ಪುಣೆ: ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಅಮೋಘ ಪ್ರದರ್ಶನ ನೀಡಿದ ವಿಂಡೀಸ್ ಆಲ್‌ರೌಂಡರ್ ಡಿಯಾಂಡ್ರ ಡಾಟಿನ್ ಅವರು ಸೂಪರ್‌ನೋವಾಸ್ ತಂಡ 3ನೇ ಬಾರಿಗೆ ಮಹಿಳಾ ಟಿ20 ಚಾಲೆಂಜ್ ಗೆಲ್ಲುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು. ನಿನ್ನೆ ಪುಣೆಯಲ್ಲಿ ನಡೆದ 'ಮಹಿಳಾ ಐಪಿಎಲ್' ಎಂದೇ ಪರಿಗಣಿಸಲಾದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೂಪರ್‌ನೋವಾಸ್ ತಂಡವು ವೆಲಾಸಿಟಿಗೆ 4 ರನ್‌ಗಳಿಂದ ಸೋಲುಣಿಸಿತು.
ಡಾಟಿನ್ 44 ಎಸೆತಗಳಲ್ಲಿ 62 ಗಳಿಸಿದ್ದು ಸೂಪರ್‌ನೋವಾಸ್ ಎದುರಾಳಿಗೆ 165 ರನ್ ಟಾರ್ಗೆಟ್ ನೀಡಲು ನೆರವಾಯಿತು. ಬೌಲಿಂಗ್ ಮೂಲಕವೂ ಈ ಬ್ಯಾಟರ್ ಮಿಂಚಿದರು. ನಾಲ್ಕು ಓವರ್‌ಗಳಲ್ಲಿ 2 ವಿಕೆಟ್ ಸಾಧನೆ ಮಾಡಿದರು. ಹಾಗಾಗಿ, ವೆಲಾಸಿಟಿ 8 ವಿಕೆಟ್ ನಷ್ಟಕ್ಕೆ 161 ಕಲೆ ಹಾಕಿ ಗೆಲುವಿನ ಸನಿಹದಲ್ಲಿ ಎಡವಿತು. ದಕ್ಷಿಣ ಆಫ್ರಿಕಾ ಬ್ಯಾಟರ್ ಲಾರಾ ವೊಲ್ವಾರ್ಟ್ ಏಕಾಂಗಿಯಾಗಿ ವೆಲಾಸಿಟಿ ಪರ ದಿಟ್ಟ ಹೋರಾಟ ನಡೆಸಿದರು. ಇವರು 40 ಎಸೆತಗಳಲ್ಲಿ 65 ರನ್ ಸಂಗ್ರಹಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ್ರೂ ತಂಡದ ಸಹ ಆಟಗಾರರ ಸೂಕ್ತ ಬೆಂಬಲ ಸಿಗದ ಕಾರಣ ಹೋರಾಟ ಫಲ ನೀಡಲಿಲ್ಲ.
-
Winners Are Grinners! ☺️ ☺️@ImHarmanpreet, Captain of Supernovas, receives the #My11CircleWT20C Trophy from the hands of Mr. @SGanguly99, President, BCCI & Mr. @JayShah, Honorary Secretary, BCCI. 👏 🏆 #SNOvVEL pic.twitter.com/ujGbXX4GzB
— IndianPremierLeague (@IPL) May 28, 2022 " class="align-text-top noRightClick twitterSection" data="
">Winners Are Grinners! ☺️ ☺️@ImHarmanpreet, Captain of Supernovas, receives the #My11CircleWT20C Trophy from the hands of Mr. @SGanguly99, President, BCCI & Mr. @JayShah, Honorary Secretary, BCCI. 👏 🏆 #SNOvVEL pic.twitter.com/ujGbXX4GzB
— IndianPremierLeague (@IPL) May 28, 2022Winners Are Grinners! ☺️ ☺️@ImHarmanpreet, Captain of Supernovas, receives the #My11CircleWT20C Trophy from the hands of Mr. @SGanguly99, President, BCCI & Mr. @JayShah, Honorary Secretary, BCCI. 👏 🏆 #SNOvVEL pic.twitter.com/ujGbXX4GzB
— IndianPremierLeague (@IPL) May 28, 2022
10ನೇ ಕ್ರಮಾಂಕದ ಬ್ಯಾಟರ್ ಸಿಮ್ರಾನ್ ಬಹದ್ದೂರ್ 10 ಎಸೆತಗಳಲ್ಲಿ 20 ರನ್ ಚಚ್ಚಿದರು. 19ನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ 3 ಬೌಂಡರಿಗಳನ್ನು ಹೊಡೆದರು. ವೆಲಾಸಿಟಿ ಗೆಲ್ಲಲು ಕೊನೆಯ ಓವರ್‌ನಲ್ಲಿ 17 ರನ್ ಬೇಕಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕೇವಲ 12 ನೀಡಿ ಸೂಪರ್‌ನೋವಾ ತಂಡಕ್ಕೆ ಗೆಲುವು ತಂದಿಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಈ ಇಂಗ್ಲಿಷ್ ಬೌಲರ್ ವೆಲಾಸಿಟಿಯನ್ನು ಕಾಡಿದ್ರೆ ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಅಲನಾ ಕಿಂಗ್ (3/32) ಮೂಲಕ ಬ್ಯಾಕ್‌ಎಂಡ್‌ನಲ್ಲಿ ತಂಡಕ್ಕೆ ಮಾರಕವಾದರು. ತಾವು ಎಸೆದ 16ನೇ ಓವರ್‌ನಲ್ಲಿ ಕಿಂಗ್ ಅವರಿಗೆ ಹ್ಯಾಟ್ರಿಕ್ ವಿಕೆಟ್ ಸಾಧಿಸುವ ಅವಕಾಶವಿತ್ತು.
ಸೂಪರ್‌ನೋವಾಸ್ ತಂಡ 2018 ಮತ್ತು 2019ರಲ್ಲಿ ಫೈನಲ್‌ನಲ್ಲಿ ಜಯಗಳಿಸಿದ್ದು, 2020ರಲ್ಲಿ ಮಾತ್ರ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟ್ರೇಲ್‌ಬ್ಲೇಜರ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಟೂರ್ನಿ ನಡೆದಿರಲಿಲ್ಲ. 2019ರಲ್ಲಿ ವೆಲೋಸಿಟಿ ರನ್ನರ್‌ಅಪ್ ಆಗಿ ಹೊರಹೊಮ್ಮಿತ್ತು.
ನಿನ್ನೆಯ ಪಂದ್ಯದಲ್ಲಿ ವೆಲಾಸಿಟಿಯ ಪ್ರದರ್ಶನದ ವಿಚಾರಕ್ಕೆ ಬರೋಣ. ವೆಲಾಸಿಟಿ ಆರಂಭಿಕರಾದ ಶೆಫಾಲಿ ವರ್ಮಾ ಮತ್ತು ಯಸ್ತಿಕಾ ಭಾಟಿಯಾ ಸ್ಫೋಟಕ ಆರಂಭವನ್ನೇನೂ ನೀಡಿದರು. ಮೊದಲ 2 ಓವರ್‌ಗಳಲ್ಲಿ 28 ರನ್ ಸೇರಿಸಿದರು. ಆದ್ರೆ ಸೂಪರ್‌ನೋವಾ ಮಹಿಳೆಯರ ಬೌಲಿಂಗ್ ದಾಳಿಯ ರಭಸಕ್ಕೆ ಕ್ರೀಸ್‌ನಲ್ಲಿ ಬಲವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಇನ್ನಿಂಗ್ಸ್‌ನ 11 ಓವರ್ ಮುಗಿಯುವಷ್ಟರಲ್ಲಿ ತಂಡದ ಅರ್ಧ ಬ್ಯಾಟರ್‌ಗಳು ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ತಂಡ ವೈಫಲ್ಯ ಅನುಭವಿಸುತ್ತಾ ಸಾಗಿತು. ವೆಲಾಸಿಟಿ ಕ್ಯಾಪ್ಟನ್ ದೀಪ್ತಿ ಶರ್ಮಾ, ಕೇಟ್ ಕ್ರಾಸ್ ಹಾಗು ಸಿಮ್ರಾನ್ ಬಹದ್ದೂರ್ ತಲಾ 2 ವಿಕೆಟ್ ಪಡೆದರು. ಅಯಬೊಂಗ ಕಾಕಾ 1 ವಿಕೆಟ್ ಕಿತ್ತರು.
ಇದನ್ನೂ ಓದಿ: Gt Vs Rr: ಫೈನಲ್ ಕಿರೀಟ ಯಾರ ಮುಡಿಗೆ?.. ಎರಡು ತಿಂಗಳ ರೋಚಕತೆಗೆ ಮೋದಿ ಮೈದಾನದಲ್ಲಿ ತೆರೆ