ETV Bharat / sports

ಸನ್​ರೈಸರ್ಸ್​ಗೆ​ ವಾರ್ನರ್​-ಬೈರ್ಸ್ಟೋವ್​ ಗುಡ್ ಬೈ.. ರಶೀದ್​ ಕೂಡ ಡೌಟ್​!? - ಉಮರ್ ಮಲಿಕ್

ಯುವ ಆಟಗಾರರಿಗೆ ಮಣೆ ಹಾಕಿರುವ ಸನ್​ರೈಸರ್ಸ್ ಹೈದರಾಬಾದ್​ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್​, ಜಾನಿ ಬೈರ್​ಸ್ಟೋವ್‌ರನ್ನು ತಂಡದಿಂದ ಕೈಬಿಟ್ಟಿರುವುದು ಖಚಿತವಾಗಿದೆ..

SunRisers Hyderabad leave David Warner and Jonny Bairstow
ಸನ್​ರೈಸರ್ಸ್​ ಹೈದರಾಬಾದ್​
author img

By

Published : Nov 30, 2021, 9:05 PM IST

ಹೈದರಾಬಾದ್ ​: ಸನ್​ರೈಸರ್ಸ್​ ಹೈದರಾಬಾದ್​ ಆಧಾರ ಸ್ತಂಭವಾಗಿದ್ದ ಡೇವಿಡ್​ ವಾರ್ನರ್​ ಮತ್ತು ಆರಂಭಿಕ ಬ್ಯಾಟರ್​​ ಜಾನಿ ಬೈರ್​ಸ್ಟೋವ್​ ತಮ್ಮ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ರಿಟೆನ್ಷೆನ್​ ಘೋಷಣೆಗೂ ಮುನ್ನವೇ ಇವರಿಬ್ಬರು ತಂಡದಿಂದ ಹೊರ ಬಿದ್ದಿರುವುದು ಖಚಿತವಾಗಿದೆ.

ಕಳೆದ ಕೆಲವು ವರ್ಷಗಳಿಂದ ತಂಡಕ್ಕಾಗಿ ಕೊಡುಗೆ ನೀಡಿರುವ ಎಲ್ಲಾ ಆಟಗಾರರಿಗೂ ಫ್ರಾಂಚೈಸಿ ಧನ್ಯವಾದವನ್ನು ಹೇಳಲು ಇಷ್ಟಪಡುತ್ತದೆ. ಇದು ಆಟಗಾರರಿಗೆ ಗುಡ್​ ಬೈ ಅಲ್ಲ. ನಾವು ಹರಾಜಿನಲ್ಲಿ ಮತ್ತೆ ನಮ್ಮ ಕೆಲವು ಆಟಗಾರರನ್ನು ಖರೀದಿಸಲಿದ್ದೇವೆ ಎಂದು ಸನ್​ರೈಸರ್ಸ್​ ಹೈದರಾಬಾದ್​ ಟ್ವೀಟ್ ಮಾಡಿದೆ.

2014ರಿಂದ ಫ್ರಾಂಚೈಸಿಯ ಭಾಗವಾಗಿದ್ದ ಡೇವಿಡ್ ವಾರ್ನರ್​ ಇದಕ್ಕೆ ಉತ್ತರಿಸಿದ್ದು, ಕಳೆದ ಕೆಲವು ವರ್ಷಗಳಿಂದ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಏಳು-ಬೀಳುಗಳಲ್ಲಿ ನೀವು ತೋರಿದ ಪ್ರೀತಿಗೆ ನಾನು ಮತ್ತು ತಂಡ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಮತ್ತು ಕ್ಯಾಂಡಿಸ್​( ಪತ್ನಿ) ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಬೈರ್​ಸ್ಟೋವ್​ ಕೂಡ, ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಭವಿಷ್ಯದಲ್ಲಿ ಮುಂದೆ ಎಂದಾದರೂ ಮತ್ತೆ ಒಂದಾಗೋಣ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ರಶೀದ್ ಖಾನ್ ರಿಟೈನ್​ ಸಾಧ್ಯತೆ ಕಡಿಮೆ : ವಿಶ್ವದ ಟಾಪ್ ಸ್ಪಿನ್​ ಬೌಲರ್​ಗಳಲ್ಲಿ ಒಬ್ಬರಾಗಿರುವ ರಶೀದ್ ಖಾನ್​ ಈ ಬಾರಿ ಸನ್​ರೈಸರ್ಸ್​ನಲ್ಲಿ ಉಳಿಯುವ ಸಾಧ್ಯತೆ ಕಷ್ಟವಾಗಿದೆ. ಅವರು ಫ್ರಾಂಚೈಸಿ ಮುಂದೆ ತಮ್ಮನ್ನು ಮೊದಲ ಆಟಗಾರನಾಗಿ ಉಳಿಸಿಕೊಳ್ಳುವುದಕ್ಕೆ ಬೇಡಿಕೆ ಇಟ್ಟಿದ್ದಾರೆಂದು ತಿಳಿದು ಬಂದಿದೆ.

ಆದರೆ, ಎಸ್​ಆರ್​ಹೆಚ್​ ಕೇನ್ ವಿಲಿಯಮ್ಸನ್​ರಿಗೆ ಮೊದಲ ಆದ್ಯತೆ ನೀಡಲು ಬಯಸುತ್ತಿರುವುದರಿಂದ ರಶೀದ್​ ಖಾನ್​ ತಮ್ಮ 5 ವರ್ಷಗಳ ಫ್ರಾಂಚೈಸಿಯ ಒಡನಾಟಕ್ಕೆ ತೆರೆ ಎಳೆಯಲಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಫ್ರಾಂಚೈಸಿ ಕೇನ್ ವಿಲಿಯಮ್ಸನ್​, ಅಬ್ದುಲ್ ಸಮದ್​ ಮತ್ತು ಉಮರ್​ ಮಲಿಕ್​ ಅವರನ್ನು ರಿಟೈನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:IPL Retention : ಮ್ಯಾಕ್ಸ್​ವೆಲ್, ಕೊಹ್ಲಿ ನಂತರ ಸಿರಾಜ್​ರನ್ನು ಉಳಿಸಿಕೊಳ್ಳಲು RCB ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.