ETV Bharat / sports

ಈ ಬಾರಿ ಐಪಿಎಲ್​ ನಿರೂಪಣೆಗೆ ಮಯಾಂತಿ ಪುನರಾಗಮನ?... ಏನಂತಿದ್ದಾರೆ ನೆಟ್ಟಿಗರು...! - ಸ್ಟುವರ್ಟ್ ಬಿನ್ನಿ ಪತ್ನಿ ಮಾಯಾಂತಿ ಲ್ಯಾಂಗರ್ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಸಖತ್​ ಸದ್ದು ಮಾಡ್ತಿದೆ. ಈ ಬಾರಿ ಐಪಿಎಲ್​ ನಿರೂಪಣೆಗೆ ಸ್ಟುವರ್ಟ್​ ಬಿನ್ನಿ ಅವರ ಪತ್ನಿ ಮಯಾಂತಿ ಪುನರಾಗಮಿಸುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ.

Stuart Binny wife is all set to come back this IPL, Stuart Binny wife Mayanti Langer news, TATA IPL 2022 news, ಸ್ಟುವರ್ಟ್ ಬಿನ್ನಿ ಪತ್ನಿ ಐಪಿಎಲ್‌ಗೆ ಮರಳಲು ಸಜ್ಜು, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಾಂತಿ ಲ್ಯಾಂಗರ್ ಸುದ್ದಿ, ಟಾಟಾ ಐಪಿಎಲ್​ 2022 ಸುದ್ದಿ,
ಈ ಬಾರಿ ಐಪಿಎಲ್​ ನಿರೂಪಣೆಗೆ ಮಯಾಂತಿ ಪುನರಾಗಮನ
author img

By

Published : Mar 23, 2022, 12:35 PM IST

ಬೆಂಗಳೂರು: ಸ್ಪಷ್ಟ ವಾಕ್ ಚಾತುರ್ಯ, ಆಕರ್ಷಕ ಧ್ವನಿ, ಗ್ಲಾಮರಸ್ ಲುಕ್ ಮತ್ತು ಕ್ರಿಕೆಟ್ ಆಟದ ಬಗೆಗಿನ ಅಪಾರ ಜ್ಞಾನದಿಂದಾಗಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಜನಪ್ರಿಯ ನಿರೂಪಕಿ ಮಯಾಂತಿ ಲ್ಯಾಂಗರ್ ಕಳೆದೆರಡು ವರ್ಷಗಳಿಂದ ಟಿವಿ ಪರದೆಯಿಂದ ಮರೆಯಾಗಿದ್ದರು. ಇದೀಗ ಐಪಿಎಲ್ 15ನೇ ಆವೃತ್ತಿಯ ಮೂಲಕ ಕ್ರಿಕೆಟ್ ಕಾರ್ಯಕ್ರಮದ ನಿರೂಪಣೆಗೆ ಮರಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಓದಿ: ಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ ತೆರಳಲಿರುವ ಒಲಂಪಿಕ್ ಚಿನ್ನದ ಹುಡುಗ 'ನೀರಜ್ ಛೋಪ್ರಾ'

ತಾಯ್ತನದಿಂದಾಗಿ ಮಯಾಂತಿ 2020-2021ರ ಕ್ರಿಕೆಟ್ ಋತುವಿನಿಂದ ಬಿಡುವು ಪಡೆದಿದ್ದರು. ಕರ್ನಾಟಕದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಪತ್ನಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಹಾಗೂ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಸೊಸೆಯಾಗಿರುವ ಮಯಾಂತಿ ಲ್ಯಾಂಗರ್ 2020ರ ಸೆಪ್ಟೆಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

2020ರ ಆರಂಭದಲ್ಲಿ ಗರ್ಭಿಣಿಯಾಗಿದ್ದ ಮಾಯಂತಿ ಕೆಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿರೂಪಕಿಯಾಗಿದ್ದರು. ಮಾಯಂತಿ ಕ್ರಿಕೆಟ್ ನಿರೂಪಣೆಗೆ ಈ ಬಾರಿಯ ಐಪಿಎಲ್​ಗೆ ಮರಳುತ್ತಾರೆ ಎನ್ನುವ ಆಶಯದೊಂದಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಮಾತು ಬಹಳ ಜೋರಾಗಿ ನಡೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.