ಕಾನ್ಪುರ : ಒಂದು ಸಂಪೂರ್ಣ ದಿನ ಕೈಯಲ್ಲಿ 9 ವಿಕೆಟ್ಗಳಿದ್ದರು ನ್ಯೂಜಿಲ್ಯಾಂಡ್ ತಂಡ ಗೆಲ್ಲುವ ಮನಸ್ಸು ಮಾಡದೇ, ಕೇವಲ ಡ್ರಾ ಸಾಧಿಸುವ ನಿಟ್ಟಿನಲ್ಲೇ ಆಡಿತು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಕೊನೆಯ ಕ್ಷಣದವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಭಾರತೀಯರು ಕೊನೆಯವರೆಗೂ ಮೇಲುಗೈ ಸಾಧಿಸಿದರೂ, ಕಡೆಯ 9 ಓವರ್ಗಳಲ್ಲಿ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ ಗೋಡೆಯಂತೆ ನಿಂತು ಸೋಲನ್ನು ತಪ್ಪಿಸಿದರು.
ಭಾರತ ನ್ಯೂಜಿಲ್ಯಾಂಡ್ ಮಧ್ಯೆ 2ನೇ ಇನ್ನಿಂಗ್ಸ್ ಅದ್ಭುತವಾಗಿ ಜರುಗಿತು. 5ನೇ ದಿನ ಭಾರತ ಸಂಪೂರ್ಣ ಅಧಿಪತ್ಯ ಸಾಧಿಸಿತು. ವಿಕೆಟ್ ಬೀಳುತ್ತಿದ್ದಂತೆ ಒಡತ್ತಡಕ್ಕೆ ಒಳಗಾದ ಕಿವೀಸ್ ಅವಕಾಶ ಇದ್ದರೂ ಗೆಲ್ಲುವ ಪ್ರಯತ್ನವನ್ನು ಕೈಬಿಟ್ಟು ಡ್ರಾ ಸಾಧಿಸಲು ಪ್ರಯತ್ನಿಸಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಸಂವಾದದ ವೇಳೆ ತಿಳಿಸಿದ್ದಾರೆ.
ಭಾರತ ನೀಡಿದ 284 ರನ್ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್ಗೆ 5ನೇ ದಿನ ಲಾಥಮ್ ಮತ್ತು ಸಮರ್ವಿಲ್ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾರತೀಯ ಪಾಳಯದಲ್ಲಿ ಪಂದ್ಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿತ್ತು.
ಆದರೆ, ಒಂದೆರಡು ವಿಕೆಟ್ ಕಳೆದುಕೊಂಡ ನಂತರ ಕಿವೀಸ್ ಗೆಲ್ಲುವ ಆಲೋಚನೆ ಕೈಬಿಟ್ಟು ಡ್ರಾ ಸಾಧಿಸಿದರೆ ಸಾಕು ಎನ್ನುವ ರೀತಿಯಲ್ಲಿ ಆಡಿತು ಎಂದು ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ:ಪರಿಪೂರ್ಣ ಸ್ಪಿನ್ ಬೌಲರ್ ಆಗಲು ನನಗೆ ಹರ್ಭಜನ್ ಸಿಂಗ್ ಸ್ಫೂರ್ತಿ: ಆರ್. ಅಶ್ವಿನ್