ಬ್ರಿಡ್ಜ್‌ಟೌನ್ : ನಾಯಕ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಅವರ ಸ್ಫೋಟಕ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 507 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
150.5 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡ ಆಂಗ್ಲನ್ನರು 507 ರನ್‌ಗಳಿಸಿದ್ದಾರೆ. ಆರಂಭಿಕ ಝಾಕ್ ಕ್ರಾಲಿ ಶೂನ್ಯಕ್ಕೆ ಔಟಾದ ಬಳಿಕ ಕ್ರೀಸ್‌ಗೆ ಬಂದ ನಾಯಕ ರೂಟ್, ವಿಂಡೀಸ್ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು.
ರೂಟ್ 316 ಎಸೆತಗಳಿಂದ 14 ಬೌಂಡರಿ ಸೇರಿ 153 ರನ್ ಸಿಡಿಸಿದರು. ಆದರೆ, ಡೇನಿಯಲ್ ಲಾರೆನ್ಸ್ ಕೇವಲ 9 ರನ್‌ಗಳಿಂದ ಶತಕ ವಂಚಿತರಾದರೆ ಸ್ಟೋಕ್ಸ್ 128 ಎಸೆತಗಳನ್ನು ಎದುರಿಸಿ 6 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 120 ರನ್ ಗಳಿಸಿದರು.
ವಿಂಡೀಸ್ ಪರ ವೀರಸಮ್ಮಿ ಪರ್ಮಾಲ್ 3 ವಿಕೆಟ್ ಪಡೆದರೆ, ರೋಚ್ 2, ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್, ಜೇಸನ್ ಹೋಲ್ಡರ್ ಹಾಗೂ ನಾಯಕ ಬ್ರಾಥ್‌ವೈಟ್ ತಲಾ 1 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕೆರಿಬಿಯನ್ನರು 1 ವಿಕೆಟ್ ನಷ್ಟಕ್ಕೆ 71 ರನ್‌ಗಳಿಸಿದ್ದಾರೆ. ಮೊದಲ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿತ್ತು.
ಇದನ್ನೂ ಓದಿ: ಧೋನಿ ಜೆರ್ಸಿ ನಂಬರ್ 7 ಯಾಕೆ?.. ಗುಟ್ಟು ರಟ್ಟು ಮಾಡಿದ ಕ್ಯಾಪ್ಟನ್ ಕೂಲ್