ವರ್ಷವೊಂದರಲ್ಲಿ 1000 ರನ್ ಪೂರೈಸಿದ ದಾಖಲೆಗೂ ಪಾತ್ರರಾಗಲಿದ್ದಾರೆ.
ಈ ಹಿಂದೆ 2018 ರಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ 689 ರನ್ ಬಾರಿಸಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಆ ದಾಖಲೆ ಮೀರಿದ್ದು, 1 ಸಾವಿರ ರನ್ ಸನಿಹದಲ್ಲಿದ್ದಾರೆ.
2022 ರ ಸಾಲಿನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ರೇಟ್ 180.29 ಆಗಿದೆ. 32 ಟಿ20 ಪಂದ್ಯವಾಡಿರುವ ಸೂರ್ಯಕುಮಾರ್ ಒಟ್ಟಾರೆ 173.35 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಸೂರ್ಯ ಬ್ಯಾಟ್ನಿಂದ ಈವರೆಗೂ 57 ಸಿಕ್ಸರ್ ಮತ್ತು 88 ಬೌಂಡರಿಗಳು ಬಂದಿವೆ.
ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಸೂರ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಸಿಕ್ಸ್ ಸೇರಿದಂತೆ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸುವ ಮೂಲಕ ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು ಪಾಕಿಸ್ತಾನದ ಮೊಹಮದ್ ರಿಜ್ವಾನ್ 2021 ರಲ್ಲಿ 42 ಸಿಕ್ಸರ್ ಸಿಡಿಸಿದ್ದರು. ಅದೇ ವರ್ಷ ನ್ಯೂಜಿಲ್ಯಾಂಡ್ನ ದೈತ್ಯ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ 41 ಸಿಕ್ಸರ್ ಬಾರಿಸಿದ್ದರು.
ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿ ಇದೆ. ಅವರು ಬ್ಯಾಟ್ ಬೀಸುತ್ತಿರುವ ಮಾದರಿಗೆ ಇನ್ನಷ್ಟು ದಾಖಲೆಗಳು ದಾಖಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಓದಿ: ರಾಹುಲ್ ಬ್ಯಾಟಿಂಗ್ ಟೀಕಿಸಿದ್ದು ಘೋರ ತಪ್ಪಾಯ್ತು..ಕನ್ನಡಿಗನಿಗೆ ಮಾಜಿ ಆಟಗಾರನ ಬೆಂಬಲ