ಲಂಡನ್ : ಭಾರತದ ವಿರುದ್ಧದ 2ನೇ ಟೆಸ್ಟ್ಗೂ ಮುನ್ನ ಇಂಗ್ಲೆಂಡ್ಗೆ ಮರ್ಮಾಘಾತವಾಗಿದೆ. ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಕಾಫ್ ಇಂಜುರಿ(ಕಣಕಾಲಿನ ಹಿಂಬಾಗ)ಯಿಂದ ಬಳಲುತ್ತಿರುವುದರಿಂದ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದಾರೆ.
35 ವರ್ಷದ ಬ್ರಾಡ್ ಇಂಗ್ಲೆಂಡ್ನ 2ನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದು, 150 ಟೆಸ್ಟ್ಗಳ ಸನಿಹವಿದ್ದರು. ಇನ್ನು, 39 ವರ್ಷದ ಜೇಮ್ಸ್ ಆ್ಯಂಡರ್ಸನ್ ಕೂಡ ಗಾಯಕ್ಕೊಳಗಾಗಿದ್ದು, ಗುರುವಾರ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಆದರೆ, ಅವರ ಗಾಯದ ಬಗ್ಗೆ ಸಂಪೂರ್ಣ ಮಾಹಿತಿ ಇನ್ನು ಹೊರಬಿದ್ದಿಲ್ಲ.
-
Speedy recovery, @StuartBroad8 🙏
— England Cricket (@englandcricket) August 11, 2021 " class="align-text-top noRightClick twitterSection" data="
🏴 #ENGvIND 🇮🇳
">Speedy recovery, @StuartBroad8 🙏
— England Cricket (@englandcricket) August 11, 2021
🏴 #ENGvIND 🇮🇳Speedy recovery, @StuartBroad8 🙏
— England Cricket (@englandcricket) August 11, 2021
🏴 #ENGvIND 🇮🇳
ಇಬ್ಬರು ಹಿರಿಯ ವೇಗಿಗಳು ಗಾಯದಿಂದ ಬಳಲುತ್ತಿರುವುದರಿಂದ ಸಾದಿಕ್ ಮೊಹ್ಮೂದ್ಗೆ ಕರೆ ನೀಡಲಾಗಿದೆ. ಪ್ರಸ್ತುತ ತಂಡದಲ್ಲಿ ಮಾರ್ಕ್ವುಡ್ ಮತ್ತು ಕ್ರೈಗ್ ಓವರ್ಟನ್ ಆಂಗ್ಲರ ಮುಂದಿರುವ ಬೌಲಿಂಗ್ ಆಯ್ಕೆಯಾಗಿದ್ದಾರೆ.
ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿರುವುದರಿಂದ 2ನೇ ಟೆಸ್ಟ್ನಲ್ಲಿ ಇತ್ತಂಡಗಳು ಮುನ್ನಡೆ ಸಾಧಿಸುವುದಕ್ಕೆ ಎದುರು ನೋಡುತ್ತಿವೆ. ಆದರೆ, ಎರಡೂ ತಂಡಗಳಿಗೂ ಗಾಯದ ಸಮಸ್ಯೆ ಕಾಡುತ್ತಿದೆ. ಭಾರತ ತಂಡದಲ್ಲಿ ಶಾರ್ದೂಲ್ ಠಾಕೂರ್ ಗಾಯದಿಂದ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಈಗಾಗಲೇ ಇಂಗ್ಲೆಂಡ್ ಪ್ರಧಾನ ಆಯ್ಕೆ ವೇಗಿಗಳಾದ ಜೋಫ್ರಾ ಆರ್ಚರ್ ಮೊಣಕೈ ಗಾಯ, ಕ್ರಿಸ್ ವೋಕ್ಸ್ ಹಿಮ್ಮಡಿ ಸಂಬಂಧಿ ಗಾಯ, ಆಲ್ಲಿ ಸ್ಟೋನ್ ಬೆನ್ನು ನೋವಿನ ಕಾರಣ ಟೆಸ್ಟ್ ತಂಡದಿಂದ ಹೊರ ಬಿದ್ದಿದ್ದಾರೆ. ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ದೃಷ್ಠಿಯಿಂದ ಅನಿರ್ಧಿಷ್ಟಾವದಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಇದನ್ನು ಓದಿ : ಕನ್ಫರ್ಮ್ : ಠಾಕೂರ್ 2ನೇ ಟೆಸ್ಟ್ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ