ETV Bharat / sports

World Cup: ವಿಶ್ವಕಪ್​ ಆಯೋಜನೆ ತಪ್ಪಿದ ಮೈದಾನಕ್ಕೆ ಪರ್ಯಾಯ ಅವಕಾಶದ ಆಫರ್​ ಕೊಟ್ಟ ಜಯ್​​ ಶಾ

ವಿಶ್ವಕಪ್​ ಆಯೋಜನೆ ಆಗದಿರುವ ರಾಜ್ಯ ಕ್ರೀಡಾ ಘಟಕಗಳಿಗೆ ಬಿಸಿಸಿಐನ ಕಾರ್ಯದರ್ಶಿ ಜಯ್​ ಶಾ ಉತ್ತಮ ಆಫರ್ ಕೊಟ್ಟಿದ್ದಾರೆ.

World Cup
ವಿಶ್ವಕಪ್
author img

By

Published : Jul 2, 2023, 4:17 PM IST

ನವದೆಹಲಿ: ಈ ವರ್ಷಾಂತ್ಯಕ್ಕೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಎಂಟು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದೆ. ಭಾರತದಲ್ಲಿ ಕ್ರಿಕೆಟ್​ಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿರುವುದರಿಂದ 53 ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನಗಳು ಇವೆ. ಆದರೆ ವಿಶ್ವಕಪ್​ ಸೀಮಿತ ಮೈದಾನಗಳಲ್ಲಿ ನಡೆಯುತ್ತಿರುವುದರಿಂದ ಉಳಿದ ಮೈದಾನಗಳಿಗೆ ಅನುದಾನ ಮತ್ತು ಆಯೋಜನೆತಯಲ್ಲಿ ಅನ್ಯಾಯ ಆಗಬಾರದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಹತ್ವದ ನಿರ್ಧಾರವನ್ನು ಮಾಡಿದ್ದಾರೆ.

ಅದೇನೆಂದರೆ ಏಕದಿನ ವಿಶ್ವಕಪ್‌ಗೆ ಅವಕಾಶ ಪಡೆದಯದ ಕ್ರೀಡಾಂಗಣಗಳಿಗೆ ಮುಂಬರುವ ತವರು ಏಕದಿನ ಪಂದ್ಯಗಳ ಸರಣಿಯನ್ನು ಆಡಿಸುವ ಚಿಂತನೆ ಮಾಡಲಾಗಿದೆ. ತವರಿನಲ್ಲಿ ನಡೆಯುವ ಸರಣಿಗಳ ಪಂದ್ಯಕ್ಕೆ ವಿಶ್ವಕಪ್​ನಲ್ಲಿ ಭಾಗವಹಿಸದ ಕ್ರೀಡಾಂಗಣಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏಕದಿನ ವಿಶ್ವಕಪ್​ ಪ್ರಸ್ತಾವನೆಯಲ್ಲಿದ್ದ ದೆಹಲಿ, ಧರ್ಮಶಾಲಾ, ಚೆನ್ನೈ, ಕೋಲ್ಕತ್ತಾ, ಮುಂಬೈ, ಪುಣೆ, ಹೈದರಾಬಾದ್, ಅಹಮದಾಬಾದ್, ಬೆಂಗಳೂರು ಮತ್ತು ಲಕ್ನೋ ಮೈದಾನಗಳಲ್ಲಿ 8ಕ್ಕೆ ಬಿಸಿಸಿಐ ಒಪ್ಪಿಗೆ ನೀಡಿದೆ. ಈ ಬಗ್ಗೆ ರಾಜ್ಯ ಘಟಕಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​​ ಶಾ ಪತ್ರ ಬರೆದಿದ್ದಾರೆ. ಅಲ್ಲದೇ ವಿಶ್ವಕಪ್‌ನ ಅಭ್ಯಾಸ ಪಂದ್ಯಗಳನ್ನು ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಆಯೋಜಿಲಾಗುತ್ತಿದ್ದು, ಇಲ್ಲಿಯೂ ಮುಂಬರುವ ಋತುವಿನಲ್ಲಿ ಏಕದಿನ ಪಂದ್ಯಗಳನ್ನು ಪಂದ್ಯಗಳನ್ನು ಆಯೋಜಿಸುತ್ತದೆ ಎಂದು ತಿಳಿಸಲಾಗಿದೆ. ಈ ವಾರದ ಆರಂಭದಲ್ಲಿ ವಿಶ್ವಕಪ್ ವೇಳಾಪಟ್ಟಿ ಘೋಷಣೆಗೂ ಮುನ್ನ ಶಾ ರಾಜ್ಯ ಘಟಕಗಳನ್ನು ಭೇಟಿ ಮಾಡಿದ್ದರು.

"ನಡೆದ ಸಭೆಯ ಸಮಯದಲ್ಲಿ, 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಪಂದ್ಯಗಳ ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಾನು ಪರಿಹಾರವನ್ನು ಪ್ರಸ್ತಾಪಿಸಿದ್ದೇನೆ. ಅಭ್ಯಾಸ ಪಂದ್ಯಗಳನ್ನು ನಿಗದಿಪಡಿಸಿದ ಅಸ್ಸಾಂ ಮತ್ತು ಕೇರಳವನ್ನು ಹೊರತುಪಡಿಸಿ, ಸ್ವಯಂಪ್ರೇರಿತವಾಗಿ ತ್ಯಜಿಸಲು ನಾನು ಹೋಸ್ಟಿಂಗ್ ಅಸೋಸಿಯೇಷನ್‌ಗಳನ್ನು ವಿನಂತಿಸಿದೆ. ದ್ವಿಪಕ್ಷೀಯ ಅಂತಾರಾಷ್ಟ್ರೀಯ ಋತುವಿನಲ್ಲಿ ಏಕದಿನ ಪಂದ್ಯವನ್ನು ಆಯೋಜಿಸಲು ಅವರಿಗೆ ಮೊದಲ ಆದ್ಯತೆ ಕೊಡಲಾಗುವುದು. ಕ್ರಿಕೆಟ್ ವಿಶ್ವಕಪ್‌ನ ಪಂದ್ಯ ಆಯೋಜಿಸುವುದನ್ನು ತಪ್ಪಿಸಿದ ರಾಜ್ಯ ಸಂಘಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮುಂದಿಡಲಾಗಿದೆ. ಪ್ರಸ್ತಾವನೆಯು ಎಲ್ಲಾ ಭಾಗವಹಿಸುವ ಸಂಘಗಳಿಂದ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ" ಎಂದು ಶಾ ತಿಳಿಸಿದ್ದಾರೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. ಹೈದರಾಬಾದ್ ಹೊರತುಪಡಿಸಿ, ಎಲ್ಲಾ ಪ್ರಮುಖ ಕ್ರೀಡಾಂಗಣಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್​ನ ತಲಾ ಐದು ಪಂದ್ಯಗಳು ನಡೆಯಲಿದೆ. ಹೈದರಾಬಾದ್ ಮೈದಾನದಲ್ಲಿ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಎರಡು ಪಂದ್ಯದಲ್ಲಿ ಪಾಕಿಸ್ತಾನ ಅಭ್ಯಾಸ ನಡೆಸಲಿದೆ.

ಭಾರತ ಚೆನ್ನೈ, ದೆಹಲಿ, ಅಹಮದಾಬಾದ್,​ ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನ ಮೈದಾನಲ್ಲಿ ಪಂದ್ಯಗಳನ್ನು ಆಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್​ನ ಏಕದಿನ ಪಂದ್ಯ ಅಕ್ಟೋಬರ್​ 15 ರಂದು ಭಾನುವಾರ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: Shreyanka Patil: ಸೀನಿಯರ್​ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನವೇ ವಿದೇಶಿ ಲೀಗ್ ಒಪ್ಪಂದ.. ದಾಖಲೆ ಬರೆದ ಶ್ರೇಯಾಂಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.