ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಕನಸಿನ ಕೂಸು ಮಹಾರಾಜ ಟ್ರೋಫಿ ಕ್ರಿಕೆಟ್ 2022 ಮೂಲಕ ಬೆಳಕಿಗೆ ಬಂದ ಮತ್ತೊಬ್ಬ ಪ್ರತಿಭೆ ರೋಹನ್ ಪಾಟೀಲ್. ಗುಲ್ಬರ್ಗಾ ಮಿಸ್ಟಿಕ್ಸ್ ಪರ ಇನ್ನಿಂಗ್ಸ್ ಆರಂಭಿಸುತ್ತಿರುವ ಈ ಎಡಗೈ ದಾಂಡಿಗ ತಮ್ಮ ಲೀಲಾಜಾಲವಾದ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಫೇಮಸ್ ಆಗ್ತಿದ್ದಾರೆ. ಲೀಗ್ ಹಂತದಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 358 ರನ್‌ಗಳನ್ನು ಕಲೆಹಾಕಿರುವ ರೋಹನ್ ಟೂರ್ನಿಯ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
![Rohan Patil Maharaja Trophy Talent super performance by cricketer rohan patil maharaja trophy cricket 2022 ಮಹಾರಾಜ ಟ್ರೋಫಿ ಕ್ರಿಕೆಟ್ 2022 ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ 2022 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪವರ್ ಹಿಟ್ಟರ್ ರೋಹನ್ ಪಾಟೀಲ್ ಯಾರು ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ 2022 ಲೀಗ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯ](https://etvbharatimages.akamaized.net/etvbharat/prod-images/kn-bng-02-rohan-patil-maharaja-trophy-kac10035_24082022114442_2408f_1661321682_461.jpg)
ಮಂಗಳವಾರ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಅಕ್ಷರಶಃ ರೌದ್ರಾವತಾರವೆತ್ತಿದ ರೋಹನ್ ಪಾಟೀಲ್ ಏಕಾಂಗಿಯಾಗಿ 49 ಎಸೆತಗಳಲ್ಲಿ 7 ಸಿಕ್ಸರ್ 10 ಬೌಂಡರಿ ಸಹಿತ 108 ರನ್ ಗಳಿಸಿದ್ದರು. ಈ ಮೂಲಕ ರೋಹನ್ ಪಾಟೀಲ್ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲರ್‌ಗಳ ಬೆವರಿಳಿಸಿದರು. ಬ್ಲಾಸ್ಟರ್ಸ್ ವಿರುದ್ಧ 44 ರನ್‌ಗಳಿಂದ ಮಿಸ್ಟಿಕ್ಸ್ ಸೋಲು ಕಂಡರೂ ರೋಹನ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
![Rohan Patil Maharaja Trophy Talent super performance by cricketer rohan patil maharaja trophy cricket 2022 ಮಹಾರಾಜ ಟ್ರೋಫಿ ಕ್ರಿಕೆಟ್ 2022 ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ 2022 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪವರ್ ಹಿಟ್ಟರ್ ರೋಹನ್ ಪಾಟೀಲ್ ಯಾರು ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ 2022 ಲೀಗ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯ](https://etvbharatimages.akamaized.net/etvbharat/prod-images/kn-bng-02-rohan-patil-maharaja-trophy-kac10035_24082022114442_2408f_1661321682_763.jpg)
ಪವರ್ ಹಿಟ್ಟರ್ ರೋಹನ್ ಪಾಟೀಲ್ ಯಾರು?: ಹಿರೇಕೆರೂರು ಮೂಲದ ರೋಹನ್ ಪಾಟೀಲ್ ತಂದೆ ಹವ್ಯಾಸಿ ಕ್ರಿಕೆಟಿಗರು. ತಾಯಿ ದಾವಣಗೆರೆ ಮೂಲದವರು. ರೋಹನ್ ಹೇಳುವಂತೆ ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ಅವರಿಗೆ ತಂದೆಯೇ ಮೊದಲ ಗುರು. ತಮ್ಮ ಐದನೇ ವಯಸ್ಸಿಗೆ ಕ್ರಿಕೆಟ್ ಆರಂಭಿಸಿದ ರೋಹನ್ಗೆ ಬೌಲ್ ಮಾಡುತ್ತಿದ್ದವರು ಅವರ ತಂದೆ. ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ರೋಹನ್ ಓಪನ್ ಕ್ಲಾಸಸ್ ಮೂಲಕ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ.
![Rohan Patil Maharaja Trophy Talent super performance by cricketer rohan patil maharaja trophy cricket 2022 ಮಹಾರಾಜ ಟ್ರೋಫಿ ಕ್ರಿಕೆಟ್ 2022 ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ 2022 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪವರ್ ಹಿಟ್ಟರ್ ರೋಹನ್ ಪಾಟೀಲ್ ಯಾರು ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ 2022 ಲೀಗ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯ](https://etvbharatimages.akamaized.net/etvbharat/prod-images/kn-bng-02-rohan-patil-maharaja-trophy-kac10035_24082022114442_2408f_1661321682_659.jpg)
ಸದ್ಯ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿರುವ ರೋಹನ್ ಸರ್ ಸೈಯದ್ ಕ್ರಿಕೆಟ್ ಕ್ಲಬ್ ಪರ ಭರವಸೆಯ ಆರಂಭಿಕ ಆಟಗಾರ. ಕಳೆದ ರಣಜಿ ಟೂರ್ನಿಯಲ್ಲಿ ರಾಜ್ಯದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದ ರೋಹನ್ ಮಹಾರಾಜ ಟ್ರೋಫಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಮ್ಮ ತಾಕತ್ತೇನು ಎಂಬುದನ್ನ ಸಾಬೀತುಪಡಿಸಿದ್ದಾರೆ. ಸದ್ಯ ಮಹಾರಾಜ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಐಪಿಎಲ್ ಫ್ರಾಂಚೈಸಿಗಳ ಪ್ರತಿಭಾನ್ವೇಷಣಾ ತಂಡಗಳ ಪಟ್ಟಿಯಲ್ಲಿ ರೋಹನ್ ಪಾಟೀಲ್ ಮುಂಚೂಣಿಯಲ್ಲಿದ್ದಾರೆ. ರೋಹನ್ ಮುಂದಿನ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾದರೂ ಅಚ್ಚರಿಯಿಲ್ಲ.
![Rohan Patil Maharaja Trophy Talent super performance by cricketer rohan patil maharaja trophy cricket 2022 ಮಹಾರಾಜ ಟ್ರೋಫಿ ಕ್ರಿಕೆಟ್ 2022 ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ 2022 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪವರ್ ಹಿಟ್ಟರ್ ರೋಹನ್ ಪಾಟೀಲ್ ಯಾರು ಮಹಾರಾಜ್ ಟ್ರೋಫಿ ಟಿ20 ಕ್ರಿಕೆಟ್ 2022 ಲೀಗ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯ](https://etvbharatimages.akamaized.net/etvbharat/prod-images/kn-bng-02-rohan-patil-maharaja-trophy-kac10035_24082022114442_2408f_1661321682_476.jpg)
ಓದಿ: ಮಹಾರಾಜ ಟ್ರೋಫಿ ಕ್ರಿಕೆಟ್ 2022.. ಅಂದು ಬಾಲ್ ಬಾಯ್.. ಇಂದು ಹೊಸ ಬ್ಯಾಟಿಂಗ್ ಬಾಯ್.. ಎಲ್ಆರ್ ಚೇತನ್ ಯಾರು